‘ಈ ಮೂವರು ನನ್ನ ಮಗನ ಕರಿಯರ್​​ ಹಾಳು ಮಾಡಿದ್ರು’- ಸಂಜು ಸ್ಯಾಮ್ಸನ್​ ತಂದೆ ಆಕ್ರೋಶ

author-image
Ganesh Nachikethu
Updated On
KL ರಾಹುಲ್​​, ಇಶಾನ್​​ಗೆ ಬಿಗ್​ ಶಾಕ್​; ಟೀಂ ಇಂಡಿಯಾದಿಂದ ಇಬ್ಬರಿಗೂ ಕೊಕ್​​; ಕಾರಣವೇನು?
Advertisment
  • ಸೆಂಚುರಿಯನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯ
  • ಸೌತ್​ ಆಫ್ರಿಕಾ ವಿರುದ್ಧ ಟೀಮ್​ ಇಂಡಿಯಾಗೆ ಗೆಲುವು
  • ಶೂನ್ಯಕ್ಕೆ ಔಟಾದ ಸ್ಟಾರ್​ ಕ್ರಿಕೆಟರ್​ ಸಂಜು ಸ್ಯಾಮ್ಸನ್​​

ಸೆಂಚುರಿಯನ್‌ನಲ್ಲಿ ನಡೆದ ಮೂರನೇ ಟಿ20 ಪಂದ್ಯದಲ್ಲಿ ಸೌತ್​ ಆಫ್ರಿಕಾ ವಿರುದ್ಧ ಟೀಮ್​​ ಇಂಡಿಯಾ 11 ರನ್​ಗಳಿಂದ ಗೆದ್ದು ಬೀಗಿದೆ. ನಾಲ್ಕು ಪಂದ್ಯಗಳ ಟಿ20 ಸರಣಿಯಲ್ಲಿ 2-1ರಿಂದ ಮುನ್ನಡೆ ಸಾಧಿಸಿದೆ. ಸೌತ್​ ಆಫ್ರಿಕಾ ವಿರುದ್ಧ ಮೊದಲ ಪಂದ್ಯದಲ್ಲಿ ಸ್ಫೋಟಕ ಶತಕ ಸಿಡಿಸಿ ಭಾರೀ ಸುದ್ದಿಯಾದವರು ಸಂಜು ಸ್ಯಾಮ್ಸನ್​​. ಈಗ ಇವರು ತಮ್ಮ ತಂದೆಯಿಂದ ಸುದ್ದಿಯಾಗಿದ್ದಾರೆ.

ಯೆಸ್​​, ನವೆಂಬರ್ 8ನೇ ತಾರೀಕು ನಡೆದ ಮೊದಲ ಟಿ20 ಪಂದ್ಯದಲ್ಲಿ ಟೀಮ್​ ಇಂಡಿಯಾದ ಸ್ಟಾರ್​ ವಿಕೆಟ್​ ಕೀಪರ್​ ಸಂಜು ಸ್ಯಾಮ್ಸನ್​​ 50 ಎಸೆತಗಳಲ್ಲಿ 107 ರನ್‌ಗಳ ಅದ್ಭುತ ಶತಕ ಬಾರಿಸಿದ್ರು. ಇದಾದ ಬಳಿಕ ನಡೆದ ಸತತ 2 ಪಂದ್ಯಗಳಲ್ಲೂ ಖಾತೆ ತೆರೆಯಲು ಸಾಧ್ಯವಾಗದೆ ಶೂನ್ಯಕ್ಕೆ ಔಟಾದ್ರು.

ಸಂಜು ಸ್ಯಾಮ್ಸನ್​​ ತಂದೆ ವಿಡಿಯೋ ವೈರಲ್​

ಟೀಮ್​ ಇಂಡಿಯಾ, ಸೌತ್​ ಆಫ್ರಿಕಾ ಟಿ20 ಸರಣಿ ಮಧ್ಯೆಯೇ ​ಸಂಜು ಸ್ಯಾಮ್ಸನ್ ತಂದೆ ವಿಶ್ವನಾಥ್ ಮಾತಾಡಿರೋ ವಿಡಿಯೋ ಸೋಷಿಯಲ್​​ ಮೀಡಿಯಾದಲ್ಲಿ ಭಾರೀ ಸದ್ದು ಮಾಡುತ್ತಿದೆ. ಭಾರತ ಕ್ರಿಕೆಟ್​​​ ತಂಡದ ಮೂವರು ನಾಯಕರು ಮತ್ತು ಮುಖ್ಯ ಕೋಚ್​ ಆಗಿದ್ದವ್ರು ತಮ್ಮ ಮಗನ ಕ್ರಿಕೆಟ್​ ಜೀವನ ಹಾಳು ಮಾಡಿದ್ರು ಎಂದು ವಿಶ್ವನಾಥ್​ ಆಕ್ರೋಶ ಹೊರಹಾಕಿದ್ದಾರೆ.

ವಿಶ್ವನಾಥ್​ ಏನಂದ್ರು?

ಟೀಮ್ ಇಂಡಿಯಾದ ದಿಗ್ಗಜರಾದ ಎಂಎಸ್ ಧೋನಿ, ರೋಹಿತ್ ಶರ್ಮಾ ಮತ್ತು ವಿರಾಟ್ ಕೊಹ್ಲಿ ಹಾಗೂ ಮಾಜಿ ಕೋಚ್​​ ರಾಹುಲ್ ದ್ರಾವಿಡ್ ಸಂಜುವಿನ 10 ವರ್ಷಗಳನ್ನು ವ್ಯರ್ಥ ಮಾಡಿದ್ರು ಎಂದರು ವಿಶ್ವನಾಥ್​​.

ಗಂಭೀರ್ -ಸೂರ್ಯಗೆ ಥ್ಯಾಂಕ್ಸ್​ ಎಂದ್ರು!

ಇನ್ನು, ನನ್ನ ಮಗ ಪ್ರತಿಭಾವಂತ ಕ್ರಿಕೆಟರ್​​. ಸಂಜು ಅವರನ್ನು ಪ್ರೋತ್ಸಾಹಿಸಿದಕ್ಕೆ ಹೆಡ್ ಕೋಚ್ ಗೌತಮ್ ಗಂಭೀರ್ ಮತ್ತು ಭಾರತ ಟಿ20 ತಂಡದ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ ಧನ್ಯವಾದಗಳು ಎಂದರು.

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment