ಪಾಕ್​ ತಂಡದ ಕ್ರಿಕೆಟ್​ ಕೋಚ್​​​ ಆಗೋ ಬಯಕೆ ವ್ಯಕ್ತಪಡಿಸಿದ ಯುವರಾಜ್​ ಸಿಂಗ್​ ತಂದೆ; ಏನಂದ್ರು..?

author-image
Ganesh Nachikethu
Updated On
ಪಾಕ್​ ತಂಡದ ಕ್ರಿಕೆಟ್​ ಕೋಚ್​​​ ಆಗೋ ಬಯಕೆ ವ್ಯಕ್ತಪಡಿಸಿದ ಯುವರಾಜ್​ ಸಿಂಗ್​ ತಂದೆ; ಏನಂದ್ರು..?
Advertisment
  • ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿ
  • ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಪಾಕ್
  • ಪಾಕ್​ ಕೋಚ್​​ ಆಗುತ್ತೇನೆ ಎಂದ ಇಂಡಿಯನ್​​!

ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿಯಿಂದ ಪಾಕ್​​ ತಂಡ ಹೊರಬಿದ್ದಿದೆ. ಈ ಬೆನ್ನಲ್ಲೇ ಪಾಕ್​​ ತಂಡದ ವಿರುದ್ಧ ಸಾಕಷ್ಟು ಟೀಕೆಗಳು ಎದುರಾಗಿವೆ. ಮೊದಲ ಪಂದ್ಯದಲ್ಲಿ ನ್ಯೂಜಿಲೆಂಡ್​ ವಿರುದ್ಧ ಸೋತಿದ್ದ ಪಾಕ್​​ ನಂತರ ಟೀಮ್​ ಇಂಡಿಯಾ ವಿರುದ್ಧವೂ ಸೋಲು ಕಂಡಿದೆ.

ಇತ್ತೀಚೆಗೆ ವೈಟ್ ಬಾಲ್ ಕ್ರಿಕೆಟ್‌ನಲ್ಲಿ ಪಾಕ್​ ತಂಡ ಹೇಳಿಕೊಳ್ಳುವಂತ ಪ್ರದರ್ಶನವೇನು ನೀಡುತ್ತಿಲ್ಲ. ಈ ಹೊತ್ತಲ್ಲೇ ಪಾಕ್​ ತಂಡಕ್ಕೆ ಕೋಚ್​ ಆಗೋ ಬಯಕೆಯನ್ನು ಟೀಮ್​​ ಇಂಡಿಯಾ ಮಾಜಿ ಕ್ರಿಕೆಟರ್​ ವ್ಯಕ್ತಪಡಿಸಿದ್ದಾರೆ.

ಏನಂದ್ರು ಯುವಿ ತಂದೆ?

ಟೀಮ್​ ಇಂಡಿಯಾದ ದಿಗ್ಗಜ ಯೋಗರಾಜ್ ಸಿಂಗ್. ಇವರು ಮಾಜಿ ವಿಶ್ವ ಚಾಂಪಿಯನ್ ಕ್ರಿಕೆಟಿಗ ಯುವರಾಜ್ ಸಿಂಗ್ ತಂದೆ. ಚಾಂಪಿಯನ್ಸ್ ಟ್ರೋಫಿಯಿಂದ ಹೊರಬಿದ್ದ ಬೆನ್ನಲ್ಲೇ ಪಾಕ್​ ಮಾಜಿ ಆಟಗಾರರನ್ನು ಯೋಗರಾಜ್​ ಸಿಂಗ್​​ ತರಾಟೆಗೆ ತೆಗೆದುಕೊಂಡಿದ್ದಾರೆ. ನನಗೆ ಒಂದು ವರ್ಷ ನೀಡಿದ್ರೆ ಸಾಕು ಪಾಕ್​ ತಂಡವನ್ನು ಸರಿ ಮಾಡುತ್ತೇನೆ ಎಂದಿದ್ದಾರೆ ಯುವಿ ತಂದೆ.

publive-image

ಶೋಯೆಬ್ ಅಖ್ತರ್ ಮತ್ತು ವಾಸಿಂ ಅಕ್ರಮ್ ಪಾಕ್​ ಕಂಡ ಅದ್ಭುತ ಆಟಗಾರರು. ಕಾಮೆಂಟರಿ ಮೂಲಕ ದುಡ್ಡು ಮಾಡುತ್ತಿರೋ ನೀವು ಏಕೆ ನಿಮ್ಮ ದೇಶದ ಆಟಗಾರರ ಸಮಸ್ಯೆ ಕೇಳಿಸಿಕೊಳ್ಳುತ್ತಿಲ್ಲ. ಮೈದಾನಕ್ಕೆ ಹೋಗಿ ಪಾಕ್​ ತಂಡದ ಆಟಗಾರರನ್ನು ಗೈಡ್​ ಮಾಡಿ ಎಂದರು.

ನಾನು ಪಾಕಿಸ್ತಾನಕ್ಕೆ ಹೋದರೆ ಒಂದು ವರ್ಷದೊಳಗೆ ತಂಡವನ್ನು ಉತ್ತಮಗೊಳಿಸುತ್ತೇನೆ. ನೀವೆಲ್ಲರೂ ನನ್ನನ್ನು ನೆನಪಿಸಿಕೊಳ್ಳುತ್ತೀರಿ. ಇದೆಲ್ಲವೂ ಉತ್ಸಾಹದ ವಿಷಯ. ನಾನು ದಿನಕ್ಕೆ 12 ಗಂಟೆಗಳ ಕಾಲ ತರಬೇತಿಗೆ ಮೀಸಲಿಡುತ್ತೇನೆ. ದೇಶದ ಪರ ಆಡಬೇಕು ಎಂದರೆ ಡಿಡಿಕೇಷನ್​ ಬೇಕು ಎಂದರು.

ಇದನ್ನೂ ಓದಿ:ಶುಭ್ಮನ್​​ ಗಿಲ್​ಗೆ ಭರ್ಜರಿ ಗಿಫ್ಟ್​ ಕೊಟ್ಟ ICC; ವಿರಾಟ್​​ ಕೊಹ್ಲಿಗೂ ಸಖತ್​​ ಗುಡ್​ನ್ಯೂಸ್​​!

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment