ಟೀಮ್​​ ಇಂಡಿಯಾ ಸೆಂಚೂರಿ ಸ್ಟಾರ್​ ಕಮ್​ಬ್ಯಾಕ್​​; ಭಾರತಕ್ಕೆ ಬಂತು ಆನೆಬಲ!

author-image
Ganesh Nachikethu
Updated On
2024ರ ಟಿ20 ವಿಶ್ವಕಪ್​​.. ಟೀಮ್​ ಇಂಡಿಯಾಗೆ ಬಂತು ಆನೆಬಲ!
Advertisment
  • ಮುಂದಿನ ವಾರದಿಂದಲೇ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿ
  • ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಟೀಮ್​ ಇಂಡಿಯಾ ಪ್ರಕಟ!
  • ಅಳೆದು ತೂಗಿ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟಿಸಿದ ಬಿಸಿಸಿಐ ಆಯ್ಕೆದಾರರು

ಮುಂದಿನ ವಾರ ಎಂದರೆ ಅಕ್ಟೋಬರ್​​​ 6ನೇ ತಾರೀಕಿನಿಂದ 12 ರವರೆಗೆ ಭಾರತ ಮತ್ತು ಬಾಂಗ್ಲಾದೇಶ ನಡುವಿನ ಟಿ20 ಸರಣಿ ನಡೆಯಲಿದೆ. ಬಾಂಗ್ಲಾದೇಶ ವಿರುದ್ಧ 3 ಪಂದ್ಯಗಳ ಟಿ20 ಸರಣಿಗೆ ಈಗಾಗಲೇ ಅಳೆದು ತೂಗಿ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಮಾಡಲಾಗಿದೆ.

ಕ್ಯಾಪ್ಟನ್​ ಸೂರ್ಯಕುಮಾರ್ ಯಾದವ್ ನೇತೃತ್ವದ 15 ಸದಸ್ಯರ ಭಾರತ ತಂಡವನ್ನು ಆಯ್ಕೆಗಾರರು ಪ್ರಕಟಿಸಿದ್ದಾರೆ. ವಿಕೆಟ್ ಕೀಪರ್ ರಿಷಬ್ ಪಂತ್ ವಿಶ್ರಾಂತಿ ನೀಡಿದ್ದು, ಸಂಜು ಸ್ಯಾಮ್ಸನ್ ಮತ್ತು ಜಿತೇಶ್ ಶರ್ಮಾ ವಿಕೆಟ್ ಕೀಪರ್‌ಗಳಾಗಿ ಆಯ್ಕೆ ಮಾಡಲಾಗಿದೆ.

ಇನ್ನು, ಇರಾನಿ ಕಪ್‌ನಲ್ಲಿ ನಿರತರಾಗಿರೋ ಋತುರಾಜ್ ಗಾಯಕ್ವಾಡ್​​, ಇಶಾನ್​ ಕಿಶನ್​ಗೂ ಅವಕಾಶ ನೀಡಿಲ್ಲ. ಟೆಸ್ಟ್ ಸರಣಿಯಾಡಿರೋ ಶುಭ್ಮನ್​​ ಗಿಲ್​ಗೆ ವಿಶ್ರಾಂತಿ ನೀಡಲಾಗಿದೆ. ಯಶಸ್ವಿ ಜೈಸ್ವಾಲ್ ಬದಲಿಗೆ ಅಭಿಷೇಕ್​ ಶರ್ಮಾ ಅವರನ್ನು ಸೆಲೆಕ್ಟ್​ ಮಾಡಲಾಗಿದೆ.

ಆಲ್​ರೌಂಡರ್​ಗಳಾಗಿ ಹಾರ್ದಿಕ್ ಪಾಂಡ್ಯ, ಶಿವಂ ದುಬೆ ಹಾಗೂ ನಿತೀಶ್ ಕುಮಾರ್ ರೆಡ್ಡಿ ಸ್ಥಾನ ಪಡೆದುಕೊಂಡಿದ್ದಾರೆ. ಕೆಕೆಆರ್ ವೇಗಿ ಹರ್ಷಿತ್ ರಾಣಾ ಕೂಡ ಸ್ಥಾನ ಬಾಂಗ್ಲಾ ಸರಣಿಯಲ್ಲಿ ಅವಕಾಶ ಪಡೆದಿದ್ದಾರೆ. ಹರ್ಷಿತ್ ಜತೆಗೆ ಅರ್ಷದೀಪ್ ಸಿಂಗ್ ವೇಗದ ಬೌಲಿಂಗ್ ಜವಾಬ್ದಾರಿ ಹೊರಲಿದ್ದಾರೆ. ಭಾರತ ಅಕ್ಟೋಬರ್ 6 ರಿಂದ ಬಾಂಗ್ಲಾದೇಶ ವಿರುದ್ಧ 3 ಟಿ20 ಪಂದ್ಯಗಳ ಸರಣಿಯನ್ನು ಆಡಲಿದೆ.

ಸೆಂಚೂರಿ ಸಿಡಿಸಿದ್ದ ಅಭಿಶೇಕ್​!

ಈ ಹಿಂದೆ ಜಿಂಬಾಬ್ವೆ ವಿರುದ್ಧದ ಐದು ಪಂದ್ಯಗಳ ಟಿ20 ಕ್ರಿಕೆಟ್‌ ಸರಣಿಯ 2ನೇ ಪಂದ್ಯದಲ್ಲಿ ಸ್ಪೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದ್ದ 23 ವರ್ಷದ ಎಡಗೈ ಬ್ಯಾಟರ್‌ ಅಭಿಷೇಕ್‌ ಶರ್ಮಾ ಅಬ್ಬರಿಸಿದ್ರು. ಕೇವಲ 46 ಎಸೆತಗಳಲ್ಲಿ 100 ರನ್‌ ಸಿಡಿಸಿದ್ರು. ಈ ಪೈಕಿ 7 ಫೋರ್‌ ಮತ್ತು 8 ಸಿಕ್ಸರ್‌ ಬಾರಿಸಿದರು. ಹ್ಯಾಟ್ರಿಕ್ ಸಿಕ್ಸರ್‌ ಸಿಡಿಸಿ ಶತಕ ಪೂರೈಸಿದ ಅಭಿಷೇಕ್‌ ಭಾರತದ ಪರ ಟಿ20-ಐ ಕ್ರಿಕೆಟ್‌ನಲ್ಲಿ ನಾಲ್ಕನೇ ಅತಿ ವೇಗದ ಶತಕ ತಮ್ಮದಾಗಿಸಿಕೊಂಡರು.

ಇದನ್ನೂ ಓದಿ:ಟೀಮ್​ ಇಂಡಿಯಾದಲ್ಲಿ ರೋಹಿತ್​​ ಆಪ್ತನಿಗೆ ಮೋಸ; ಯುವ ಕ್ರಿಕೆಟರ್​​ ಕರಿಯರ್​​ ಮುಗಿಯಿತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment