ಭಾರತ ಪೇರಿಸಿದ ಬೃಹತ್ ಮೊತ್ತ ತಲುಪಲು ಪರದಾಡಿದ ಬಾಂಗ್ಲಾದೇಶ
ಕೊನೆಯ ಪಂದ್ಯವನ್ನೂ ಹೀನಾಯವಾಗಿ ಸೋತ ಬಾಂಗ್ಲಾ ಆಟಗಾರರು
3ಕ್ಕೆ 3 ಪಂದ್ಯ ಗೆದ್ದು ಟಿ20 ಸರಣಿಯನ್ನು ತನ್ನದಾಗಿಸಿಕೊಂಡ ಭಾರತ
ಭಾರತ ಮತ್ತು ಬಾಂಗ್ಲಾದೇಶದ ನಡುವಿನ ಕೊನೆಯ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ವಿರುದ್ಧ ಬಾಂಗ್ಲಾದೇಶ ಹೀನಾಯವಾಗಿ ಸೋಲನ್ನಪ್ಪಿದೆ. ಭಾರತ ನೀಡಿದ 297 ಬೃಹತ್ ರನ್ಗಳನ್ನು ಬೆನ್ನಟ್ಟಿದ ಬಾಂಗ್ಲಾದೇಶ ಆರಂಭದಲ್ಲಿಯೇ ಮುಗ್ಗರಿಸಿತು. ಮೊದಲ ಓವರ್ನ ಮೊದಲ ಬೌಲ್ನಲ್ಲಿಯೇ ಮಯಾಂಕ್ ಯಾದವ್ ಬೌಲಿಂಗ್ಗೆ ರಿಯಾನ್ ಪರಾಗ್ಗೆ ಕ್ಯಾಚಿತ್ತ ಪರ್ವೇಜ್ ಎಮೋನ್ ಬಾಂಗ್ಲಾದೇಶದ ಸೋಲಿಗೆ ಮೊದಲ ಶಾಸನ ಬರೆದರು.
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಸೆಂಚುರಿ, ಸೂರ್ಯ ಕುಮಾರ್ ಅಬ್ಬರ.. ಬಾಂಗ್ಲಾಗೆ ಟೀಂ ಇಂಡಿಯಾ ಬಿಗ್ ಟಾರ್ಗೆಟ್!
ಆರಂಭಿಕ ಐದು ಓವರ್ಗಳಲ್ಲಿಯೇ ಪ್ರಮುಖ ಮೂರು ವಿಕೆಟ್ ಕಳೆದುಕೊಂಡ ಬಾಂಗ್ಲಾದೇಶ ಸಂಕಷ್ಟಕ್ಕೆ ಸಿಲುಕಿತ್ತು ನಂಜಿದ್ ಹಸನ್ (15) ನಜ್ಮುಲ್ಲಾ ಶಾಂತೋ (14) ಬೇಗನೇ ಪೆವಿಲಿಯನ್ ಸೇರಿಕೊಂಡರು ನಂತರ ಬಂದ ಲಿಟ್ಟಾನ್ ದಾಸ್ ತೋವಿದ್ ಹೃದೊಯ್ ಕೊಂಚ ಪ್ರತಿರೋಧ ಒಡ್ಡಿದರು ಆದರೂ ಕೂಡ ಭಾರತದ ಕರಾರುವಕ್ಕಾದ ಬೌಲಿಂಗ್ ಎದುರು ಬಹಳ ಹೊತ್ತು ನಿಲ್ಲಲಿಲ್ಲ. ಹಸನ್, ಬಿಷ್ಣೋವಿ ಬೌಲ್ಗೆ ತಿಲಕ್ ವರ್ಮಾಗೆ ಕ್ಯಾಚ್ ನೀಡುವ ಮೂಲಕ 8 ರನ್ಗಳಿಂದ ಅರ್ಧಶತಕ ವಂಚಿತರಾದ್ರು. ಬಳಿಕ ಬಂದ ಮೊಹ್ಮದುಲ್ಲಾ, ಮಹೇದಿ ಹಸನ್ ಕೂಡ ಎರಡಂಕಿಯನ್ನು ದಾಟಲಿಲ್ಲ
ಕೊನೆಗೆ 164 ರನ್ಗೆ 7ವಿಕೆಟ್ ಕಳೆದುಕೊಳ್ಳುವ ಮೂಲಕ ಬಾಂಗ್ಲಾದೇಶ ಸೋಲಿಗೆ ಶರಣಾಯ್ತು. ಮೂರನೇ ಪಂದ್ಯವನ್ನು 133 ರನ್ಗಳಿಂದ ಗೆದ್ದು ಭಾರತ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡಿಕೊಳ್ಳುವ ಮೂಲಕ ತನ್ನದಾಗಿಸಿಕೊಂಡಿದೆ
ಇದನ್ನೂ ಓದಿ: ಸಂಜು ಸ್ಯಾಮ್ಸನ್ ಸಿಕ್ಸರ್‌ಗೆ ದಾಖಲೆಗಳು ಉಡೀಸ್.. ಟೀಂ ಇಂಡಿಯಾ ಹೊಸ ಇತಿಹಾಸ ಸೃಷ್ಟಿ; ಏನದು?
ಹೈದರಾಬಾದ್ ರಾಜೀವ್ ಗಾಂಧಿ ಸ್ಟೇಡಿಯಂನಲ್ಲಿ ಟಾಸ್ ಗೆದ್ದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಆರಂಭಿಕರಾಗಿ ಕಣಕ್ಕಿಳಿದ ಸಂಜು ಸ್ಯಾಮ್ಸನ್ ಸಿಡಿಲಬ್ಬರದ ಬ್ಯಾಟ್ ಬೀಸಿದ್ರು. ಸಂಜು ಜೊತೆಗೆ ಸೂರ್ಯ ಕುಮಾರ್ ಸೇರಿಕೊಂಡು ಬಾಂಗ್ಲಾ ಬೌಲರ್‌ಗಳಿಗೆ ದಶದಿಕ್ಕಿನಲ್ಲೂ ಬೌಂಡರಿಗಳ ಸುರಿಮಳೆಗೈದರು
ಕೇವಲ 47 ಎಸೆತಗಳನ್ನು ಎದುರಿಸಿದ ಸಂಜು ಸ್ಯಾಮ್ಸನ್ ಅವರು 8 ಸಿಕ್ಸ್, 11 ಬೌಂಡರಿಗಳ ನೆರವಿನಿಂದ 111 ರನ್ ಸಿಡಿಸಿದರು. ಜವಾಬ್ದಾರಿಯುತ ಆಟ ಪ್ರದರ್ಶಿಸಿದ ನಾಯಕ ಸೂರ್ಯ ಕುಮಾರ್ ಯಾದವ್ ಅವರು ಕೂಡ 75 ರನ್‌ಗಳ ಕಾಣಿಕೆ ನೀಡಿದರು. ಆಲ್ ರೌಂಡರ್ ಹಾರ್ದಿಕ್ ಪಾಂಡ್ಯ ಅವರು ಸಹ 47 ರನ್ ಬಾರಿಸಿ ತಂಡದ ಬಿಗ್ ಟಾರ್ಗೆಟ್‌ಗೆ ಉತ್ತಮ ಕಾಣಿಕೆ ಕೊಟ್ಟರು.
ಸಂಜು ಸ್ಯಾಮ್ಸನ್ ಅವರು ಒಂದೇ ಓವರ್‌ನಲ್ಲಿ 5 ಸಿಕ್ಸರ್ ಹಾಗೂ ಅತ್ಯಂತ ವೇಗದ ಸೆಂಚುರಿ ಬಾರಿಸುವ ಮೂಲಕ ಟೀಂ ಇಂಡಿಯಾ 3ನೇ ಟಿ20 ಪಂದ್ಯವನ್ನು ಗೆಲ್ಲುವ ವಿಶ್ವಾಸ ಹೆಚ್ಚಿಸಿದ್ದರು. ಟೀಂ ಇಂಡಿಯಾದ ಟಾರ್ಗೆಟ್‌ಗೆ ಬೆಚ್ಚಿ ಬಿದ್ದಿದ್ದ ಬಾಂಗ್ಲಾ ಆಟಗಾರರು ಬೃಹತ್ ಮೊತ್ತವನ್ನು ಎದುರಿಸಲಾಗದೇ ಸೋಲಿಗೆ ಶರಣಾದರು
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ