newsfirstkannada.com

ಟೀಮ್​ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್‌ ರಾಹುಲ್, ಶ್ರೇಯಸ್ ಅಯ್ಯರ್​ ಸ್ಥಾನಕ್ಕೆ ಕುತ್ತು?

Share :

Published February 17, 2024 at 3:30pm

    ವಿರಾಟ್​ ಕೊಹ್ಲಿ ಸ್ಥಾನಕ್ಕೆ ಸರ್ಫರಾಜ್​ ಖಾನ್ ಕುತ್ತು ತರುತ್ತಾರಾ?

    ಈಗಾಗಲೇ ಟಿ20, ಏಕದಿನದಲ್ಲಿ ​ ಸ್ಥಾನ ತುಂಬಿದ ಯಂಗ್​ಸ್ಟರ್ಸ್

    ಧ್ರುವ್​​ ಜುರೆಲ್ ಆಟ ಮುಂದುವರೆಸಿದ್ರೆ ಈ ಪ್ಲೇಯರ್ಸ್​ಗೆ ಕಂಠಕ

ಟೀಮ್​ ಇಂಡಿಯಾದ ಸೂಪರ್​ ಸ್ಟಾರ್​ಗಳ ಎದೆಯಲ್ಲಿ ಇದೀಗ ನಡುಕ ಶುರುವಾಗಿದೆ. ಯಂಗ್​ಸ್ಟರ್​​ಗಳ ಅಬ್ಬರದ ಮುಂದೆ ಕಳೆದು ಹೋಗೋ ಭೀತಿ ಸೀನಿಯರ್ಸ್​​ಗಳನ್ನ ಕಾಡ್ತಿದೆ. ಅಷ್ಟಕ್ಕೂ ಸ್ಥಾನ ಕಳೆದುಕೊಳ್ಳೋ ಭೀತಿಗೆ ಸಿಲುಕಿರೋ ಆಟಗಾರರು ಯಾರು. ಸ್ಥಾನಕ್ಕೆ ಕುತ್ತು ತಂದಿರುವ ಜೂನಿಯರ್ಸ್​ ಯಾರು?

ಇಂಗ್ಲೆಂಡ್​ ವಿರುದ್ಧದ ಟೆಸ್ಟ್​ ಕಾದಾಟದಲ್ಲಿ ಟೀಮ್​ ಇಂಡಿಯಾದ ಯುವ ಆಟಗಾರರ ಅಬ್ಬರ ಜೋರಾಗಿದೆ. ರಣಾಂಗಣದಲ್ಲಿ ಆಂಗ್ಲರ ದಾಳಿಯನ್ನ ದಿಟ್ಟವಾಗಿ ಎದುರಿಸ್ತಿರೋ ಯಂಗ್​ಸ್ಟರ್​​, ಸೀನಿಯರ್ಸ್​ಗಳಿಗೇ​ ಪಾಠ ಮಾಡ್ತಿದ್ದಾರೆ. ಸಿಕ್ಕ ಅವಕಾಶದಲ್ಲಿ ಪವರ್ ​​ಪ್ಯಾಕ್ಡ್​​​ ಪರ್ಫಾಮೆನ್ಸ್​ನಿಂದ ಎಲ್ಲರನ್ನ ಇಂಪ್ರೆಸ್​​ ಮಾಡ್ತಿದ್ದಾರೆ.

ಯುವ ಆಟಗಾರರ ಅಬ್ಬರ, ಸೀನಿಯರ್ಸ್​​ಗೆ ಢವ., ಢವ.!

ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವಕ್ಕೆ ಕೌಂಟ್​​ಡೌನ್​ ಶುರುವಾಗಿದೆ. ಟಿ20, ಏಕದಿನದಲ್ಲಿ ಈಗಾಗಲೇ ಹಲ ಸೀನಿಯರ್ಸ್​​ ಜಾಗದಲ್ಲಿ ಯುವ ಆಟಗಾರರು ಬಂದು ಕುಳಿತಿದ್ದಾರೆ. ಇದೀಗ ಟೆಸ್ಟ್​​ ತಂಡದಲ್ಲಿ ತಮ್ಮ ಅಬ್ಬರ ಪರ್ಫಾಮೆನ್ಸ್​ನಿಂದಲೇ ಸ್ಥಾನಕ್ಕೆ ಕುತ್ತು ತಂದಿದ್ದಾರೆ. ಆನ್​ಫೀಲ್ಡ್​ನಲ್ಲಿ ಜೂನಿಯರ್ಸ್​ ಆರ್ಭಟಿಸ್ತಾ ಇದ್ರೆ, ಸೀನಿಯರ್ಸ್​ ಎದೆಯಲ್ಲಿ ಢವ.. ಢವ ಶುರುವಾಗಿದೆ.

ರಾಜ್​ಕೋಟ್​​ನಲ್ಲಿ ಸರ್ಫರಾಜ್​ ಆರ್ಭಟ.!

ಕಳೆದ 3 ಸೀಸನ್​ಗಳಿಂದ ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ ಆರ್ಭಟಿಸಿದ ಸರ್ಫರಾಜ್​ ಖಾನ್​, ರಾಜ್​ಕೋಟ್​​ ಟೆಸ್ಟ್​ನೊಂದಿಗೆ ಇಂಟರ್​ನ್ಯಾಷನಲ್​ ಕ್ರಿಕೆಟ್​ಗೆ ಡೆಬ್ಯೂ ಮಾಡಿದ್ರು. ಪದಾರ್ಪಣೆ ಮಾಡಿದ ಪಂದ್ಯದಲ್ಲೇ ಆರ್ಭಟಿಸಿದ ಸರ್ಫರಾಜ್​ ಹಾಫ್​ ಸೆಂಚುರಿ ಸಿಡಿಸಿ ಸಂಭ್ರಮಿಸಿದ್ರು. ಶತಕ ನಿರೀಕ್ಷೆ ಮೂಡಿಸಿದ್ದ ಯುವ ಆಟಗಾರ ದುರಾದೃಷ್ಟವಶಾತ್​​ ರನೌಟ್​ಗೆ ಬಲಿಯಾದ್ರು. ಆದ್ರೆ, ಇದೇ ಆಟ ತ್ರಿಮೂರ್ತಿಗಳಿಗೆ ನಡುಕ ಶುರುವಾಗುವಂತೆ ಮಾಡಿದೆ.

ರಾಹುಲ್, ಕೊಹ್ಲಿ, ಶ್ರೇಯಸ್​ ಸ್ಥಾನಕ್ಕೆ ಕುತ್ತು.!

ಸರ್ಫರಾಜ್​ ಶತಕ ಸಿಡಿಸದೇ ಇದ್ರೂ ತನ್ನ ಆಟದಿಂದ ಎಲ್ಲರನ್ನ ಇಂಪ್ರೆಸ್​ ಮಾಡಿದ್ದಾರೆ. ಇದು ಸೀನಿಯರ್​ಗಳಾದ ಶ್ರೇಯಸ್​​​ ಅಯ್ಯರ್​, ಕೆ.ಎಲ್​ ರಾಹುಲ್​ ಕಮ್​ಬ್ಯಾಕ್​ಗೆ ಅಡ್ಡಗಾಲಾಗಿದೆ. ಜೊತೆಗೆ ವಿರಾಟ್​ ಕೊಹ್ಲಿ ಸ್ಥಾನಕ್ಕೂ ಸರ್ಫರಾಜ್​ ಕುತ್ತು ತಂದಿದ್ದಾರೆ. ಯಾಕಂದ್ರೆ, ಡೊಮೆಸ್ಟಿಕ್​ ಕ್ರಿಕೆಟ್​ನಲ್ಲಿ 4ನೇ ಕ್ರಮಾಂಕದಲ್ಲಿ ಸರ್ಫರಾಜ್​ ಸಾಲಿಡ್​ ರೆಕಾರ್ಡ್​ ಹೊಂದಿದ್ದಾರೆ.

ಧ್ರುವ್​​ ಜುರೆಲ್​ ಡಿಸೆಂಟ್​ ಆಟ.. ಕಿಶನ್​, ಭರತ್​​ಗೆ ಕಂಟಕ.!

3ನೇ ಟೆಸ್ಟ್​ನಲ್ಲಿ ಡೆಬ್ಯು ಮಾಡಿದ ವಿಕೆಟ್​ ಕೀಪರ್​​ ಬ್ಯಾಟ್ಸ್​​ಮನ್​ ಧ್ರುವ್​​ ಜುರೆಲ್​ ಕೂಡ ಡಿಸೆಂಟ್​ ಪರ್ಫಾಮೆನ್ಸ್​ ನೀಡಿದ್ದಾರೆ. ಬರೋಬ್ಬರಿ 104 ಎಸೆತಗಳನ್ನ ತಾಳ್ಮೆಯಿಂದ ಎದುರಿಸಿದ ಜುರೆಲ್​, 46 ರನ್​ಗಳ ಉತ್ತಮ ಇನ್ನಿಂಗ್ಸ್​ ಕಟ್ಟಿದ್ರು. ವಿಕೆಟ್ ಹಿಂದೆಯು ಗಮನ ಸೆಳೆದ್ರು. ಹೀಗಾಗಿ ಜುರೆಲ್ ಆಟ ಬಿಸಿಸಿಐ ಮಾತಿಗೆ ಡೋಂಟ್​​ಕೇರ್ ಅಂದ ಇಶನ್​ ಕಿಶನ್​ ಪಾಲಿಗೆ ತಂಡದ ಬಾಗಿಲನ್ನೇ ಮುಚ್ಚಿಸಿದ್ರೆ, ಸಿಕ್ಕ ಅವಕಾಶವನ್ನ ಕೈ ಚೆಲ್ಲಿದ ಭರತ್​​ಗೂ ಕಂಟಕ ತಂದಿದೆ.

ಶುಭ್​ಮನ್​ ಶೈನ್​​., ಪೂಜಾರ, ರಹಾನೆ ಡೋರ್​​ ಕ್ಲೋಸ್​..!

ಕಳೆದ 2 ವರ್ಷದಿಂದ ಟೀಮ್​ ಇಂಡಿಯಾ ಟೆಸ್ಟ್​ ತಂಡದಲ್ಲಿ ಖಾಯಂ ಸ್ಥಾನಿಯಾಗಿರೋ, ಶುಭ್​ಮನ್​ ಗಿಲ್​ ಆರಂಭಿಕ ಸ್ಲಾಟ್​ನ ಬಳಿಕ ಇದೀಗ ನಂಬರ್​ 3 ಸ್ಲಾಟ್​ನಲ್ಲೂ ಮಿಂಚಿದ್ದಾರೆ. ವೈಜಾಗ್ ಟೆಸ್ಟ್​ನಲ್ಲಿ ಸಾಲಿಡ್​ ಪ್ರದರ್ಶನ ನೀಡಿದ ಶುಭ್​ಮನ್​ ಗಿಲ್​ ಕಮ್​ಬ್ಯಾಕ್​ ಕನವರಿಕೆಯಲ್ಲಿದ್ದ ಚೇತೇಶ್ವರ್​ ಪೂಜಾರಾ, ಅಜಿಂಕ್ಯಾ ರಹಾನೆ ಕನಸಿಗೆ ತಣ್ಣೀರೆರಚಿದ್ದಾರೆ.

ಆರಂಭಿಕನಾಗಿ ಜೈಸ್ವಾಲ್​ ಭವಿಷ್ಯದ ಭರವಸೆ.!

ಟೀಮ್​ ಇಂಡಿಯಾದ ಆರಂಭಿಕನಾಗಿ ಯಶಸ್ವಿ ಜೈಸ್ವಾಲ್​ ಹೊಸ ಭರವಸೆಯನ್ನೇ ಹುಟ್ಟು ಹಾಕಿದ್ದಾರೆ. ವಿಶ್ವದ ಶ್ರೇಷ್ಠ ಬೌಲಿಂಗ್​ ಅಟ್ಯಾಕ್​ ಎದುರಿಗೆ ಯಶಸ್ವಿ ಜೈಸ್ವಾಲ್​ ಸಕ್ಸಸ್​ ಕಂಡಿದ್ದಾರೆ. ಜೊತೆಗೆ ತಮ್ಮ ಆರಂಭಿಕನ ಸ್ಥಾನವನ್ನೂ ಭದ್ರ ಪಡಿಸಿಕೊಂಡಿದ್ದಾರೆ. ಜೈಸ್ವಾಲ್​ ಅಬ್ಬರದ ಆಟ ನೋಡಿದವರು, ರಾಜ್​ಕೋಟ್​ ಟೆಸ್ಟ್​ಗೂ ಮುನ್ನ ಕ್ಯಾಪ್ಟನ್​ ರೋಹಿತ್​ ಶರ್ಮಾರ ಸಾಮರ್ಥ್ಯವನ್ನ ಪ್ರಶ್ನಿಸಿದ್ದು ಸುಳ್ಳಲ್ಲ.

ಅಧಿಕೃತವಾಗಿ ಅಲ್ಲದಿದ್ರೂ ಅನಧಿಕೃತವಾಗಿ ಟೀಮ್​ ಇಂಡಿಯಾದಲ್ಲಿ ಬದಲಾವಣೆಯ ಪರ್ವ ಆರಂಭವಾಗಿದೆ. ಜೂನಿಯರ್ಸ್​​ಗಳು ಸಿಕ್ಕ ಅವಕಾಶದಲ್ಲಿ ಅಬ್ಬರಿಸ್ತಿರೋ ರೀತಿ, ಸೀನಿಯರ್​ಗಳ ಎದೆಯಲ್ಲಿ ನಡುಕ ಹುಟ್ಟಿಸಿದೆ. ಹೀಗಾಗಿ ಇನ್ಮುಂದೆ, ಸೀನಿಯರ್ಸ್​​ಗಳು ಯಾಮಾರಿದ್ರೆ, ಟೆಸ್ಟ್​ ತಂಡದಿಂದಲೇ ಹೊರ ಬೀಳಬೇಕಾಗೋದು ಅನಿವಾರ್ಯತೆ ಸಿಲುಕೊದಂತೂ ಪಕ್ಕಾ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್​ ಇಂಡಿಯಾದಲ್ಲಿ ವಿರಾಟ್ ಕೊಹ್ಲಿ, ಕೆ.ಎಲ್‌ ರಾಹುಲ್, ಶ್ರೇಯಸ್ ಅಯ್ಯರ್​ ಸ್ಥಾನಕ್ಕೆ ಕುತ್ತು?

https://newsfirstlive.com/wp-content/uploads/2024/02/KOHLI_RAHUL_IYAR.jpg

Load More