/newsfirstlive-kannada/media/post_attachments/wp-content/uploads/2025/03/Rohit-sharma-8.jpg)
ಚಾಂಪಿಯನ್ಸ್ ಟ್ರೋಫಿ-2025 ಫೈನಲ್‌ನಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸುವ ಮೂಲಕ ಭಾರತ ತಂಡ (Indian Cricket Team) 7ನೇ ಐಸಿಸಿ ಪ್ರಶಸ್ತಿ ಗೆದ್ದುಕೊಂಡಿದೆ. ಮೊದಲು ಬ್ಯಾಟಿಂಗ್ ಮಾಡಿದ್ದ ನ್ಯೂಜಿಲೆಂಡ್, ಭಾರತಕ್ಕೆ 252 ರನ್‌ಗಳ ಗುರಿಯನ್ನು ನೀಡಿತ್ತು. ಕ್ಯಾಪ್ಟನ್ ರೋಹಿತ್ ಶರ್ಮಾ 76 ರನ್‌ಗಳ ಇನ್ನಿಂಗ್ಸ್ ಆಟವಾಡಿದರು. ಇದ್ರಿಂದ ಟೀಂ ಇಂಡಿಯಾದ ಗೆಲುವು ಸುಲಭವಾಯಿತು. ಆ ಮೂಲಕ ರೋಹಿತ್ ಶರ್ಮಾ ಹಲವು ದಾಖಲೆಗಳನ್ನು ಮಾಡಿದರು.
ಇದನ್ನೂ ಓದಿ: ಟೀಮ್ ಇಂಡಿಯಾ ಗೆಲುವಿಗೆ ಕಾರಣ ಯಾರು? ಅಸಲಿ ಸತ್ಯ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್!
ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ ಸತತ 2ನೇ ವರ್ಷ ಐಸಿಸಿ ಪ್ರಶಸ್ತಿ ಗೆದ್ದಿದೆ. ಕ್ರಿಕೆಟ್ ಇತಿಹಾಸದಲ್ಲೇ ಇದು ಮೊದಲ ಬಾರಿಗೆ ಸಂಭವಿಸಿದೆ. ಕಳೆದ ವರ್ಷ ಅವರ ನಾಯಕತ್ವದಲ್ಲಿ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು. ರೋಹಿತ್ ಶರ್ಮಾ ನಾಯಕತ್ವದಲ್ಲಿ ಭಾರತ 2 ಐಸಿಸಿ ಟೂರ್ನಿಗಳನ್ನು (T20 world cup, ICC, Champions Trophy 2025) ಗೆದ್ದಿದೆ.
ಫೈನಲ್‌ನಲ್ಲಿ ಭಾರತಕ್ಕೆ ಅತಿ ವೇಗದ ಅರ್ಧಶತಕ
ಐಸಿಸಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ರೋಹಿತ್ ಶರ್ಮಾ ಒಮ್ಮೆಯೂ ಅರ್ಧಶತಕ ಗಳಿಸಿರಲಿಲ್ಲ. ಇದು ಐಸಿಸಿ ಟೂರ್ನಮೆಂಟ್‌ನ ಫೈನಲ್‌ನಲ್ಲಿ ಅವರ ಮೊದಲ ಅರ್ಧಶತಕವಾಗಿದೆ. 41 ಎಸೆತಗಳಲ್ಲಿ ಅರ್ಧಶತಕ ಪೂರೈಸಿದರು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಭಾರತೀಯ ಆಟಗಾರನ ವೇಗದ ಮೊದಲ ಅರ್ಧಶತಕ ಇದಾಗಿದೆ.
ಇದನ್ನೂ ಓದಿ: ದೊಡ್ಡ ಗೆಲುವು, ದೊಡ್ಡ ಸಂಭ್ರಮ.. ಬೆಂಗಳೂರು, ಮೈಸೂರು ಸೇರಿ ರಾಜ್ಯದ ಜಿಲ್ಲೆಗಳಲ್ಲಿ ಹೇಗಿತ್ತು ಸೆಲೆಬ್ರೆಷನ್?
ಫೈನಲ್‌ನಲ್ಲಿ ಪ್ಲೇಯರ್ ಆಫ್ ದಿ ಅವಾರ್ಡ್ 4ನೇ ನಾಯಕ
ನ್ಯೂಜಿಲೆಂಡ್ ವಿರುದ್ಧ ರೋಹಿತ್ ಶರ್ಮಾ 76 ರನ್ ಗಳಿಸಿ ಪಂದ್ಯ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಇದಕ್ಕಾಗಿ ಅವರಿಗೆ ಪಂದ್ಯಶ್ರೇಷ್ಠ ಪ್ರಶಸ್ತಿ ನೀಡಲಾಯಿತು. ಐಸಿಸಿ ಪುರುಷರ ಏಕದಿನ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ವಿಶ್ವದ 4ನೇ ನಾಯಕ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅವರಿಗಿಂತ ಮೊದಲು ವೆಸ್ಟ್ ಇಂಡೀಸ್‌ನ ಕ್ಲೈವ್ ಲಾಯ್ಡ್ (1975), ಆಸ್ಟ್ರೇಲಿಯಾದ ರಿಕಿ ಪಾಂಟಿಂಗ್ (2003) ಮತ್ತು ಭಾರತದ ಎಂಎಸ್ ಧೋನಿ (2013) ನಾಯಕರಾಗಿ ಏಕದಿನ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದಿದ್ದಾರೆ. ಚಾಂಪಿಯನ್ಸ್ ಟ್ರೋಫಿ ಫೈನಲ್‌ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿ ಗೆದ್ದ ಎರಡನೇ ಭಾರತೀಯ.
ಗಿಲ್ ಜೊತೆ ಸೇರಿ ದಾಖಲೆ
ಮೊದಲ ವಿಕೆಟ್‌ಗೆ ರೋಹಿತ್ ಶರ್ಮಾ ಮತ್ತು ಗಿಲ್ 105 ರನ್‌ಗಳ ಜೊತೆಯಾಟವಾಡಿದರು. ಇದು ಐಸಿಸಿ ಚಾಂಪಿಯನ್ಸ್ ಟ್ರೋಫಿಯ ಇತಿಹಾಸದಲ್ಲಿ ಮೊದಲ ವಿಕೆಟ್‌ಗೆ ದಾಖಲಾದ 3ನೇ ಶತಕದ ಜೊತೆಯಾಟವಾಗಿದೆ.
ಇದನ್ನೂ ಓದಿ: ಕ್ಯಾಪ್ಟನ್ ರೋಹಿತ್ ಶರ್ಮಾಗೆ Hats off ಎಂದ ಕಾಂಗ್ರೆಸ್ ನಾಯಕಿ.. ಇಂದು ಹೇಗೆಲ್ಲ ಬಣ್ಣಿಸಿದರು..?
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್