/newsfirstlive-kannada/media/post_attachments/wp-content/uploads/2024/07/SURYAKUMAR-YADAV-4.jpg)
ಕೋಲ್ಕತ್ತಾದ ಈಡನ್ ಗಾರ್ಡನ್ನಲ್ಲಿ ನಡೆದ ಮೊದಲ ಟಿ20 ಪಂದ್ಯದಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ ಗೆದ್ದು ಬೀಗಿದೆ. ಇಂಗ್ಲೆಂಡ್ ನೀಡಿದ 132 ರನ್ಗಳ ಸಾಧಾರಣ ಗುರಿಯನ್ನು ಭಾರತ ತಂಡ ಕೇವಲ 12.5 ಓವರ್ನಲ್ಲಿ ತಲುಪಿದೆ. ಈ ಮೂಲಕ 7 ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
ಕ್ಯಾಪ್ಟನ್ ಸೂರ್ಯಕುಮಾರ್ ಏನಂದ್ರು?
ಇನ್ನು, ಟೀಮ್ ಇಂಡಿಯಾ ಗೆದ್ದ ಬಳಿಕ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಮಾತಾಡಿದ್ರು. ಈ ಪಂದ್ಯದಲ್ಲಿ ಟಾಸ್ ನಿರ್ಣಾಯಕ ಪಾತ್ರವಹಿಸಿದೆ. ನಾವು ಪಂದ್ಯದ ಆರಂಭದಲ್ಲೇ ಒಂದು ಬೆಂಚ್ ಮಾರ್ಕ್ ಸೆಟ್ ಮಾಡಿದ್ದೆವು. ಎಲ್ಲಾ ಬೌಲರ್ಗಳನ್ನು ತಮ್ಮ ಪ್ಲಾನ್ ಸರಿಯಾಗಿ ಎಕ್ಸಿಗ್ಯೂಟ್ ಮಾಡಿದರು ಎಂದರು.
ನಾವು ಮೂರು ಸ್ಪಿನ್ನರ್ಗಳು ಆಡಿಸಿದೆವು. ನಮ್ಮ ಸ್ಟ್ರೆಂಥ್ ಏನು ಎಂದು ನಮಗೆ ಗೊತ್ತಿತ್ತು. ಮೂವರು ಸ್ಪಿನ್ನರ್ಗಳು ಉತ್ತಮವಾಗಿ ಬೌಲಿಂಗ್ ಮಾಡಿದರು. ವರುಣ್ ಚಕ್ರವರ್ತಿ ಒಳ್ಳೆಯ ಬೌಲಿಂಗ್ ಮಾಡಿದ್ದು, ತಂಡಕ್ಕೆ ಪ್ಲಸ್. ಆತನ ತಯಾರಿ ಯಾವಾಗಲೂ ಚೆನ್ನಾಗಿ ಇರುತ್ತದೆ. ಅರ್ಷ್ದೀಪ್ ಸಿಂಗ್ ಕೂಡ ತನ್ನ ಕ್ಷಮತೆಯನ್ನು ಪ್ರದರ್ಶಿಸಿದ. ಗೌತಮ್ ಗಂಭೀರ್ ನಮಗೆ ಸಾಕಷ್ಟು ಫ್ರೀಡಮ್ ಕೊಟ್ಟಿದ್ದಾರೆ. ಇದು ಗೆಲುವಿಗೆ ಕಾರಣ ಎಂದರು.
ಟೀಮ್ ಇಂಡಿಯಾ ಪರ ಓಪನಿಂಗ್ ಮಾಡಿದ ಸಂಜು ಸ್ಯಾಮ್ಸನ್ 20 ಬಾಲ್ನಲ್ಲಿ 4 ಫೋರ್, 1 ಸಿಕ್ಸರ್ ಸಮೇತ 26 ರನ್ ಸಿಡಿಸಿ ಪೆವಿಲಿಯನ್ ಸೇರಿದರು. ಬಳಿಕ ಅಬ್ಬರಿಸಿದ ಅಭಿಷೇಕ್ ಶರ್ಮಾ ಇನ್ನಿಂಗ್ಸ್ ಉದ್ಧಕ್ಕೂ ಇಂಗ್ಲೆಂಡ್ ಬೌಲರ್ಗಳ ಬೆಂಡೆತ್ತಿದ್ರು.
ಅಭಿಷೇಕ್ ಅಬ್ಬರದ ಬ್ಯಾಟಿಂಗ್
ಯುವರಾಜ್ ಸಿಂಗ್ ಬಳಿಕ ಇಂಗ್ಲೆಂಡ್ ವಿರುದ್ಧ ವೇಗದ ಅರ್ಧಶತಕ ಗಳಿಸಿದ ಏಕೈಕ ಬ್ಯಾಟರ್ ಅಭಿಷೇಕ್ ಶರ್ಮಾ. ಆರಂಭದಿಂದಲೇ ಅಬ್ಬರಿಸಿದ ಅಭಿಷೇಕ್ ಶರ್ಮಾ ಕೇವಲ 34 ಬಾಲ್ನಲ್ಲಿ ಬರೋಬ್ಬರಿ 8 ಸಿಕ್ಸರ್, 5 ಫೋರ್ ಸಮೇತ 79 ರನ್ ಚಚ್ಚಿದ್ರು. ಇವರ ಬ್ಯಾಟಿಂಗ್ ಸ್ಟ್ರೈಕ್ ರೇಟ್ ಬರೋಬ್ಬರಿ 230ಕ್ಕೂ ಹೆಚ್ಚಿತ್ತು. ತಿಲಕ್ ವರ್ಮಾ 19 ರನ್ ಕಲೆ ಹಾಕಿದರು. ಟೀಮ್ ಇಂಡಿಯಾ 3 ವಿಕೆಟ್ ನಷ್ಟಕ್ಕೆ 12.5 ಓವರ್ನಲ್ಲಿ 133 ರನ್ ಗಳಿಸಿ ಗೆದ್ದು ಬೀಗಿದೆ. ಭಾರತದ ಪರ ಅರ್ಷದೀಪ್ ಸಿಂಗ್ 2, ವರುಣ್ ಚಕ್ರವರ್ತಿ 3, ಹಾರ್ದಿಕ್ ಪಾಂಡ್ಯ, ಅಕ್ಷರ್ ಪಟೇಲ್ ತಲಾ 2 ವಿಕೆಟ್ ಪಡೆದರು.
ಇದನ್ನೂ ಓದಿ:ಅಭಿಷೇಕ್ ಶರ್ಮಾ ಅಬ್ಬರದ ಬ್ಯಾಟಿಂಗ್; ಇಂಗ್ಲೆಂಡ್ ವಿರುದ್ಧ ಭಾರತಕ್ಕೆ ರೋಚಕ ಗೆಲುವು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ