ಟೀಮ್ ಇಂಡಿಯಾ ಚಾಂಪಿಯನ್​ ಟ್ರೋಫಿಗೆ ಪ್ಲೇಯರ್ಸ್​ ಆಯ್ಕೆಯಲ್ಲಿ ಎಡವಟ್ಟು ಮಾಡಿತಾ?

author-image
Bheemappa
Updated On
RO-KOಗೆ ಬಿಗ್​ ಚಾಲೆಂಜ್.. ಟೀಂ ಇಂಡಿಯಾ ಪಾಲಿಗೆ ಇವರ ಆಟ ತುಂಬಾ ಕ್ರೂಶಿಯಲ್..!
Advertisment
  • ಭಾರತದ ಯುವ ಆಟಗಾರನಿಗೆ ಕೊಕ್ ಕೊಟ್ಟಿರುವ ಬಿಸಿಸಿಐ
  • ಇಷ್ಟೊಂದು ಆಟಗಾರರ ಅವಶ್ಯಕತೆ ಭಾರತ ತಂಡಕ್ಕೆ ಇರಲಿಲ್ಲ
  • ಈ ಪ್ಲೇಯರ್​ನ ರಿಪ್ಲೇಸ್​ಮೆಂಟ್​ನಿಂದ ಶುರುವಾದ ವಿವಾದ

ಚಾಂಪಿಯನ್ಸ್​ ಟ್ರೋಫಿಗೆ ಟೀಮ್ ಇಂಡಿಯಾ ಈಗಾಗಲೇ ದುಬೈಗೆ ಪ್ರಯಾಣ ತೆರಳಿದೆ. ತವರಿನಲ್ಲಿ ಇಂಗ್ಲೆಂಡ್​​​​​​​​​​ ವಿರುದ್ಧ ಏಕದಿನ ಸರಣಿ ಕ್ಲೀನ್ ಸ್ವೀಪ್ ಮಾಡಿರುವ ಟೀಮ್ ಇಂಡಿಯಾ ಟ್ರೋಫಿ ಗೆಲ್ಲುವ ಆತ್ಮವಿಶ್ವಾಸದಿಂದ ಅರಬ್​ಗೆ ತೆರಳಿದೆ. ಆದ್ರೆ ಮಹತ್ವದ ಟೂರ್ನಿಗೂ ಮುನ್ನ ಕ್ಯಾಪ್ಟನ್, ಕೋಚ್ ಮತ್ತು ಟೀಮ್ ಮ್ಯಾನೇಜ್ಮೆಂಟ್ ವಿರುದ್ಧ ಅಸಮಾಧಾನ ವ್ಯಕ್ತವಾಗಿದೆ. ಅದಕ್ಕೆ ಕಾರಣ, ಇಂಡಿಯನ್ ಸ್ಪಿನ್ನರ್ಸ್​.

2013, ಬರ್ಮಿಂಗ್​ಹ್ಯಾಮ್​​​​​​​​..! 12 ವರ್ಷಗಳ ಹಿಂದೆ, ಟೀಮ್ ಇಂಡಿಯಾ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಚಾಂಪಿಯನ್ಸ್​ ಟ್ರೋಫಿಯನ್ನು ಗೆದ್ದುಕೊಂಡಿತ್ತು.

publive-image

ಆದ್ರೀಗ 12 ವರ್ಷಗಳ ಬಳಿಕ ಮತ್ತೊಮ್ಮೆ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗೋಕೆ ಹೊರಟಿರುವ ಟೀಮ್ ಇಂಡಿಯಾ, ಆರಂಭದಲ್ಲೇ ವಿವಾದಗಳ ಸುಳಿಗೆ ಸಿಲುಕಿದೆ. ​ಟೂರ್ನಿಗೆ ತಂಡ ಪ್ರಕಟಿಸಿದಾಗ ಯಾರೂ ಮಾತನಾಡಲಿಲ್ಲ. ಆದ್ರೆ ಯಾವಾಗ ವೇಗಿ ಜಸ್ಪ್ರೀತ್ ಬೂಮ್ರಾ ರಿಪ್ಲೇಸ್​​ಮೆಂಟ್ ಅನೌನ್ಸ್ ಆಯಿತೋ, ಟೀಕೆಗಳು ಶುರುವಾದವು.

ಬೂಮ್ರಾ ಔಟ್, ಹರ್ಷಿತ್ ರಾಣಾ ಇನ್. ಜೈಸ್ವಾಲ್​ ಔಟ್, ವರುಣ್ ಚಕ್ರವರ್ತಿ ಇನ್ ಅಂತ ಪ್ರಕಟವಾಗಿದ್ದೇ ತಡ, ಮಾಜಿ ಕ್ರಿಕೆಟಿಗರು, ಕ್ರಿಕೆಟ್ ವಿಶ್ಲೇಷಕರು, ಬಿಸಿಸಿಐ ಮತ್ತು ಟೀಮ್ ಮ್ಯಾನೇಜ್​ಮೆಂಟ್ ವಿರುದ್ಧ ಟೀಕಾ ಪ್ರಹಾರ ನಡೆಸಿದರು.​​​​​​​​​​​​​​​​​​​​​​​​​​​​​​​

5 ಮಂದಿ ಸ್ಪಿನ್ನರ್ಸ್​..! ಟೀಮ್ ಇಂಡಿಯಾ ಲೆಕ್ಕಾಚಾರವೇನು..?

ರವೀಂದ್ರ ಜಡೇಜಾ, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ವಾಷಿಂಗ್ಟನ್ ಸುಂದರ್ ಮತ್ತು ವರುಣ್ ಚಕ್ರವರ್ತಿ, ಚಾಂಪಿಯನ್ಸ್ ಟ್ರೋಫಿ ತಂಡದಲ್ಲಿ, ಸ್ಥಾನ ಪಡೆದಿರುವ ಸ್ಪಿನ್ನರ್ಸ್. ಆದ್ರೆ ದುಬೈನಲ್ಲಿ ನಡೆಯಲಿರುವ ಟೂರ್ನಿಗೆ, ಐದು ಮಂದಿ ಸ್ಪಿನ್ನರ್ಸ್​ ಬೇಕಿತ್ತಾ..? ಇದೇ ಈಗ ದೊಡ್ಡ ಪ್ರಶ್ನೆಯಾಗಿದೆ.

5 ಸ್ಪಿನ್ನರ್ಸ್​ ಬೇಕಿರಲಿಲ್ಲ..!

ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ 5 ಮಂದಿ ಸ್ಪಿನ್ನರ್​ಗಳನ್ನ ದುಬೈಗೆ ಕರೆದುಕೊಂಡು ಹೋಗ್ತಿರೋದು ನನಗೆ ಆಶ್ಚರ್ಯ ತಂದಿದೆ. 3 ಅಥವಾ 4 ಸ್ಪಿನ್ನರ್ಸ್​​ ಓಕೆ. 5ನೇ ಸ್ಪಿನ್ನರ್ ತಂಡಕ್ಕೆ ಅವಶ್ಯಕತೆ ಇರಲಿಲ್ಲ ಅನಿಸುತ್ತೆ. ನೀವು ದುಬೈನಲ್ಲಿ ಬಾಲ್ ಟರ್ನ್ ಆಗುತ್ತೆ ಅನ್ಕೊಂಡ್ರಾ, ಖಂಡಿತ ಇಲ್ಲ. ಇತ್ತೀಚಿಗೆ ಮುಕ್ತಾಯವಾಗ ILT20 ಟೂರ್ನಿಯಲ್ಲಿ ಬ್ಯಾಟ್ಸ್​ಮನ್​ಗಳು ಸಲೀಸಾಗಿ 180+ ರನ್ಸ್ ಚೇಸ್ ಮಾಡ್ತಿದ್ದರು. ಇದನ್ನ ನೋಡಿ ಅರ್ಥ ಮಾಡಿಕೊಳ್ಳಬೇಕಿತ್ತು.!

ಆರ್.ಅಶ್ವಿನ್, ಟೀಮ್ ಇಂಡಿಯಾ ಮಾಜಿ ಸ್ಪಿನ್ನರ್

ಅಶ್ವಿನ್ ಹೇಳಿರೋದ್ರಲ್ಲಿ ನೂರಕ್ಕೆ 100 ಅರ್ಥ ಇದೆ. ಮೂರು ಅಥವಾ ನಾಲ್ಕು ಸ್ಪಿನ್ನರ್​ಗಳನ್ನ​​ ತಂಡಕ್ಕೆ ಆಯ್ಕೆ ಮಾಡಬಹುದಿತ್ತು. ಆದ್ರೆ ಐದನೇ ಸ್ಪಿನ್ನರ್​ ಬದಲು ಜೈಸ್ವಾಲ್​​ಗೆ ಚಾನ್ಸ್ ನೀಡಬಹುದಿತ್ತು.

ದುಬೈ ಸ್ಟೇಡಿಯಮ್​​ನಲ್ಲಿ ವೇಗಿಗಳ ದರ್ಬಾರ್..!

ಇತ್ತೀಚಿಗೆ ದುಬೈನಲ್ಲಿ ಮುಕ್ತಾಯವಾದ ILT20 ಟೂರ್ನಿಯಲ್ಲಿ, ಸ್ಪಿನ್ನರ್ಸ್​ಗೆ ಹೋಲಿಸಿದ್ರೆ ವೇಗಿಗಳು ಬ್ರಿಲಿಯಂಟ್ ಪರ್ಫಾಮೆನ್ಸ್ ನೀಡಿದ್ದಾರೆ. ಟೂರ್ನಿಯಲ್ಲಿ ಫಾಸ್ಟ್ ಬೌಲರ್ಸ್​ 116 ವಿಕೆಟ್ ಪಡೆದಿದ್ರೆ, ಸ್ಪಿನ್ನರ್ಸ್​ 54 ವಿಕೆಟ್ ಕಬಳಿಸಿದ್ದಾರೆ. ಅಂದ್ರೆ ವೇಗಿಗಳ ಅರ್ಧದಷ್ಟು ವಿಕೆಟ್​ಗಳನ್ನ ಸ್ಪಿನ್ನರ್ ಪಡೀಲಿಲ್ಲ.

ದುಬೈ ಪಿಚ್ ಹೇಗಿರುತ್ತೆ ಗೊತ್ತಾ..?

ಫೆಬ್ರವರಿ-ಮಾರ್ಚ್ ತಿಂಗಳಲ್ಲಿ ದುಬೈನಲ್ಲಿ 30ಕ್ಕಿಂತ ಹೆಚ್ಚು ಡ್ರಿಗ್ರಿ ಸೆಲ್ಸಿಯಸ್ ಇರುತ್ತದೆ. ಅಂದ್ರೆ ಹಾಟ್ ಌಂಡ್ ಹ್ಯೂಮಿಡ್ ಕಂಡೀಷನ್ಸ್​ ಎಕ್ಸ್​ಪೆಕ್ಟ್ ಮಾಡಬಹುದು. ಇಂತಹ ಸಮಯದಲ್ಲಿ ದುಬೈ ಪಿಚ್, ಡೇ ಟೈಮ್​ನಲ್ಲಿ ಸ್ಲೋ ಇರುತ್ತದೆ. ರಾತ್ರಿ ಹೊತ್ತು ಗ್ರೌಂಡ್​​ನಲ್ಲಿ ಡ್ಯೂ ಫ್ಯಾಕ್ಟರ್ ಇದ್ದೇ ಇರುತ್ತದೆ. ಪಿಚ್​ ಮೇಲೆ ಸ್ವಲ್ಪ ಗ್ರಾಸ್ ಬಿಡೋದ್ರಿಂದ, ಬ್ಯಾಟಿಂಗ್ ಕಂಡೀಷನ್ಸ್ ನಿರೀಕ್ಷಿಸಬಹುದು. ಸ್ಪಿನ್ನರ್ಸ್​​​ ಹೇಳಿಕೊಳ್ಳುವಂತಹ ಎಫೆಕ್ಟೀವ್ ಆಗಲ್ಲ.

ಇದನ್ನೂ ಓದಿ:ಫುಲ್ ಹ್ಯಾಪಿಯಾಗಿ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಧನ್ಯತಾ- ಡಾಲಿ ಧನಂಜಯ

publive-image

ಫ್ರೆಶ್ ಪಿಚ್ ಮೇಲೆ ಸ್ಪಿನ್ನರ್ಸ್​ ಕಣ್ಣು..!

ಟೀಮ್ ಇಂಡಿಯಾ ಮ್ಯಾನೇಜ್ಮೆಂಟ್ ಅದ್ಯಾವ ಲೆಕ್ಕಾಚಾರದ ಮೇಲೆ, ಐವರು ಸ್ಪಿನ್ನರ್​ಗಳನ್ನ ಆಯ್ಕೆ ಮಾಡಿದಿಯೋ ಗೊತ್ತಿಲ್ಲ. ಇದು ತಂಡಕ್ಕೆ ಮುಳುವಾಗುತ್ತಾ ಇಲ್ವಾ ಅನ್ನೋದು ಸ್ಪಷ್ಟತೆ ಇಲ್ಲ. ಸ್ಪಿನ್ ಹೆವಿ ಟ್ಯಾಕ್ಟಿಕ್ಟ್​ ತಂಡಕ್ಕೆ ಮುಳುವಾಗಲೂಬಹುದು. ಆದ್ರೆ ದುಬೈ ಸ್ಟೇಡಿಯಮ್​ನ ಫ್ರೇಶ್ ಪಿಚ್​​ಗಳ ಮೇಲೆ, ಇನ್ನೂ ಆಟ ನಡೆದಿಲ್ಲ. ಚಾಂಪಿಯನ್ಸ್ ಟ್ರೋಫಿಗೆಂದು ಮೀಸಲಿಟ್ಟಿರುವ ಈ ಪಿಚ್​ಗಳು, ಒಂದು ವೇಳೆ ಸ್ಪಿನ್ ಫ್ರೆಂಡ್ಲಿ ವಿಕೆಟ್ಸ್ ಆದ್ರೆ, ಟೀಮ್ ಇಂಡಿಯಾಕ್ಕೆ ಹಬ್ಬವೋ ಹಬ್ಬ.​​

ಏನೇ ಇರ್ಲಿ, ಸ್ಪಿನ್ ಲೆಜೆಂಡ್ ಅಶ್ವಿನ್, ಟೀಮ್ ಇಂಡಿಯಾ ಹೆವಿ ಸ್ಪಿನ್ ಟ್ಯಾಕ್ಟಿಕ್ಟ್ ವಿರುದ್ಧ ಇದ್ದಾರೆ. ಆದ್ರೆ ಇದು ರೋಹಿತ್ ಪಡೆಗೆ ವರದಾನನಾ ಅಥವಾ ಶಾಪನಾ ಅನ್ನೋದನ್ನ, ಮುಂದಿನ ದಿನಗಳಲ್ಲಿ ಕಾದು ನೋಡೋಣ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment