ಟೀಮ್​ ಇಂಡಿಯಾದಲ್ಲಿ ಕೆ.ಎಲ್​ ರಾಹುಲ್​​ಗೆ ಮತ್ತೆ ಮೋಸ; ಬಿಗ್​ ಶಾಕ್​​ ಕೊಟ್ಟ ಗೌತಮ್​ ಗಂಭೀರ್​

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಗೆದ್ದ ಭಾರತ!
  • ಏಕದಿನ ಸರಣಿಯಲ್ಲಿ 1-0 ಅಂತರದಿಂದ ಭಾರತ ತಂಡಕ್ಕೆ ಮುನ್ನಡೆ
  • ಮೊದಲ ಪಂದ್ಯದಲ್ಲಿ ಕೆ.ಎಲ್​ ರಾಹುಲ್​ಗೆ ಅನ್ಯಾಯ ಆಗಿದ್ದು ಏಕೆ?

ಇತ್ತೀಚೆಗೆ ನಾಗ್ಪುರದಲ್ಲಿ ನಡೆದ ಇಂಗ್ಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಭಾರತ ಗೆದ್ದು ಬೀಗಿದೆ. ಅದ್ಭುತ ಪ್ರದರ್ಶನ ನೀಡಿರೋ ಕ್ಯಾಪ್ಟನ್​ ರೋಹಿತ್​ ಶರ್ಮಾ ನೇತೃತ್ವದ ಭಾರತ ತಂಡ 3 ಪಂದ್ಯಗಳ ಏಕದಿನ ಸರಣಿಯಲ್ಲಿ 1-0 ಅಂತರದಿಂದ ಮುನ್ನಡೆ ಸಾಧಿಸಿದೆ.

ಟಾಸ್ ಗೆದ್ದ ಇಂಗ್ಲೆಂಡ್ ಮೊದಲು ಬ್ಯಾಟಿಂಗ್ ಮಾಡಿ ಟೀಮ್​ ಇಂಡಿಯಾ 249 ರನ್​ಗಳ ಗುರಿ ನೀಡಿತ್ತು. 249 ರನ್‌ಗಳ ಗುರಿ ಬೆನ್ನಟ್ಟಿದ ಭಾರತ ತಂಡ 6 ವಿಕೆಟ್ ಕಳೆದುಕೊಂಡು ಗೆಲುವಿನ ದಡ ಸೇರಿತು.

ಶ್ರೇಯಸ್​ ಅಯ್ಯರ್​​, ಗಿಲ್​ ಅಬ್ಬರ

ಟೀಮ್ ಇಂಡಿಯಾ ಪರ ಶುಭ್ಮನ್​​ ಗಿಲ್​, ಶ್ರೇಯಸ್ ಅಯ್ಯರ್ ಮತ್ತು ಅಕ್ಸರ್ ಪಟೇಲ್ ಅಬ್ಬರಿಸಿದರು. ಮೂವರು ಅರ್ಧಶತಕ ಸಿಡಿಸಿ ಮಿಂಚಿದರು. ಹೀಗಾಗಿ ಟೀಮ್​ ಇಂಡಿಯಾ ಇಂಗ್ಲೆಂಡ್​ ವಿರುದ್ಧ ಗೆಲುವು ಸಾಧಿಸಿದೆ.

ಕೈ ಕೊಟ್ಟ ಕೆ.ಎಲ್​ ರಾಹುಲ್​​, ರೋಹಿತ್​​

ಟೀಮ್ ಇಂಡಿಯಾ ಪರ ರೋಹಿತ್ ಶರ್ಮಾ ಆರಂಭಿಕರಾಗಿ ಕಣಕ್ಕಿಳಿದರು. ಹಿಟ್‌ಮ್ಯಾನ್ (2) ತಮ್ಮ ಕಳಪೆ ಪ್ರದರ್ಶನವನ್ನು ಮುಂದುವರಿಸಿದರು. 6ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ಕೆ.ಎಲ್​ ರಾಹುಲ್​​ ಅವರು ಕೇವಲ 2 ರನ್​ಗೆ ವಿಕೆಟ್​ ಒಪ್ಪಿಸಿದ್ರು.

ಕೆ.ಎಲ್​ ರಾಹುಲ್​ಗೆ​ ಮತ್ತೆ ಮೋಸ

ಭಾರತ ತಂಡದ ಸ್ಟಾರ್​ ವಿಕೆಟ್​ ಕೀಪರ್​​ ಬ್ಯಾಟರ್​​​ ಕೆ.ಎಲ್​ ರಾಹುಲ್​​. ಇವರು 5ನೇ ಕ್ರಮಾಂಕದಲ್ಲಿ ಬೆಸ್ಟ್​ ಬ್ಯಾಟರ್​​. ಇಂಗ್ಲೆಂಡ್​ ವಿರುದ್ಧ ಏಕದಿನ ಪಂದ್ಯದಲ್ಲಿ 5ನೇ ಕ್ರಮಾಂಕದಲ್ಲಿ ಇವರ ಬದಲಿಗೆ ಅಕ್ಷರ್​ ಪಟೇಲ್​​ ಅವರನ್ನು ಕಣಕ್ಕಿಳಿಸಿದ್ರು. ಇದರ ಪರಿಣಾಮ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಲು ಬಂದ ಕೆ.ಎಲ್​ ರಾಹುಲ್​ ಮೇಲೆ ಒತ್ತಡ ಇತ್ತು. ಹಾಗಾಗಿ ಇವರು ಕ್ರೀಸ್​ನಲ್ಲಿ ನಿಂತು ಸೆಟ್​ ಆಗೋ ಮುನ್ನವೇ ಔಟ್​ ಆದ್ರು. ಹೀಗಾಗಿ ಇವರನ್ನು ಬೇರೆ ಕ್ರಮಾಂಕದಲ್ಲಿ ಕಣಕ್ಕಿಳಿಸಿ ಕೆ.ಎಲ್​ ರಾಹುಲ್ ಬಾಳಲ್ಲಿ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಗೌತಮ್​ ಗಂಭೀರ್​ ಚೆಲ್ಲಾಟ ಆಡುತ್ತಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಇದನ್ನೂ ಓದಿ:2ನೇ ಏಕದಿನ ಪಂದ್ಯಕ್ಕೆ ಮುನ್ನ ಭಾರತಕ್ಕೆ ಭರ್ಜರಿ ಗುಡ್​ನ್ಯೂಸ್​; ಸ್ಟಾರ್​ ಪ್ಲೇಯರ್​ ಎಂಟ್ರಿಯಿಂದ ಆನೆಬಲ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment