/newsfirstlive-kannada/media/post_attachments/wp-content/uploads/2024/10/Surya_New.jpg)
ಇಂದು ಗ್ವಾಲಿಯರ್ ಇಂಟರ್ ನ್ಯಾಷನಲ್ ಸ್ಟೇಡಿಯಮ್ನಲ್ಲಿ ನಡೆದ ಮಹತ್ವದ ಟಿ20 ಪಂದ್ಯದಲ್ಲಿ ಬಾಂಗ್ಲಾದೇಶದ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಬರೋಬ್ಬರಿ 7 ವಿಕೆಟ್ಗಳ ಗೆಲುವು ಸಾಧಿಸಿದೆ.
ಕ್ಯಾಪ್ಟನ್ ಸೂರ್ಯ ಏನಂದ್ರು?
ಟೀಮ್ ಇಂಡಿಯಾ ಭರ್ಜರಿ ಗೆಲುವಿನ ಬಳಿಕ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮಾತಾಡಿದ್ರು. ನಾವು ನಮ್ಮ ಕೌಶಲ್ಯವನ್ನು ನಂಬಿದ್ದೇವೆ. ಟೀಮ್ ಮೀಟಿಂಗ್ನಲ್ಲಿ ಏನು ಪ್ಲಾನ್ ಮಾಡಿದ್ದೇವೋ ಅದನ್ನೇ ಎಕ್ಸಿಗ್ಯೂಟ್ ಮಾಡಿದ್ದೇವೆ. ನಾವು ಬ್ಯಾಟ್ ಮತ್ತು ಬೌಲಿಂಗ್ ಮಾಡಿದ ರೀತಿ ಅದ್ಭುತ ಎಂದರು.
ತಂಡದಲ್ಲಿ ಹೆಚ್ಚು ಬೌಲಿಂಗ್ ಆಪ್ಷನ್ ಇರೋದು ಯಾವಾಗಲೂ ಒಳ್ಳೆಯದು. ಸಾಕಾಷ್ಟು ಇಂಪ್ರೂವ್ ಮಾಡಿಕೊಳ್ಳಬೇಕಾದ ಅಗತ್ಯ ಇದೆ. ಇದರ ಜೊತೆಗೆ ನಿತ್ಯ ಕಲಿಯೋದು ಇದ್ದಿದ್ದೇ. ಪಂದ್ಯದ ಗೆಲುವು ತಂಡದ ಪ್ರತಿಯೊಬ್ಬ ಆಟಗಾರ ಕಾರಣ ಎಂದರು.
ಬಾಂಗ್ಲಾ ಬೌಲರ್ಸ್ ಬೆವರಿಳಿಸಿದ ಭಾರತ
ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿಯನ್ನು ಬೆನ್ನತ್ತಿದ ಟೀಮ್ ಇಂಡಿಯಾ ಪರ ಓಪನರ್ಸ್ ಆಗಿ ಬಂದ ಸಂಜು ಸ್ಯಾಮ್ಸನ್, ಅಭಿಷೇಕ್ ಶರ್ಮಾ ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ ಮಾಡಿದ್ರು. ಸಂಜು ಸ್ಯಾಮ್ಸನ್ ತಾನು ಎದುರಿಸಿದ 19 ಬಾಲ್ನಲ್ಲಿ 6 ಫೋರ್ ಸಮೇತ 29 ರನ್ ಚಚ್ಚಿದ್ರು. ಇವರಿಗೆ ಸಾಥ್ ಕೊಟ್ಟ ಅಭಿಷೇಕ್ ಕೇವಲ 7 ಬಾಲ್ನಲ್ಲಿ 1 ಸಿಕ್ಸರ್, 2 ಫೋರ್ ಸಮೇತ 16 ರನ್ ಸಿಡಿಸಿದ್ರು.
ಬಳಿಕ ಬಂದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕೂಡ ಅಬ್ಬರಿಸಿದ್ರು. 14 ಬಾಲ್ನಲ್ಲಿ 3 ಸಿಕ್ಸರ್, 2 ಫೋರ್ ಸಮೇತ 29 ರನ್ ಚಚ್ಚಿದ್ರು. ನಿತೀಶ್ ರೆಡ್ಡಿ 15 ರನ್ ಕಲೆ ಹಾಕಿದ್ರು. ಬಿರುಸಿನ ಬ್ಯಾಟಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 16 ಬಾಲ್ನಲ್ಲಿ 2 ಸಿಕ್ಸರ್, 5 ಫೋರ್ನೊಂದಿಗೆ 39 ರನ್ ಬಾರಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ