‘ಟೀಮ್​ ಇಂಡಿಯಾದ ಸೋಲಿಗೆ ಇವರೇ ಕಾರಣ’- ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್​ ಸೂರ್ಯ

author-image
Ganesh Nachikethu
Updated On
ಯಾರೂ ನಿರೀಕ್ಷೆ ಮಾಡಿರದ ನಿರ್ಧಾರ ತೆಗೆದುಕೊಂಡ ಸೂರ್ಯ, ಟೀಂ ಇಂಡಿಯಾದ ಸ್ಟಾರ್ಸ್​ಗೆ ಬಿಗ್ ಶಾಕ್..!
Advertisment
  • ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಮಧ್ಯೆ 2ನೇ ಟಿ20
  • ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾಗೆ ಸೋಲು
  • ಭಾರತದ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಸೂರ್ಯ

ಇತ್ತೀಚೆಗೆ ನಡೆದ ಟಿ20 ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾ ಸೋತಿದೆ. ಸೌತ್​ ಆಫ್ರಿಕಾ ಗೆದ್ದ ಕಾರಣ 4 ಪಂದ್ಯಗಳ ಸರಣಿ 1-1ರಲ್ಲಿ ಸಮಬಲಗೊಂಡಿದೆ. ಕಳೆದ 11 ಪಂದ್ಯಗಳಿಂದ ಗೆಲುವಿನ ಓಟ ಮುಂದುವರಿಸಿದ್ದ ಟೀಮ್​​​ ಇಂಡಿಯಾಗೆ ಬ್ರೇಕ್​ ಬಿದ್ದಿದೆ.

ಟಾಸ್​ ಸೋತ್ರೂ ಫಸ್ಟ್​ ಬ್ಯಾಟಿಂಗ್​ ಮಾಡಿದ ಟೀಮ್​​ ಇಂಡಿಯಾ ನಿಗದಿತ 20 ಓವರ್​​ನಲ್ಲಿ ಕೇವಲ 124 ರನ್​​ ಕಲೆ ಹಾಕಿ ಸಾಧಾರಣ ಟಾರ್ಗೆಟ್​ ನೀಡಿತ್ತು. ಭಾರತ ತಂಡದ ಸಾಧಾರಣ ಟಾರ್ಗೆಟ್​ ಬೆನ್ನತ್ತಿದ ಸೌತ್​ ಆಫ್ರಿಕಾ ವರುಣ್​​ ಚಕ್ರವರ್ತಿ ಬೌಲಿಂಗ್​ ಮಧ್ಯೆಯೂ ಗೆದ್ದು ಬೀಗಿದೆ. ವರುಣ್​​ ಚಕ್ರವರ್ತಿ ಬ್ಯಾಕ್​ ಟು ಬ್ಯಾಕ್​​​ 5 ವಿಕೆಟ್​​ ಭಾರತವನ್ನು ಗೆಲ್ಲಿಸಲು ಯತ್ನಿಸಿದ್ರು. ಇದರ ಹೊರತಾಗಿಯೂ ಟೀಮ್​ ಇಂಡಿಯಾ ಸೋಲಬೇಕಾಯ್ತು.

ಸೋಲಿನ ಸುಳಿಯಲ್ಲಿ ಸಿಲುಕಿದ್ದ ಸೌತ್​ ಆಫ್ರಿಕಾ

ವರುಣ್ ಚಕ್ರವರ್ತಿ ಸ್ಪಿನ್ ದಾಳಿಗೆ ತತ್ತರಿಸಿ ದಕ್ಷಿಣ ಆಫ್ರಿಕಾ ಒಂದು ಹಂತದಲ್ಲಿ ಸೋಲಿನ ಸುಳಿಯಲ್ಲಿ ಸಿಲುಕಿಕೊಂಡಿತ್ತು. ಕೇವಲ 86 ರನ್​ಗೆ ಬರೋಬ್ಬರಿ 7 ವಿಕೆಟ್​ ಕಳೆದುಕೊಂಡಿತ್ತು. ಆದರೆ, ಈ ಹೊತ್ತಲ್ಲಿ ಅದ್ಭುತ ಬ್ಯಾಟಿಂಗ್​ ಮಾಡಿದ ಟ್ರಿಸ್ಟಾನ್ ಸ್ಟಬ್ಸ್ ಅಜೇಯ 47 ರನ್ ಗಳಿಸಿ ತಂಡಕ್ಕೆ ಗೆಲುವು ತಂದುಕೊಟ್ಟರು.

ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್​ ಸೂರ್ಯ

ಪಂದ್ಯದ ಬಳಿಕ ಮಾತನಾಡಿದ ಟೀಮ್ ಇಂಡಿಯಾ ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್, ನೀವು ಎಷ್ಟು ರನ್ ಕಲೆ ಹಾಕಿದ್ರೂ ಗೆಲ್ಲಲು ಯತ್ನಿಸಲೇಬೇಕು. ಟಿ20ಯಲ್ಲಿ 125-140 ರನ್​​ ಗಳಿಸೋದು ನಮ್ಮ ಟಾರ್ಗೆಟ್​ ಅಲ್ಲ. ಆದರೆ, ಟೀಮ್​ ಇಂಡಿಯಾ ಬೌಲರ್ಸ್​​ ನಮಗೆ ಹೆಮ್ಮೆ ಇದೆ ಎಂದರು.

ಟಿ20 ಕ್ರಿಕೆಟ್‌ನಲ್ಲಿ 125 ರನ್‌ ಡಿಫೆಂಡ್ ಮಾಡುವಾಗ 5 ವಿಕೆಟ್ ಪಡೆಯುವುದು ಸಾಮಾನ್ಯವಲ್ಲ. ವರುಣ್​​ ಚಕ್ರವರ್ತಿ ಒಂದು ಅವಕಾಶಕ್ಕಾಗಿ ಕಾಯುತ್ತಿದ್ರು. 2021ರಲ್ಲಿ ಟೀಮ್ ಇಂಡಿಯಾದಿಂದ ಹೊರಗುಳಿದಿದ್ದ ವರುಣ್ ಭರ್ಜರಿ ಕಮ್​ಬ್ಯಾಕ್​ ಮಾಡುತ್ತಿದ್ದಾರೆ. ಟೀಮ್​ ಇಂಡಿಯಾ ಸೋಲಿಗೆ ನಾವು ಬ್ಯಾಟರ್ಸ್​ ಕಾರಣ ಎಂದರು ಸೂರ್ಯ.

ಇದನ್ನೂ ಓದಿ: RCB ಉಳಿಸಿಕೊಳ್ಳೋ ಇನ್ನೂ ಮೂವರು ಆಟಗಾರರು ಇವ್ರೇ! ಲಿಸ್ಟ್​ನಲ್ಲಿ ಅಚ್ಚರಿ ಹೆಸ್ರುಗಳು

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment