ಇಂಗ್ಲೆಂಡ್​ ವಿರುದ್ಧ ಭಾರತ ಸೋತರೆ ಗಂಭೀರ್​ಗೆ ಸಂಕಷ್ಟ; ಟೀಮ್​ ಇಂಡಿಯಾ ಮುಖ್ಯ ಕೋಚ್​ ಹುದ್ದೆಯಿಂದ ಕಿಕ್​ ಔಟ್​​

author-image
Ganesh Nachikethu
Updated On
ದಕ್ಷಿಣ ಆಫ್ರಿಕಾ ಪ್ರವಾಸಕ್ಕೆ ಕೈಕೊಟ್ಟ ಕೋಚ್​​; ಗೌತಮ್ ಗಂಭೀರ್​ಗೆ ಏನಾಯ್ತು..?
Advertisment
  • ಟೀಮ್​ ಇಂಡಿಯಾ, ಇಂಗ್ಲೆಂಡ್​ ನಡುವಿನ 5 ಪಂದ್ಯಗಳ ಟಿ20 ಸರಣಿ
  • ಇಂದು ಭಾರತ ಮತ್ತು ಇಂಗ್ಲೆಂಡ್​ ಮಧ್ಯದ ಮೊದಲ ಟಿ20 ಪಂದ್ಯ ಶುರು
  • ಭಾರತದ ಮುಖ್ಯ ಕೋಚ್​ ​ಗೌತಮ್​ ಗಂಭೀರ್​ ಪಾಲಿಗೆ ಮಹತ್ವದ ಸರಣಿ

ಮುಂದಿನ ತಿಂಗಳು ಬಹುನಿರೀಕ್ಷಿತ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ. ಇದಕ್ಕೂ ಮುನ್ನ ನಡೆಯಲಿರೋ ಇಂಗ್ಲೆಂಡ್ ವಿರುದ್ಧ ಟಿ20 ಮತ್ತು ಏಕದಿನ ಸರಣಿ ಗೆಲ್ಲಲೇಬೇಕಾದ ಪರಿಸ್ಥಿತಿ ಇದೆ. ಇಂದು ಕೋಲ್ಕತ್ತಾ ಈಡನ್​ ಗಾರ್ಡನ್ಸ್​ ಸ್ಟೇಡಿಯಮ್​ನಲ್ಲಿ ಟೀಮ್​ ಇಂಡಿಯಾ, ಇಂಗ್ಲೆಂಡ್​ ತಂಡದ ನಡುವಿನ ಮೊದಲ ಟಿ20 ಪಂದ್ಯ ಶುರುವಾಗಲಿದೆ. ಟೀಮ್​ ಇಂಡಿಯಾ ಮುಖ್ಯ ಕೋಚ್​ ​ಗೌತಮ್​ ಗಂಭೀರ್​ ಪಾಲಿಗೆ ಈ ಸರಣಿ ಅತ್ಯಂತ ಮಹತ್ವದ್ದಾಗಿದೆ.

ತವರಿನಲ್ಲಿ ನ್ಯೂಜಿಲೆಂಡ್​, ಬಳಿಕ ಆಸ್ಟ್ರೇಲಿಯಾದಲ್ಲಿ ಟೆಸ್ಟ್​ ಸರಣಿ ಸೋಲಿನ ಬಳಿಕ ಗೌತಮ್​ ಗಂಭೀರ್​ ಸಾಮರ್ಥ್ಯದ ಬಗ್ಗೆ ಪ್ರಶ್ನೆ ಎದ್ದಿದೆ. ಈಗಾಗಲೇ ಟೀಮ್​ ಸೆಲೆಕ್ಷನ್​ ಸೇರಿದಂತೆ ಹಲವು ವಿಚಾರಗಳಲ್ಲಿ ಭೀರ್​​ ಗಂಭೀರ್​ ಸರಹೆಗಳನ್ನ ನಗ್ಲೆಟ್​ ಮಾಡಲಾಗಿದೆ. ಗಂಭೀರ್​ ಮಾರ್ಗದರ್ಶನದಲ್ಲಿ ಈ ಸರಣಿಯಲ್ಲಿ ಸೋಲುಂಡರೆ, ಕೋಚ್​​ ಭವಿಷ್ಯ ಮತ್ತಷ್ಟು ಡೋಲಾಯಮಾನವಾಗಲಿದೆ.

ಇಂಗ್ಲೆಂಡ್​​ ವಿರುದ್ಧದ ಟಿ20 ಸರಣಿ ಟೀಮ್​ ಇಂಡಿಯಾ ಮುಂದೆ ಕಠಿಣ ಸವಾಲನ್ನ ತಂದಿಟ್ಟಿದೆ. ಈ ಸವಾಲನ್ನ ಮೀರಿ ಸೂರ್ಯಕುಮಾರ್​ ಯಾದವ್​ ಪಡೆ ಶೈನ್ ಆಗಬೇಕಿದೆ. ಒಂದು ವೇಳೆ ಟೀಮ್​ ಇಂಡಿಯಾ ಸೋತಲ್ಲಿ ಗೌತಮ್​ ಗಂಭೀರ್​​ಗೆ ಮುಖ್ಯ ಕೋಚ್​​ ಹುದ್ದೆಯಿಂದ ಕೊಕ್​ ನೀಡಬಹುದು.

ಭಾರತದ ಗೆಲುವಿಗಾಗಿ ಮಹಾ ಕಾಳಿ ಮೊರೆ ಹೋದ ಗಂಭೀರ್‌

ಇನ್ನು, ಇಂಗ್ಲೆಂಡ್​ ವಿರುದ್ಧದ ಮೊದಲ ಟಿ20 ಪಂದ್ಯಕ್ಕೆ ಮುನ್ನ ಭಾರತ ಗೆಲ್ಲಲಿ ಎಂದು ಮುಖ್ಯ ಕೋಚ್​ ಗೌತಮ್​ ಗಂಭೀರ್​​ ಕಾಳಿ ದೇವಿಗೆ ವಿಶೇಷ ಪೂಜೆ ಸಲ್ಲಿಸಿದ್ದಾರೆ. ದೇವಸ್ಥಾನದಲ್ಲಿ ಗಂಭೀರ್ ಪೂಜೆ ಮಾಡುತ್ತಿರೋ ವಿಡಿಯೋ ಈಗ ಸೋಷಿಯಲ್​ ಮೀಡಿಯಾದಲ್ಲಿ ಸಖತ್​ ವೈರಲ್​ ಆಗಿದೆ.

ಕಾಳಿ ದೇವಿಗೆ ಆರತಿ ಬೆಳಗಿದ ಗಂಭೀರ್​ ನಂತರ ಪುಷ್ಪಾರ್ಚನೆ ಮಾಡಿದ್ರು. ಇದೇ ವೇಳೆ ಅರ್ಚಕರು ಗಂಭೀರ್ ಅವರಿಗೆ ತಿಲಕವಿಟ್ಟು ಆಶೀರ್ವಾದಿಸಿದ್ದಾರೆ. ಭಾರತ ತಂಡ ಈ ಸೀರೀಸ್​ ಗೆಲ್ಲಲಿ ಎಂದು ದೇವಿ ಬಳಿ ಬೇಡಿಕೊಂಡಿದ್ದಾರೆ ಎಂದು ವರದಿಯಾಗಿದೆ.

ಇದನ್ನೂ ಓದಿ:ಭಾರತದ ಗೆಲುವಿಗಾಗಿ ಮಹಾ ಕಾಳಿ ಮೊರೆ ಹೋದ ಗೌತಮ್​​ ಗಂಭೀರ್‌; ದೇವಿಗೆ ವಿಶೇಷ ಪೂಜೆ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment