Advertisment

ಅಟ್ಟರ್​​ ಫ್ಲಾಪ್​ ಫೀಲ್ಡಿಂಗ್.. ಒಂದೇ ಇನ್ನಿಂಗ್ಸ್​ನಲ್ಲಿ ಭಾರತ ಕೈಚೆಲ್ಲಿದ ಕ್ಯಾಚ್​​​ಗಳ ಸಂಖ್ಯೆ ಎಷ್ಟು?

author-image
Ganesh
Updated On
KL ರಾಹುಲ್, ಪಂತ್, ಗಿಲ್, ಜೈಸ್ವಾಲ್​ ಬ್ಯಾಟಿಂಗ್​ ಓಕೆ.. ಉಳಿದ ಆಟಗಾರರ ಪರ್ಫಾಮೆನ್ಸ್​​ಗೆ ಬೇಸರ!
Advertisment
  • ಟೀಮ್​ ಇಂಡಿಯಾಗೆ ಹೊರೆಯಾದ ಕ್ಯಾಚ್​ ಡ್ರಾಪ್
  • ಕೈಗೆ ಬಂದ ಕ್ಯಾಚ್​ಗಳನ್ನ ಕೈಚೆಲ್ಲಿದ ಫೀಲ್ಡರ್ಸ್​
  • 3 ಸುಲಭದ ಕ್ಯಾಚ್​ ಬಿಟ್ಟ ಯಶಸ್ವಿ ಜೈಸ್ವಾಲ್

ಲೀಡ್ಸ್​​ ಟೆಸ್ಟ್​​ನ ಮೊದಲ ಇನ್ನಿಂಗ್ಸ್​ನಲ್ಲಿ ಬಿಗ್​ಸ್ಕೋರ್​ ಕಲೆ ಹಾಕಿ ಟೀಮ್​ ಇಂಡಿಯಾ ಪಾರಮ್ಯ ಮರೆದಿತ್ತು. ಆದ್ರೀಗ ಪಂದ್ಯದ ಮೇಲೆ ಇಂಗ್ಲೆಂಡ್​ ಹಿಡಿತ ಸಾಧಿಸಿದೆ. ಟೀಮ್​ ಇಂಡಿಯಾ ಬೌಲಿಂಗ್​​ನಲ್ಲಿ ಎಡವಿತಾ? ಇಲ್ಲ, ಟೀಮ್​ ಇಂಡಿಯಾ ಹಿನ್ನಡೆಗೆ ಬೌಲರ್​ಗಳಲ್ಲ ಕಾರಣ. ಅಟ್ಟರ್​​ ಫ್ಲಾಪ್​ ಫೀಲ್ಡಿಂಗ್​!

Advertisment

ಕ್ಯಾಚ್​​ ನಂ.1: ಬೆನ್​ ಡಕೆಟ್​ಗೆ ಜೈಸ್ವಾಲ್​ ಜೀವದಾನ

ಇನ್ನಿಂಗ್ಸ್​ ಆರಂಭದಲ್ಲೇ ಇಂಗ್ಲೆಂಡ್​​ಗೆ ಆಘಾತ ನೀಡೋ ಸುವರ್ಣಾವಕಾಶ ಭಾರತಕ್ಕೆ ಸಿಕ್ಕಿತ್ತು. ಬೂಮ್ರಾ ಬೌಲಿಂಗ್​ನಲ್ಲಿ ಎಡ್ಜ್​ ಆದ ಬಾಲ್​ ಸೀದಾ ಯಶಸ್ವಿ ಜೈಸ್ವಾಲ್​ ಇದ್ದ ಕಡೆ ಬಂತು. ಬೂಮ್ರಾ ಕ್ರಿಯೆಟ್​ ಮಾಡಿದ್ದ ಅವಕಾಶವನ್ನು ಜೈಸ್ವಾಲ್​​ ಮಣ್ಣು ಪಾಲು ಮಾಡಿದರು. ಕ್ಯಾಚ್​ ಕೈಚೆಲ್ಲಿ ಜೀವದಾನ ನೀಡಿದರು.

ಇದನ್ನೂ ಓದಿ: ಕೈಕೊಟ್ಟ ಜೈಸ್ವಾಲ್, ಸಾಯಿ.. ಟೀಂ ಇಂಡಿಯಾಗೆ ಕನ್ನಡಿಗ KL ರಾಹುಲ್ ಆಸರೆ, ಭರವಸೆ..!

ಕ್ಯಾಚ್​​ ನಂ.2: ಸುಲಭದ ಕ್ಯಾಚ್​ ಕೈಚೆಲ್ಲಿದ ಜಡೇಜಾ

7ನೇ ಓವರ್​ ಕೊನೆಯ ಎಸೆತದಲ್ಲಿ ಡಕೆಟ್​ಗೆ ಪೆವಿಲಿಯನ್​ ದಾರಿ ತೋರಿಸೋ ಮತ್ತೊಂದು ಅವಕಾಶ ಸಿಕ್ಕಿತ್ತು. ಮತ್ತೊಮ್ಮೆ ಬೂಮ್ರಾ ನಿರಾಸೆ ಅನುಭವಿಸಿದ್ರು. ಬ್ಯಾಕ್​ ವರ್ಡ್​ ಪಾಯಿಂಟ್​ನಲ್ಲಿದ್ದ ರವೀಂದ್ರ ಜಡೇಜಾ ಕ್ಯಾಚ್​ ಡ್ರಾಪ್​ ಮಾಡಿ ಡಕೆಟ್​ಗೆ ಮತ್ತೊಂದು ಲೈಫ್​ ನೀಡಿದ್ರು. ಆಗ ಡಕೆಟ್​ಗಳಿಸಿದ್ದು ಜಸ್ಟ್​ 15 ರನ್​ ಮಾತ್ರ. ಅಂತಿಮವಾಗಿ ಡಕೆಟ್​ ಔಟಾಗಿದ್ದು 62 ರನ್​ಗೆ.

Advertisment

ಕ್ಯಾಚ್​​ ನಂ.3: ಒಲಿ ಪೋಪ್​ಗೆ ಲೈಫ್​, ಜೈಸ್ವಾಲ್​​ 2ನೇ ಡ್ರಾಪ್​

31ನೇ ಓವರ್​ನ ಕೊನೆಯ ಎಸೆತ.. ವೇಗಿ ಜಸ್​​ಪ್ರಿತ್​ ಬೂಮ್ರಾ ರಣವ್ಯೂಹಕ್ಕೆ ಇಂಗ್ಲೆಂಡ್​ನ ಓಲೀಪೊಪ್​ ಬಿದ್ದಿದ್ರು. ಒನ್ಸ್​ ಅಗೇನ್​ ಯಶಸ್ವಿ ಜೈಸ್ವಾಲ್​ ಕ್ಯಾಚ್​ ಕೈಚೆಲ್ಲಿ ಜೀವದಾನ ನೀಡಿದ್ರು. ಆಗ ಒಲಿ ಪೋಪ್ 60 ರನ್​​ಗಳಿಸಿದ್ರು. ಜೀವದಾನ ಸಿಕ್ಕ ಬಳಿಕ ಅದ್ಭುತ ಶತಕ ಸಿಡಿಸಿದ್ರು.

ಇದನ್ನೂ ಓದಿ: KL ರಾಹುಲ್​ಗೆ ಕ್ರಿಕೆಟ್ ಮೇಲಿರುವ ಪ್ರೀತಿಗೆ ಸೋತ ಅಭಿಮಾನಿಗಳು.. ಜರ್ಸಿಯೊಳಗೆ ಬ್ಯಾಟ್, ಆಗಿದ್ದೇನು?

ಕ್ಯಾಚ್​​ ನಂ.4: ಹ್ಯಾರಿ ಬ್ರೂಕ್ ಕ್ಯಾಚ್​ ಬಿಟ್ಟ ಪಂತ್

ಇಂಗ್ಲೆಂಡ್​ನ ಡೇಂಜರಸ್​ ಬ್ಯಾಟರ್​ ಹ್ಯಾರಿ ಬ್ಯೂಕ್​ 46 ರನ್​ಗಳಿಸಿದ್ದಾಗಲೇ ಔಟಾಗಬೇಕಿತ್ತು. ಜಡೇಜಾ ಬೌಲಿಂಗ್​ನಲ್ಲಿ ಎಡ್ಜ್​​ ಆಗಿದ್ದ ಬಾಲ್​ನ ಪಂತ್​ ಹಿಡಿಲೇ ಇಲ್ಲ. ಕೈಯಲ್ಲಿ ಗ್ಲೌಸ್​​ ಇದ್ರೂ ಕ್ಯಾಚ್​ ಕೈ ಬಿಟ್ರು. ಜೀವದಾನ ಪಡೆದ ಬ್ರೂಕ್​, ಇಂಡಿಯನ್​ ಬೌಲರ್​ಗಳ ಮೇಲೆ ಸವಾರಿ ಮಾಡಿದ್ರು.

Advertisment

ಕ್ಯಾಚ್​​ ನಂ.5: ಮತ್ತೊಂದು ಕ್ಯಾಚ್​​ ಬಿಟ್ಟ ಜೈಸ್ವಾಲ್​

ಬ್ಯಾಟಿಂಗ್​ನಲ್ಲಿ ಯಶಸ್ಸು ಕಂಡ ಯಶಸ್ವಿ ಜೈಸ್ವಾಲ್​ ಫೀಲ್ಡಿಂಗ್​ನಲ್ಲಿ ಯಶಸ್ಸು ಸಿಗಲಿಲ್ಲ. ಇನ್ನಿಂಗ್ಸ್​ನ 85ನೇ ಓವರ್​ ಕೊನೆಯ ಎಸೆತ ಅದು. ಬೂಮ್ರಾ ಬೌಲಿಂಗ್​​ನಲ್ಲಿ ಬ್ರೂಕ್​ ಬ್ಯಾಟ್​ಗೆ ಸವರಿದ ಚೆಂಡು ಗಲ್ಲಿಯಲ್ಲಿದ್ದ ಜೈಸ್ವಾಲ್​ ಕೈಗೆ ಹೋಗಿತ್ತು. ಒನ್ಸ್​ ಅಗೇನ್​ ಸುಲಭದ ಕ್ಯಾಚ್​ನ ಜೈಸ್ವಾಲ್​, ಡ್ರಾಪ್​ ಮಾಡಿದ್ರು.

ಒಟ್ಟಿನಲ್ಲಿ ಲೀಡ್ಸ್​​ ಅಂಗಳದಲ್ಲಿ ಟೀಮ್​ ಇಂಡಿಯಾ ಸ್ಟ್ಯಾಂಡರ್ಡ್​ಗೆ ತಕ್ಕಂತೆ ಫೀಲ್ಡಿಂಗ್​ ಮಾಡಲಿಲ್ಲ. ಸಿಕ್ಕ ಅವಕಾಶಗಳನ್ನ ಎರಡೂ ಕೈಯಿಂದ ಬಾಚಿಕೊಂಡಿದ್ರೆ, ಸಲೀಸಾಗಿ ಒಳ್ಳೇ ಲೀಡ್​ ತೆಗೆದುಕೊಳ್ಳಬಹುದಿತ್ತು. ಈಗ ಮತ್ತೊಮ್ಮೆ ಬಿಗ್​ ಟಾರ್ಗೆಟ್​​ ಸೆಟ್​ ಮಾಡಬೇಕಾದ ಸಂಕಷ್ಟಕ್ಕೆ ಟೀಮ್​ ಇಂಡಿಯಾ ಸಿಲುಕಿದೆ. 2ನೇ ಇನ್ನಿಂಗ್ಸ್​ನಲ್ಲಾದ್ರೂ ಟೀಮ್​ ಇಂಡಿಯಾದ ಫೀಲ್ಡಿಂಗ್​ ಬದಲಾಗಬೇಕಿದೆ. ಇಲ್ಲದಿದ್ರೆ ಸೋಲೇ ಗತಿ.

ಇದನ್ನೂ ಓದಿ: ಟೀಂ ಇಂಡಿಯಾ ಮಾಡಿದ 3 ಬಿಗ್ ಮಿಸ್ಟೇಕ್ಸ್​​.. ತಪ್ಪುಗಳಿಗೆ ಗಿಲ್ ಪಡೆ ಬೆಲೆ ತೆತ್ತಿದೆ..!

Advertisment

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment
Advertisment
Advertisment