/newsfirstlive-kannada/media/post_attachments/wp-content/uploads/2025/05/Virat-kohli-8.jpg)
ಐಪಿಎಲ್ನಲ್ಲಿ ಈ ಸಲ ಫೈನಲ್ ಪ್ರವೇಶ ಮಾಡಲಿರುವ ಎರಡು ತಂಡಗಳು ಯಾವುದು ಅಂತಾ ಟೀಂ ಇಂಡಿಯಾದ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಭವಿಷ್ಯ ನುಡಿದಿದ್ದಾರೆ.
ಮುಂಬೈ ಇಂಡಿಯನ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ನಡುವೆ ಫೈನಲ್ ನಡೆಯಬಹುದು ಎಂದು ಭಜ್ಜಿ ಊಹಿಸಿದ್ದಾರೆ. ಶನಿವಾರ ಚೆನ್ನೈ ಮತ್ತು ಬೆಂಗಳೂರು ಮುಖಾಮುಖಿ ಆಗಿದ್ದವು. ಈ ಪಂದ್ಯದ ವೀಕ್ಷಕ ವಿವರಣೆ ವೇಳೆ ಹರ್ಭಜನ್ ಸಿಂಗ್ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಈ ಬಾರಿ ಎರಡೂ ತಂಡಗಳು ಉತ್ತಮ ಫಾರ್ಮ್‌ನಲ್ಲಿವೆ. ಆರ್‌ಸಿಬಿ 16 ಅಂಕಗಳನ್ನು ಗಳಿಸುವ ಮೂಲಕ ಪ್ಲೇಆಫ್‌ನಲ್ಲಿ ಸ್ಥಾನ ಭದ್ರಪಡಿಸಿಕೊಂಡಿದೆ. 16 ಅಂಕಗಳನ್ನು ಗಳಿಸಿದ ಮೇಲೂ ಪ್ಲೇಆಫ್ ತಲುಪಲು ವಿಫಲವಾದ ತಂಡವನ್ನು ನಾನು ನೋಡಿಲ್ಲ. ಹೀಗಾಗಿ ಬೆಂಗಳೂರು ಪ್ಲೇ-ಆಫ್ ತಲುಪುವುದು ಖಚಿತ. ಅಲ್ಲದೇ ಈ ಬಾರಿ ಆರ್‌ಸಿಬಿ, ಕೊಹ್ಲಿಯ ಮೇಲೆ ಸಂಪೂರ್ಣವಾಗಿ ಅವಲಂಬಿತವಾಗಿಲ್ಲ. ಪ್ರತಿಯೊಂದು ಪಂದ್ಯದಲ್ಲೂ ಒಬ್ಬ ಹೊಸ ಆಟಗಾರ ತಂಡವನ್ನು ಗೆಲ್ಲಿಸುತ್ತಿದ್ದಾನೆ. ಪಂದ್ಯದ ನಾಯಕನಾಗುತ್ತಿದ್ದಾನೆ ಎಂದಿದ್ದಾರೆ.
ಇದನ್ನೂ ಓದಿ: ಆರೆಂಜ್ ಕ್ಯಾಪ್ಗಾಗಿ ರನ್ ವಾರ್.. 4 ದಿನದಲ್ಲಿ ಮೂವರ ಪಾಲು..!
ಮುಂಬೈ ಇಂಡಿಯನ್ಸ್ ಕೆಟ್ಟ ಆರಂಭ ಪಡೆದಿತ್ತು. ಈಗ ಅದು ಗೆಲುವಿನ ಹಾದಿಯಲ್ಲಿದೆ. ಮುಂಬೈ ತಂಡ ಸತತ ಆರು ಪಂದ್ಯಗಳನ್ನು ಗೆದ್ದು ಪ್ಲೇಆಫ್ ಪ್ರವೇಶಿಸುವ ಸನಿಹದಲ್ಲಿದೆ. ಮುಂಬೈ ಇದೇ ಶೈಲಿಯಲ್ಲಿ ಆಟ ಮುಂದುವರಿಸಿದರೆ ಅಗ್ರ -2ರಲ್ಲಿ ಲೀಗ್ ಮುಗಿಸಲಿದೆ ಅನ್ನೋ ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಇನ್ನು, ಪಾಯಿಂಟ್ಸ್ ಪಟ್ಟಿಯಲ್ಲಿ ಆರ್‌ಸಿಬಿ ಅಗ್ರಸ್ಥಾನದಲ್ಲಿದೆ. ಮುಂಬೈ ಇಂಡಿಯನ್ಸ್ ಮೂರನೇ ಸ್ಥಾನದಲ್ಲಿದೆ. ಬೆಂಗಳೂರು 11 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕಗಳನ್ನು ಗಳಿಸಿದ್ದರೆ, ಕೇವಲ 3 ಪಂದ್ಯಗಳಲ್ಲಿ ಮಾತ್ರ ಸೋತಿದೆ. ಮುಂಬೈ ಇಂಡಿಯನ್ಸ್ ಕೂಡ 11 ಪಂದ್ಯಗಳನ್ನು ಆಡಿದ್ದು, 7 ಪಂದ್ಯಗಳನ್ನು ಗೆದ್ದು 4ರಲ್ಲಿ ಸೋತಿದೆ. ಈ ಎರಡೂ ತಂಡಗಳಿಗೆ ಇನ್ನೂ ಮೂರು ಪಂದ್ಯಗಳು ಬಾಕಿ ಇವೆ.
ಇದನ್ನೂ ಓದಿ: ಕೊಹ್ಲಿಯಿಂದಾಗಿ ಮಗನ ಲಕ್ ಬದಲಾಯಿತು -ದೊಡ್ಡ ಗುಣ ಬಿಚ್ಚಿಟ್ಟ RCB ಸ್ಟಾರ್ ಬೌಲರ್ನ ತಂದೆ..!
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ 'ರನ್ ಭೂಮಿ' ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್