Advertisment

ಕ್ಯಾಪ್ಟನ್​​ ರೋಹಿತ್​​ ವಿರುದ್ಧ ​​ಅಸಮಾಧಾನ ಹೊರಹಾಕಿದ ಕೋಚ್​ ಗಂಭೀರ್; ಇಬ್ಬರ ಮಧ್ಯೆ ಆಗಿದ್ದೇನು?

author-image
Ganesh Nachikethu
Updated On
ರೋಹಿತ್ ಶರ್ಮಾ ಬಗ್ಗೆ ಕೇಳ್ತಿದ್ದಂತೆ ಗಂಭೀರ್ ಗರಂ; ಪ್ರಶ್ನೆಗೆ ಖಾರವಾಗಿ ಉತ್ತರಿಸಿದ ಕೋಚ್
Advertisment
  • ಕೋಚ್​ ಗಂಭೀರ್ ವಿರುದ್ಧ ಬಿಸಿಸಿಐ ಫುಲ್ ಗರಂ
  • ಹೆಸರು ಹೇಳದೆ ಆಟಗಾರರನ್ನ ಜಾಡಿಸಿದ ಕೋಚ್
  • ನಾಯಕ ರೋಹಿತ್​​​​​​​​ ಬಗ್ಗೆ ಕೋಚ್​ ಅಸಮಾಧಾನ!

ಟೀಮ್ ಇಂಡಿಯಾದಲ್ಲಿ ಸದ್ಯ ಎಲ್ಲವೂ ಸರಿ ಇಲ್ಲ! ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಹಿನ್ನಡೆ ಅನುಭವಿಸಿದ ಬೆನ್ನಲೆ, ತಂಡದಲ್ಲಿ ಅಲ್ಲೋಲ ಕಲ್ಲೋಲ ಸೃಷ್ಟಿಯಾಗಿದೆ. ಬಿಸಿಸಿಐ ಬಿಗ್​ಬಾಸ್​ಗಳು ಕೆರಳಿ ಕೆಂಡವಾಗಿದ್ದಾರೆ. ಕೋಚ್ ಗೌತಮ್ ಗಂಭೀರ್ ವಿರುದ್ಧ ಸಿಡಿದೆದ್ದಿದ್ದಾರೆ.

Advertisment

ಗಂಭೀರ್ ವಿರುದ್ಧ ಬಿಸಿಸಿಐ ಫುಲ್ ಗರಂ

ಅಡಿಲೇಡ್​​ ಟೆಸ್ಟ್​ ಸೋಲು! ಮೆಲ್ಬರ್ನ್​​ ಟೆಸ್ಟ್​​ ಪಂದ್ಯದಲ್ಲಿ ತೀವ್ರ ಮುಖಭಂಗ! ಇದೇ ಬಿಗ್​ಬಾಸ್​​ಗಳನ್ನ ಕೆರಳಿ ಕೆಂಡದಂತೆ ಮಾಡಿರೋದು. ಅದ್ರಲ್ಲೂ ಟೀಮ್ ಇಂಡಿಯಾ ವರ್ಲ್ಡ್​ ಟೆಸ್ಟ್ ಚಾಂಪಿಯನ್​ಶಿಪ್ ಫೈನಲ್​​​​​ ಎಂಟ್ರಿ ಅತ್ಯಂತ ಕಠಿಣವಾಗಿರೋದ್ರಿಂದ, ಬಿಗ್​ಬಾಸ್​​ಗಳ ಕೋಪ ಮತ್ತಷ್ಟು ಹೆಚ್ಚಲು ಕಾರಣವಾಗಿದೆ.

ಹೆಸರೇಳದೆ ಆಟಗಾರರನ್ನ ಜಾಡಿಸಿದ ಕೋಚ್..!

ಮೆಲ್ಬರ್ನ್​ ಟೆಸ್ಟ್ ಸೋಲಿನ ಬಳಿಕ, ಟೀಮ್ ಇಂಡಿಯಾ ಡ್ರೆಸಿಂಗ್​ ರೂಮ್​ನಲ್ಲಿ ಗಲಾಟೆ ಜೋರಾಗಿತ್ತು. ಕೋಚ್ ಗೌತಮ್ ಗಂಭೀರ್​, ಆಟಗಾರರ ವಿರುದ್ಧ ಸಿಡಿದೆದ್ದಿದ್ರು. ಇಷ್ಟು ದಿನ ನಿಮಗೆ ಫ್ರೀಡಂ ಕೊಟ್ಟಿದ್ದು ಸಾಕು..! ಇನ್ಮೇಲೆ ನಾನು ಹೇಳಿದಂತೆ ಕೇಳಬೇಕು ಎಂದಿದ್ದಾರೆ. ಅಷ್ಟೇ ಅಲ್ಲ..! ಕಳಪೆ ಪ್ರದರ್ಶನ ನೀಡಿದ ಆಟಗಾರರನ್ನ, ಗಂಭೀರ್ ಹೆಸರೇಳದೆ ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ. ಗಂಭೀರ್​​ ಓವರ್ ರಿಯಾಕ್ಷನ್, ಡ್ರೆಸಿಂಗ್​​ ರೂಮ್​ನಲ್ಲಿ ಆಟಗಾರರನ್ನ ವಿಚಲಿತಗೊಳಿಸಿದೆ.

ನಾಯಕನ​​​​​​​ ಬಗ್ಗೆ ಕೋಚ್​ಗೆ ಅಸಮಾಧಾನ..!

ಟೀಮ್ ಇಂಡಿಯಾ ನಾಯಕ ರೋಹಿತ್ ಶರ್ಮಾ, ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿಯಲ್ಲಿ ಅತ್ಯಂತ ಕಳಪೆ ಬ್ಯಾಟಿಂಗ್ ಪ್ರದರ್ಶಿಸಿದ್ದಾರೆ. ರೋಹಿತ್ ಬ್ಯಾಡ್ ಫಾರ್ಮ್​​ ಬಗ್ಗೆ ವ್ಯಾಪಕ ಟೀಕೆ ವ್ಯಕ್ತವಾಗ್ತಿದೆ. ಆದ್ರೆ ಗಂಭೀರ್​, ರೋಹಿತ್ ಬ್ಯಾಟಿಂಗ್ ಮತ್ತು ಆತನ ನಡೆಯ ಬಗ್ಗೆ ಅಸಮಾಧಾನಗೊಂಡಿದ್ದಾರೆ. ಬ್ಯಾಡ್ ಫಾರ್ಮ್​ನಲ್ಲಿರುವ ರೋಹಿತ್, ಸಹ ಆಟಗಾರರ ಜೊತೆ ಈ ಹಿಂದಿನಂತೆ ಹೆಚ್ಚು ಬೆರೆಯೊಲ್ಲ..! ಪದೇ ಪದೇ ಏಕಾಂಗಿಯಾಗಿ ಇರ್ತಾರೆ. ಆಟಗಾರರ ಜೊತೆ ಜಾಸ್ತಿ ಇಲ್ವಾಲ್​ಮೆಂಟ್ ತೋರಿಸುತ್ತಿಲ್ಲ ಅಂತ ನಾಯಕನ ವಿರುದ್ಧ ಬೇಸರಗೊಂಡಿದ್ದಾರೆ.

Advertisment

ಇದನ್ನೂ ಓದಿ: ಟೀಮ್​ ಇಂಡಿಯಾ ಸೋಲಿಗೆ ಗಂಭೀರ್​ ಆ ನಿರ್ಧಾರವೇ ಕಾರಣ; ಹಿಗ್ಗಾಮುಗ್ಗಾ ಜಾಡಿಸಿದ ಬಿಸಿಸಿಐ

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment