ಭಾರತದ ಬೌಲಿಂಗ್​​ ಕೋಚ್​​ ಆಗಬೇಕಿದ್ದ RCB ಆಟಗಾರನಿಗೆ ಗಂಭೀರ್​ ಶಾಕ್​​.. ಏನಾಯ್ತು?

author-image
Ganesh Nachikethu
Updated On
ಗಂಭೀರ್​ ಮಾತಿಗೂ ಡೋಂಟ್​​ ಕೇರ್​​.. ಆರ್​​​ಸಿಬಿ ಆಟಗಾರನಿಗೆ ಮೋಸ ಮಾಡಿದ BCCI
Advertisment
  • ಭಾರತ ಕ್ರಿಕೆಟ್​ ತಂಡದ ಮುಖ್ಯ ಕೋಚ್​​ ಆಗಿ ಗೌತಮ್​ ಗಂಭೀರ್​..!
  • ಬೌಲಿಂಗ್​ ಕೋಚ್​​ ಆಗಬೇಕಿದ್ದ ಆರ್​​ಸಿಬಿ ಮಾಜಿ ಆಟಗಾರನಿಗೆ ಶಾಕ್​​​​​
  • ಸಪೋರ್ಟಿಂಗ್​ ಸ್ಟ್ಯಾಫ್​​ಗೆ ಹಲವರ ಶಾರ್ಟ್​ಲಿಸ್ಟ್​ ಮಾಡಿರೋ ಬಿಸಿಸಿಐ

ಸದ್ಯ ನಡೆಯುತ್ತಿರೋ ಜಿಂಬಾಬ್ವೆ ಸರಣಿ ಬೆನ್ನಲ್ಲೇ ಟೀಮ್​ ಇಂಡಿಯಾ ಶ್ರೀಲಂಕಾ ಪ್ರವಾಸ ಕೈಗೊಳ್ಳಲಿದೆ. ಜುಲೈ 26ನೇ ತಾರೀಕಿನಿಂದ ಶುರುವಾಗಲಿರೋ ಶ್ರೀಲಂಕಾ ಸರಣಿಗೆ ಬಲಿಷ್ಠ ಟೀಮ್​ ಇಂಡಿಯಾ ಪ್ರಕಟ ಆಗಬೇಕಿದೆ. ಈಗಾಗಲೇ ಟೀಮ್​ ಇಂಡಿಯಾ ಮುಖ್ಯ ಕೋಚ್​​​ ಹುದ್ದೆಗೆ ಗೌತಮ್​ ಗಂಭೀರ್​ ಕೂಡ ಆಯ್ಕೆಯಾಗಿದ್ದಾರೆ.

ಇನ್ನು, ಟೀಮ್​ ಇಂಡಿಯಾ ಪ್ರಕಟ ಆಗೋ ಮುನ್ನವೇ ಸಪೋರ್ಟಿಂಗ್​ ಸ್ಟ್ಯಾಫ್​ ಕೂಡ ಬದಲಾಗಲಿದೆ. ಭಾರತ ತಂಡದ ಸಪೋರ್ಟಿಂಗ್​ ಸ್ಟ್ಯಾಫ್​ಗೆ ತಮಗೆ ಬೇಕಾದವರನ್ನು ಗೌತಮ್​ ಗಂಭೀರ್​​​ ಕರೆ ತರೋ ಪ್ರಯತ್ನ ಮಾಡುತ್ತಿದ್ದಾರೆ. ಈಗ ಬಿಸಿಸಿಐ ಮುಂದೆ ಮತ್ತೊಂದು ಡಿಮ್ಯಾಂಡ್​ ಇಟ್ಟಿದ್ದಾರೆ ಎನ್ನುವ ಮಾತುಗಳು ಕೇಳಿ ಬಂದಿವೆ.

ಗಂಭೀರ್​​ ಮೊದಲು ಬೌಲಿಂಗ್ ಕೋಚ್‌ ಆಯ್ಕೆ ಸಲುವಾಗಿ ಕರ್ನಾಟಕ ರಣಜಿ ಕ್ರಿಕೆಟ್‌ ತಂಡದ ಮಾಜಿ ನಾಯಕ ಆರ್‌. ವಿನಯ್ ಕುಮಾರ್‌ ಹೆಸರು ಸೂಚಿಸಿದ್ರು. ಇವರ ಬೇಡಿಕೆಯನ್ನು ಬಿಸಿಸಿಐ ನಿರಾಕರಿಸಿದೆ ಎಂದು ವರದಿ ಆಗಿತ್ತು. ಈ ಬೆನ್ನಲ್ಲೇ ಇದೇ ಸ್ಥಾನಕ್ಕೆ ಪಾಕ್​ ಮಾಜಿ ಬೌಲಿಂಗ್​ ಕೋಚ್​ ಮತ್ತು ಸೌತ್​ ಆಫ್ರಿಕಾದ ಮಾಜಿ ವೇಗಿ ಮೊರ್ನೆ ಮಾರ್ಕೆಲ್ ಅವರನ್ನು ಆಯ್ಕೆ ಮಾಡಬೇಕು ಎಂದು ಬಿಸಿಸಿಐ ಮುಂದೆ ಬೇಡಿಕೆ ಇಟ್ಟಿದ್ದಾರೆ.

ಈ ಮಧ್ಯೆ ಬೌಲಿಂಗ್ ಕೋಚ್‌ ಸ್ಥಾನಕ್ಕೆ ಬಿಸಿಸಿಐ ಮಾಜಿ ವೇಗಿಗಳಾದ ಲಕ್ಷ್ಮೀಪತಿ ಬಾಲಾಜಿ ಮತ್ತು ಜಹೀರ್‌ ಖಾನ್ ಹೆಸರು ಶಾರ್ಟ್​ ಲಿಸ್ಟ್​ ಮಾಡಿದೆ. ಗಂಭೀರ್‌ ತಲೆಯಲ್ಲಿ ದಕ್ಷಿಣ ಆಫ್ರಿಕಾದ ತಾರೆ ಹೆಸರಿದೆ. ಯಾರು ಟೀಮ್​ ಇಂಡಿಯಾ ಬೌಲಿಂಗ್​ ಕೋಚ್​ ಆಗಲಿದ್ದಾರೆ ಎಂದು ಕಾದು ನೋಡಬೇಕಿದೆ.

ಇದನ್ನೂ ಓದಿ: T20 ಕ್ರಿಕೆಟ್​​ ನಿವೃತ್ತಿಯಿಂದ ವಾಪಸ್​ ಬರ್ತಾರಾ ಕೊಹ್ಲಿ, ರೋಹಿತ್​ ಶರ್ಮಾ? ಏನಿದು ಸ್ಟೋರಿ?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment