ಭಾರತದ ಟಿ20 ಕ್ಯಾಪ್ಟನ್​​ ಇವರೇ ಎಂದ ಬಿಸಿಸಿಐ; ಕೋಚ್​ ಗಂಭೀರ್​ ನಿರ್ಧಾರವೇನು?

author-image
Ganesh Nachikethu
Updated On
IPL 2025: ಕ್ಯಾಪ್ಟನ್​ ಹಾರ್ದಿಕ್​ ಪಾಂಡ್ಯಗೆ ಬಿಗ್​ ಸ್ಟ್ರೋಕ್​ ಕೊಟ್ಟ ಮುಂಬೈ ಇಂಡಿಯನ್ಸ್​
Advertisment
  • ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ ರೋಹಿತ್​ ಶರ್ಮಾ
  • ಭಾರತದ ಟಿ20 ಕ್ಯಾಪ್ಟನ್ಸಿಗಾಗಿ ಹಾರ್ದಿಕ್​​, ಸೂರ್ಯ ಮಧ್ಯೆ ಪೈಪೋಟಿ!
  • ಟಿ20 ಕ್ಯಾಪ್ಟನ್​ ಬಗ್ಗೆ ಕೋಚ್​ ಗೌತಮ್​ ಗಂಭೀರ್​ ಹೇಳಿದ್ದೇನು ಗೊತ್ತಾ?

2024ರ ವಿಶ್ವಕಪ್​ ಗೆದ್ದ ಬೆನ್ನಲ್ಲೇ ಟೀಮ್​ ಇಂಡಿಯಾ ಕ್ಯಾಪ್ಟನ್​ ರೋಹಿತ್​​ ಶರ್ಮಾ ಟಿ20 ಅಂತರಾಷ್ಟ್ರೀಯ ಕ್ರಿಕೆಟ್​ಗೆ ಗುಡ್​ ಬೈ ಹೇಳಿದ್ದಾರೆ. ಸದ್ಯ ಶ್ರೀಲಂಕಾ ವಿರುದ್ಧ ಟೀಮ್​ ಇಂಡಿಯಾ ಟಿ20 ಸರಣಿ ಆಡಲಿದ್ದು, ಹೊಸ ನಾಯಕನ ಹುಡುಕಾಟದಲ್ಲಿದೆ.

ಜೂನ್​ 27ನೇ ತಾರೀಕಿನಿಂದ ನಡೆಯಲಿರೋ ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕ್ಯಾಪ್ಟನ್​​ ಆಗಲು ಹಾರ್ದಿಕ್ ಪಾಂಡ್ಯ ಮತ್ತು ಸೂರ್ಯಕುಮಾರ್ ಯಾದವ್ ಮಧ್ಯೆ ನೇರ ಪೈಪೋಟಿ ಇದೆ. ಈ ಮಧ್ಯೆ ಟೀಮ್​​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​ ಅವರೇ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ.

ಶ್ರೀಲಂಕಾ ವಿರುದ್ಧದ ಟಿ20 ಸರಣಿಗೆ ಕ್ಯಾಪ್ಟನ್​​​ ಯಾರು ಆಗಬೇಕು? ಎಂಬ ಬಗ್ಗೆ ಮುಖ್ಯ ಕೋಚ್​​ ಗೌತಮ್​ ಗಂಭೀರ್​​ ಸೆಲೆಕ್ಷನ್​ ಕಮಿಟಿ ಜೊತೆ ಚರ್ಚಿಸಿದ್ದಾರೆ. ಈ ಬಗ್ಗೆ ಬಿಸಿಸಿಐ ಅಧಿಕಾರಿಗಳು ಮತ್ತು ಆಯ್ಕೆ ಸಮಿತಿ ಜೊತೆ ಚರ್ಚಿಸಿರೋ ಗಂಭೀರ್​​, ಇವರೇ ನಾಯಕ ಆಗಬೇಕು ಎಂದು ನಾನು ಯಾರ ಹೆಸರು ಪ್ರಸ್ತಾಪ ಮಾಡಿಲ್ಲ ಎಂದು ಹೇಳಿದ್ದಾರೆ.

publive-image

ಟಿ20 ಕ್ಯಾಪ್ಟನ್​ ಬಗ್ಗೆ ಗಂಭೀರ್​​ ಹೇಳಿದ್ದೇನು?

ಈ ಬಗ್ಗೆ ಮಾತಾಡಿರೋ ಬಿಸಿಸಿಐ ಅಧಿಕಾರಿ ಒಬ್ಬರು, ಗೌತಮ್ ಗಂಭೀರ್ ನೇರವಾಗಿ ಸೂರ್ಯಕುಮಾರ್​​ ಯಾದವ್​ ಹೆಸರು ಹೇಳಿಲ್ಲ. ಬದಲಿಗೆ ಕೆಲಸದ ಹೊರೆ ಅಡ್ಡಿಯಾಗದ ನಾಯಕನ ಜೊತೆ ಕೆಲಸ ಮಾಡುವೆ ಎಂದು ಸ್ಪಷ್ಟಪಡಿಸಿದ್ದಾರೆ. ಈಗ ಟೀಮ್​​ ಇಂಡಿಯಾ ಕ್ಯಾಪ್ಟನ್​ ಯಾರು ಎಂಬುದು ಅಜಿತ್ ಅಗರ್ಕರ್ ಕೈಯಲ್ಲಿದೆ ಎಂದರು.

ಇನ್ನು, ರೋಹಿತ್ ಶರ್ಮಾ ಉತ್ತರಾಧಿಕಾರಿಯಾಗಿ ಉಪನಾಯಕ ಹಾರ್ದಿಕ್ ಪಾಂಡ್ಯ ನೆಚ್ಚಿನ ಆಟಗಾರ ಆಗಿದ್ದಾರೆ. ಕಳೆದ ಕೆಲವು ದಿನಗಳಿಂದ ಸ್ಫೋಟಕ ಬ್ಯಾಟರ್ ಸೂರ್ಯಕುಮಾರ್ ಯಾದವ್ ಪ್ರಬಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.

ಇದನ್ನೂ ಓದಿ:ಶ್ರೀಲಂಕಾ ಪ್ರವಾಸ.. ಟೀಮ್​ ಇಂಡಿಯಾಗೆ ಗುಡ್​ನ್ಯೂಸ್​ ಕೊಟ್ಟ ವಿರಾಟ್​ ಕೊಹ್ಲಿ!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment