newsfirstkannada.com

×

4,4,4,4,4,4,4,4,4,4,4,4,4,4,4,4,4,4,4,4,4,4,4,4,4; ಭರ್ಜರಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಭಾರತದ ಯುವ ಬ್ಯಾಟರ್​​

Share :

Published October 2, 2024 at 5:48pm

Update October 2, 2024 at 6:02pm

    ಲಕ್ನೋದ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ನಡೆಯುತ್ತಿರೋ ಇರಾನಿ ಕಪ್​​​

    ಇರಾನಿ ಕಪ್​​ ಪಂದ್ಯದಲ್ಲಿ ರೆಸ್ಟ್​ ಆಫ್​ ಇಂಡಿಯಾ ಮತ್ತು ಮುಂಬೈ ಮುಖಾಮುಖಿ!

    ಭರ್ಜರಿ ದ್ವಿಶತಕ ಸಿಡಿಸಿ ಸಂಭ್ರಮಿಸಿದ ಟೀಮ್​ ಇಂಡಿಯಾದ ಯುವ ಬ್ಯಾಟರ್​​​

ಲಕ್ನೋದ ಇಂಟರ್​ ನ್ಯಾಷನಲ್​ ಸ್ಟೇಡಿಯಮ್​ನಲ್ಲಿ ಮುಂಬೈ ಮತ್ತು ರೆಸ್ಟ್​ ಆಫ್​ ಇಂಡಿಯಾ ಮಧ್ಯೆ ಇರಾನಿ ಕಪ್​​​ 2024ರ ಮಹತ್ವದ ಪಂದ್ಯ ನಡೆಯುತ್ತಿದೆ. ಈ ಪಂದ್ಯದಲ್ಲಿ ಟೀಮ್​ ಇಂಡಿಯಾದ ಯುವ ಬ್ಯಾಟರ್​​​ ಸರ್ಫರಾಜ್ ಖಾನ್ ದ್ವಿಶತಕ ಸಿಡಿಸಿ ಸಂಭ್ರಮಿಸಿದ್ದಾರೆ.

ಇರಾನಿ ಕಪ್‌ನಲ್ಲಿ ಮುಂಬೈ ಪರ ಬ್ಯಾಟ್​​ ಬೀಸಿದ ಸರ್ಫರಾಜ್ ಡಬಲ್ ಸೆಂಚುರಿ ಬಾರಿಸಿದ್ರು. ಮಹತ್ವದ ಪಂದ್ಯದ 2ನೇ ದಿನದಂದು ಮುಂಬೈ ಪರ 4ನೇ ಕ್ರಮಾಂಕದಲ್ಲಿ ಬ್ಯಾಟಿಂಗ್​ ಮಾಡಿದ ಸರ್ಫರಾಜ್ ರೆಸ್ಟ್​ ಇಂಡಿಯಾ ಬೌಲರ್​ಗಳ ಬೆವರಿಳಿಸಿದ್ರು.

25 ಫೋರ್​​, 4 ಭರ್ಜರಿ ಸಿಕ್ಸರ್​​!

ರೆಸ್ಟ್ ಆಫ್ ಇಂಡಿಯಾದ ಬೌಲರ್​ಗಳನ್ನು ಸಮರ್ಥವಾಗಿ ಎದುರಿಸಿದ ಸರ್ಫರಾಜ್ ಮತ್ತೊಮ್ಮೆ ತಮ್ಮ ಬ್ಯಾಟಿಂಗ್ ಬಲ ಪ್ರದರ್ಶಿಸಿದ್ರು. ತಾನು ಎದುರಿಸಿದ 272 ಎಸೆತಗಳಲ್ಲಿ ಬರೋಬ್ಬರಿ 25 ಫೋರ್​ ಮತ್ತು 4 ಸಿಕ್ಸರ್​​​ನಿಂದ ಅಜೇಯ 219 ರನ್‌ಗಳಿಸಿ ಆಟ ಮುಂದುರೆಸಿದ್ದಾರೆ. ದ್ವಿಶತಕ ಸಿಡಿಸುವ ಮೂಲಕ ಯುವ ಬ್ಯಾಟರ್​ ಸರ್ಫರಾಜ್​ ಖಾನ್​​ ಭಾರತದ ದಿಗ್ಗಜ ಕ್ರಿಕೆಟರ್ಸ್​ ಆದ ಸಚಿನ್​ ಮತ್ತು ರಾಹುಲ್​ ದ್ರಾವಿಡ್​ ದಾಖಲೆ ಮುರಿದರು.

ಇರಾನಿ ಕಪ್‌ನಲ್ಲಿ 4 ಪಂದ್ಯಗಳನ್ನು ಆಡಿರೋ ಸಚಿನ್ ಮತ್ತು ದ್ರಾವಿಡ್ ತಲಾ 2 ಶತಕ ಹೊಂದಿದ್ದಾರೆ. ಸರ್ಫರಾಜ್ ಅವರಿಗಿಂತಲೂ ಒಂದು ಪಂದ್ಯ ಕಡಿಮೆ ಆಡಿದ್ರೂ ಎರಡು ಶತಕದ ಸಾಧನೆ ಮಾಡಿದ್ದಾರೆ.

ಇದನ್ನೂ ಓದಿ: ರಾತ್ರೋರಾತ್ರಿ ಕ್ಯಾಪ್ಟನ್ಸಿ ತೊರೆದು ಬಿಗ್​ ಶಾಕ್​ ಕೊಟ್ಟ ಸ್ಟಾರ್​ ಕ್ರಿಕೆಟರ್​​.. ಕಾರಣವೇನು ಗೊತ್ತಾ?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

4,4,4,4,4,4,4,4,4,4,4,4,4,4,4,4,4,4,4,4,4,4,4,4,4; ಭರ್ಜರಿ ದ್ವಿಶತಕ ಸಿಡಿಸಿ ದಾಖಲೆ ಬರೆದ ಭಾರತದ ಯುವ ಬ್ಯಾಟರ್​​

https://newsfirstlive.com/wp-content/uploads/2023/06/Sarfaraz_khan_2.jpg

Load More