ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಕೀರ್ತಿ ಆಜಾದ್ ಪತ್ನಿ ನಿಧನ
ಬಹಳ ದಿನಗಳಿಂದ ಅನಾರೋಗ್ಯದಿಂದ ತೀವ್ರವಾಗಿ ಬಳಲುತ್ತಿದ್ದ ಪೂನಂ
ಮಾಜಿ ಕ್ರಿಕೆಟರ್ ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಕೊನೆಯುಸಿರು..!
ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್ ಕೀರ್ತಿ ಆಜಾದ್ ಅವರ ಪತ್ನಿ ಪೂನಂ ಇಂದು ನಿಧನರಾಗಿದ್ದಾರೆ. ಈ ದುಃಖದ ವಿಷಯವನ್ನು ಮಾಜಿ ಕ್ರಿಕೆಟರ್ ಮತ್ತು ತೃಣಮೂಲ ಕಾಂಗ್ರೆಸ್ ಸಂಸದ ಆಗಿರೋ ಕೀರ್ತಿ ಆಜಾದ್ ಅವರು ತನ್ನ ಸೋಷಿಯಲ್ ಮೀಡಿಯಾ ಖಾತೆ ಮೂಲಕ ಹಂಚಿಕೊಂಡಿದ್ದಾರೆ.
“ನನ್ನ ಪತ್ನಿ ಪೂನಂ ಇನ್ನಿಲ್ಲ. ಮಧ್ಯಾಹ್ನ 12.40 ಗಂಟೆಗೆ ಸ್ವರ್ಗಸ್ಥರಾದರು. ನಿಮ್ಮ ಸಂತಾಪಕ್ಕಾಗಿ ಎಲ್ಲರಿಗೂ ಧನ್ಯವಾದಗಳು” ಎಂದಿದ್ದಾರೆ ಕೀರ್ತಿ ಆಜಾದ್. ಪೂನಂ ಬಹಳ ದಿನಗಳಿಂದ ಅನಾರೋಗ್ಯದಿಂದ ತೀವ್ರವಾಗಿ ಬಳಲುತ್ತಿದ್ದು, ಇಂದು ಕೊನೆಯುಸಿರೆಳೆದಿದ್ದಾರೆ.
ಕೀರ್ತಿ ಆಜಾದ್ ಯಾರು?
ಕೀರ್ತಿ ಆಜಾದ್ ಟೀಮ್ ಇಂಡಿಯಾದ ಮಾಜಿ ಕ್ರಿಕೆಟರ್. 1983ರ ವಿಶ್ವಕಪ್ ವಿಜೇತ ಭಾರತ ತಂಡದ ಭಾಗವಾಗಿದ್ದರು. ಕಳೆದ ಲೋಕಸಭಾ ಚುನಾವಣೆಯಲ್ಲಿ ಬರ್ಧಮಾನ್-ದುರ್ಗಾಪುರ ಕ್ಷೇತ್ರದಲ್ಲಿ ಟಿಎಂಸಿಯಿಂದ ಸ್ಪರ್ಧಿಸಿ ಗೆದ್ದಿದ್ದರು.
ಇನ್ನು, ಪೂನಂ ಸಾವಿಗೆ ಪಶ್ಚಿಮ ಬಂಗಾಳದ ಸಿಎಂ ಮತ್ತು ಟಿಎಂಸಿ ವರಿಷ್ಠೆ ಮಮತಾ ಬ್ಯಾನರ್ಜಿ ಅವರು ಸಂತಾಪ ಸಂತಾಪ ಸೂಚಿಸಿದ್ದಾರೆ. ಅಷ್ಟೇ ಅಲ್ಲದೇ ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಕೂಡ ಪತ್ನಿಯ ನಿಧನದ ದುಃಖವನ್ನು ತಡೆಯುವ ಶಕ್ತಿ ದೇವರು ನೀಡಲಿ ಎಂದು ಕೀರ್ತಿ ಆಜಾದ್ಗೆ ಸಂತಾಪ ತಿಳಿಸಿದ್ದಾರೆ.
ಇದನ್ನೂ ಓದಿ: ಧೋನಿಯನ್ನ ನಾನು ಕ್ಷಮಿಸಲ್ಲ, ಮಗನ ಬದುಕು ನಾಶ ಮಾಡಿದ; ಮಾಜಿ ಕ್ರಿಕೆಟಿಗನ ತಂದೆ ಗಂಭೀರ ಆರೋಪ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ