ಟೀಮ್​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​ ಕೊಟ್ಟ ಗಂಭೀರ್​​; ತಂಡದಲ್ಲಿ ಯಾರಿಗೆ ಸ್ಥಾನ?

author-image
Ganesh Nachikethu
Updated On
IND vs SL: ಪ್ರತಿಷ್ಠೆಯ ಪ್ರಶ್ನೆ.. ಕೋಚ್ ಗಂಭೀರ್ ಇವತ್ತು ಈ ಆಟಗಾರರಿಗೆ ಕೊಕ್ ಕೊಡಲಿದ್ದಾರೆ..
Advertisment
  • ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​​ ಪಂದ್ಯ!
  • ಡಿಸೆಂಬರ್​​​ 6ನೇ ತಾರೀಕಿನಿಂದ ಅಡಿಲೇಡ್​​ನಲ್ಲಿ ನಡೆಯಲಿರೋ ಮ್ಯಾಚ್​​
  • ಇದು ಡೇ ಅಂಡ್​​ ನೈಟ್​ ಮ್ಯಾಚ್​​ ಆಗಿರೋ ಟೀಮ್​ ಇಂಡಿಯಾಗೆ ಸವಾಲ್

ಡಿಸೆಂಬರ್​​​ 6ನೇ ತಾರೀಕಿನಿಂದ ಅಡಿಲೇಡ್‌ ಇಂಟರ್​ ನ್ಯಾಷನಲ್​​ ಕ್ರಿಕೆಟ್ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 2ನೇ ಟೆಸ್ಟ್​​ ಪಂದ್ಯ ಶುರುವಾಗಲಿದೆ. ಇದು ಡೇ ಅಂಡ್​​ ನೈಟ್​ ಮ್ಯಾಚ್​​ ಆಗಿರೋ ಟೀಮ್​ ಇಂಡಿಯಾಗೆ ಹೊಸ ಸವಾಲ್​​ ಎದುರಾಗಿದೆ.

ಇನ್ನು, ಅಡಿಲೇಡ್ ಟೆಸ್ಟ್ ಪಂದ್ಯಕ್ಕೂ ಮುನ್ನ ಟೀಮ್ ಇಂಡಿಯಾಗೆ ಗುಡ್ ನ್ಯೂಸ್ ಸಿಕ್ಕಿದೆ. ಶೀಘ್ರದಲ್ಲೇ ಮುಖ್ಯ ಕೋಚ್​​ ಗೌತಮ್​ ಗಂಭೀರ್​ ಟೀಮ್​ ಇಂಡಿಯಾ ಸೇರಲಿದ್ದಾರೆ ಅನ್ನೋ ಮಾಹಿತಿ ಲಭ್ಯವಾಗಿದೆ. ಪರ್ತ್​​ ಟೆಸ್ಟ್​​​​ ಪಂದ್ಯದ ನಂತರ ವೈಯಕ್ತಿಕ ಕಾರಣದಿಂದ ಗೌತಮ್​ ಗಂಭೀರ್​​​ ಟೀಮ್​ ಇಂಡಿಯಾ ತೊರೆದಿದ್ರು.

ಆಸ್ಟ್ರೇಲಿಯಾ ವಿರುದ್ಧ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್​ ಇಂಡಿಯಾ 295 ರನ್​​ಗಳ ಭರ್ಜರಿ ಜಯ ಸಾಧಿಸಿದೆ. ಐದು ಪಂದ್ಯಗಳ ಸರಣಿಯಲ್ಲಿ ಟೀಮ್​​ ಇಂಡಿಯಾ 1-0 ಅಂತರದಿಂದ ಮುನ್ನಡೆ ಸಾಧಿಸಿದೆ. ಮುಂದಿನ ಪಂದ್ಯ ಗೆಲ್ಲಲೇಬೇಕು ಎಂದು ಜಿದ್ದಿಗೆ ಬಿದ್ದಿರೋ ಟೀಮ್​ ಇಂಡಿಯಾ ಮುಖ್ಯ ಕೋಚ್​​ ಗೌತಮ್​ ಗಂಭೀರ್​ ಅಗತ್ಯ ಹೆಚ್ಚಿದೆ.

ಭಾರತಕ್ಕೆ ಗೆಲ್ಲಲೇಬೇಕಾದ ಅನಿವಾರ್ಯ

ಟೀಮ್​ ಇಂಡಿಯಾ ಈ ಹಿಂದೆಯೂ ಆಸ್ಟ್ರೇಲಿಯಾ ಪ್ರವಾಸದಲ್ಲಿ ಗೆದ್ದು ಬೀಗಿದೆ. 2018-19ರಲ್ಲಿ ವಿರಾಟ್ ಕೊಹ್ಲಿ ನಾಯಕತ್ವದಲ್ಲಿ ಭಾರತ ಗೆದ್ದರೆ, 2020-21ರಲ್ಲಿ ರಹಾನೆ ಕ್ಯಾಪ್ಟನ್ಸಿಯಲ್ಲಿ ಟೀಮ್​ ಇಂಡಿಯಾ ಪ್ರಾಬಲ್ಯ ಸಾಧಿಸಿತ್ತು. ಈಗ ರೋಹಿತ್ ಶರ್ಮಾ ನಾಯಕತ್ವದಲ್ಲಿ ಹ್ಯಾಟ್ರಿಕ್ ಸರಣಿ ಗೆಲ್ಲಲು ಟೀಮ್ ಇಂಡಿಯಾ ಪ್ಲಾನ್​ ಮಾಡಿಕೊಂಡಿದೆ.

ಪ್ಲೇಯಿಂಗ್ ಎಲೆವೆನ್​​ ಟೆನ್ಷನ್

ಮೊದಲ ಟೆಸ್ಟ್​ ಪಂದ್ಯದಿಂದ ಕ್ಯಾಪ್ಟನ್​ ರೋಹಿತ್​​ ಶರ್ಮಾ 2ನೇ ಮಗುವಿನ ಜನನದ ಕಾರಣ ಟೀಮ್​ ಇಂಡಿಯಾದಿಂದ ಹೊರಗುಳಿದಿದ್ರು. ತೀವ್ರವಾಗಿ ಗಾಯಗೊಂಡ ಕಾರಣ ಶುಭ್ಮನ್​ ಗಿಲ್​ ಕೂಡ ತಂಡದ ಭಾಗವಾಗಿ ಇರಲಿಲ್ಲ. ಈಗ 2ನೇ ಟೆಸ್ಟ್​ಗೂ ಮುನ್ನ ರೋಹಿತ್​​​, ಶುಭ್ಮನ್​​ ಗಿಲ್​​ ಟೀಮ್​ ಇಂಡಿಯಾ ಸೇರಿದ್ದಾರೆ. ಹಾಗಾಗಿ ಟೀಮ್ ಇಂಡಿಯಾ ಪ್ಲೇಯಿಂಗ್-11 ಫೈನಲ್​ ಮಾಡೋದು ಗಂಭೀರ್ ಮೊದಲ ಆದ್ಯತೆಯಾಗಿದೆ. ಮೊದಲ ಟೆಸ್ಟ್​ನಲ್ಲಿ ಎಲ್ಲರೂ ಅಮೋಘ ಪ್ರದರ್ಶನ ನೀಡಿದ್ದು, ಯಾರಿಗೆ ತಂಡದಲ್ಲಿ ಸ್ಥಾನ ಸಿಗಲಿದೆ ಅನ್ನೋದು ಭಾರೀ ಕುತೂಹಲ ಮೂಡಿಸಿದೆ.

ಇದನ್ನೂ ಓದಿ:ಜೈಸ್ವಾಲ್, ಪಾಂಡ್ಯ ಅಲ್ಲವೇ ಅಲ್ಲ.. IPL ಬದಲಿಸಿದ ಬದುಕು, ಯುವ ಕ್ರಿಕೆಟ್ ಪ್ಲೇಯರ್​ನ ರೋಚಕ ಜರ್ನಿ

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment