/newsfirstlive-kannada/media/post_attachments/wp-content/uploads/2024/10/Surya_New.jpg)
ರಾಜ್​ಕೋಟ್​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 3ನೇ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಹೀನಾಯ ಸೋಲು ಕಂಡಿದೆ. ಇಂಗ್ಲೆಂಡ್​ ನೀಡಿದ 172 ರನ್​ಗಳ ಗುರಿ ಬೆನ್ನತ್ತಿದ ಟೀಮ್​ ಇಂಡಿಯಾ 20 ಓವರ್​ನಲ್ಲಿ 9 ವಿಕೆಟ್​ ನಷ್ಟಕ್ಕೆ ಕೇವಲ 145 ರನ್​ ಗಳಿಸಿದೆ. ಈ ಮೂಲಕ 26 ರನ್​​ಗಳಿಂದ ಸೋತಿದೆ.
ಕ್ಯಾಪ್ಟನ್​ ಸೂರ್ಯ ಏನಂದ್ರು?
ಟೀಮ್​ ಇಂಡಿಯಾ ಸೋಲಿನ ಬಗ್ಗೆ ಕ್ಯಾಪ್ಟನ್​ ಸೂರ್ಯಕುಮಾರ್​ ಯಾದವ್​ ಮಾತಾಡಿದ್ದಾರೆ. ನಾವು ಗೆಲ್ಲಬೇಕಿದ್ದ ಮ್ಯಾಚ್​ ಇದು. ಆದರೆ, ಟೀಮ್​ ಇಂಡಿಯಾದ ಬ್ಯಾಟರ್​ಗಳು ಸರಿಯಾಗಿ ಆಡಲಿಲ್ಲ. ಅಕ್ಷರ್​ ಪಟೇಲ್​​, ಹಾರ್ದಿಕ್​ ಪಾಂಡ್ಯ ಕ್ರೀಸ್​ನಲ್ಲಿ ಇರೋವರೆಗೂ ಗೆಲ್ಲುತ್ತೇವೆ ಎಂದು ಭಾವಿಸಿದ್ದೆವು. ಮ್ಯಾಚ್​​ ನಮ್ಮ ಕೈಯಲ್ಲೇ ಇತ್ತು. ಆದರೆ, ನಾವು ಸೋತೆವು. ಇದಕ್ಕೆ ಕಾರಣ ಆದಿಲ್​ ರಶೀದ್​​ ಎಂದರು.
ಇಂಗ್ಲೆಂಡ್​ ತಂಡದ ಗೆಲುವಿನ ಕ್ರೆಡಿಟ್​ ರಶೀದ್​ಗೆ ಸಲ್ಲಬೇಕು. ಇವರು ನಮ್ಮನ್ನು ಸ್ಟ್ರೈಕ್​​ ರೊಟೇಟ್​ ಮಾಡಲು ಬಿಡಲೇ ಇಲ್ಲ. ನಮ್ಮಲ್ಲೂ ಸಾಕಷ್ಟು ಸ್ಪಿನ್ನರ್ಸ್​ ಇದ್ರು. ಈ ಪಂದ್ಯದಿಂದ ಸಾಕಷ್ಟು ಕಲಿತಿದ್ದೇವೆ ಎಂದರು.
ಭಾರತ ತಂಡದ ಪರ ಓಪನರ್​ ಆಗಿ ಬಂದ ಸಂಜು ಸ್ಯಾಮ್ಸನ್​​ ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದ್ರು. ಬಳಿಕ ಅಬ್ಬರಿಸಿದ ಅಭಿಷೇಕ್​ ಶರ್ಮಾ 14 ಬಾಲ್​ನಲ್ಲಿ 5 ಫೋರ್​ ಸಮೇತ 24 ರನ್​​ ಸಿಡಿಸಿದ್ರು. ಬಳಿಕ ಕ್ಯಾಚ್​ ನೀಡಿ ಮೈದಾನದಿಂದ ಹೊರ ನಡೆದರು.
ಕ್ಯಾಪ್ಟನ್​ ಸೂರ್ಯಕುಮಾರ್​ 3ನೇ ಟಿ20 ಪಂದ್ಯದಲ್ಲೂ ಬ್ಯಾಟಿಂಗ್​ ವೈಫಲ್ಯ ಅನುಭವಿಸಿದ್ರು. ಸೂರ್ಯ 14, ತಿಲಕ್​ ವರ್ಮಾ 18 ರನ್​ಗೆ ಔಟಾದ್ರು.
ಹಾರ್ದಿಕ್​ ಪಾಂಡ್ಯ ಏಕಾಂಗಿ ಹೋರಾಟ
ಬ್ಯಾಂಕ್​ ಟು ಬ್ಯಾಕ್​​ ವಿಕೆಟ್​ ಕಳೆದುಕೊಂಡು ಸಂಕಷ್ಟದಲ್ಲಿದ್ದ ಭಾರತ ತಂಡಕ್ಕೆ ಆಸರೆ ಆಗಿದ್ದು ಹಾರ್ದಿಕ್​ ಪಾಂಡ್ಯ. ವಿಕೆಟ್​ ಕಾದು ತಾಳ್ಮೆಯಿಂದ ಬ್ಯಾಟ್​ ಬೀಸಿದ ಹಾರ್ದಿಕ್​ ಪಾಂಡ್ಯ 1 ಫೋರ್​, 2 ಸಿಕ್ಸರ್​ ಸಮೇತ 40 ರನ್​ ಸಿಡಿಸಿ ಔಟಾದ್ರು. ಅಕ್ಷರ್​ ಪಟೇಲ್​ 15, ವಾಷಿಂಗ್ಟನ್​ ಸುಂದರ್​ 6, ಶಮಿ 7, ಜುರೆಲ್​ 2, ಬಿಷ್ಣೋಯ್​ 4, ವರುಣ್​ ಚಕ್ರವರ್ತಿ 2 ರನ್​ ಗಳಿಸಿದ್ರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us