/newsfirstlive-kannada/media/post_attachments/wp-content/uploads/2025/01/CHAHAL-1.jpg)
ಟೀಮ್ ಇಂಡಿಯಾದಿಂದ ಹಲವು ದಿನಗಳಿಂದ ದೂರ ಉಳಿದಿರೋ ಬಲಗೈ ಸ್ಪಿನ್ನರ್ ಯುಜ್ವೇಂದ್ರ ಚಹಾಲ್ ದೊಡ್ಡ ನಿರ್ಧಾರವೊಂದು ತೆಗೆದುಕೊಂಡಿದ್ದಾರೆ. 2024ರ ಟಿ20 ವಿಶ್ವಕಪ್ ನಂತರ ಟೀಮ್ ಇಂಡಿಯಾದಲ್ಲಿ ಆಡಲು ಚಹಾಲ್ಗೆ ಯಾವುದೇ ಅವಕಾಶ ಸಿಕ್ಕೇ ಇಲ್ಲ. ಹಾಗಾಗಿ ಇವರು ಹೊರ ದೇಶಕ್ಕೆ ಹೋಗಿ ಕ್ರಿಕೆಟ್ ಆಡುವ ನಿರ್ಧಾರಕ್ಕೆ ಬಂದಿದ್ದಾರೆ.
ಚಹಾಲ್ ಮಹತ್ವದ ನಿರ್ಧಾರ
ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ಆಡಲು ಚಹಾಲ್ ಮಹತ್ವದ ನಿರ್ಧಾರ ತೆಗೆದುಕೊಂಡಿದ್ದಾರೆ. ಇವರು 2025ರ ಕೌಂಟಿ ಚಾಂಪಿಯನ್‌ಶಿಪ್‌ನಲ್ಲಿ ನಾರ್ಥಾಂಪ್ಟನ್‌ಶೈರ್ ತಂಡವನ್ನು ಪ್ರತಿನಿಧಿಸಲಿದ್ದಾರೆ. ಐಪಿಎಲ್ ಮುಗಿದ ಕೂಡಲೇ ಇವರು ನಾರ್ಥಾಂಪ್ಟನ್‌ಶೈರ್ ತಂಡ ಸೇರಿಕೊಳ್ಳಲಿದ್ದು, ಕೌಂಟಿ ಚಾಂಪಿಯನ್‌ಶಿಪ್ ಮತ್ತು ಏಕದಿನ ಕಪ್‌ನಲ್ಲಿ ಭಾಗಿಯಾಗಲಿದ್ದಾರೆ. ಈ ಟೂರ್ನಮೆಂಟ್ ಮುಂದಿನ ಜೂನ್ 22ನೇ ತಾರೀಕಿನಿಂದ ಶುರುವಾಗಲಿದೆ.
ಕಳೆದ ವರ್ಷವೂ ಕೌಂಟಿ ಚಾಂಪಿಯನ್‌ಶಿಪ್ ಮತ್ತು ಏಕದಿನ ಕಪ್‌ನಲ್ಲಿ ಚಹಾಲ್ ಭಾಗವಹಿಸಿದ್ದರು. ತಮ್ಮ ಮೊದಲ ಪಂದ್ಯದಲ್ಲೇ 5 ವಿಕೆಟ್ ತೆಗೆದು ಮಿಂಚಿದ್ದರು. ಇದಾದ ಬಳಿಕ ನಡೆದ ಪಂದ್ಯದಲ್ಲಿ 9 ವಿಕೆಟ್ ಕಬಳಿಸಿ ದಾಖಲೆ ಬರೆದಿದ್ದರು.
ಈ ಬಗ್ಗೆ ಏನಂದ್ರು ಚಹಾಲ್?
ಇಂಗ್ಲೆಂಡ್ ಕೌಂಟಿ ಕ್ರಿಕೆಟ್ ನಾನು ಸಖತ್ ಎಂಜಾಯ್ ಮಾಡಿದ್ದೇನೆ. ಮತ್ತೆ ಕೌಂಟಿ ಕ್ರಿಕೆಟ್ಗೆ ವಾಪಸ್ ಹೋಗಲು ಖುಷಿ ಇದೆ. ಡ್ರೆಸ್ಸಿಂಗ್ ರೂಮ್ನಲ್ಲಿ ಕೆಲವು ಉತ್ತಮ ಆಟಗಾರರು ಸಿಕ್ಕಿದ್ದಾರೆ. ನಾನು ಮತ್ತೆ ಕೌಂಟಿ ಭಾಗವಾಗಲು ಖುಷಿ ಇದೆ. ಕಳೆದ ಸೀಸನ್ನಲ್ಲಿ ನಾನು ಉತ್ತಮ ಕ್ರಿಕೆಟ್ ಆಡಿದ್ದೇನೆ ಎಂದರು ಚಹಾಲ್.
ಇದನ್ನೂ ಓದಿ:ಸಾರ್ವಜನಿಕರೇ ಎಚ್ಚರ! ಈ ತಿಂಗಳ ಕೊನೆಯಲ್ಲಿ ಗೂಗಲ್ ಪೇ ಕೆಲಸ ಮಾಡಲ್ಲ; ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ