/newsfirstlive-kannada/media/post_attachments/wp-content/uploads/2024/06/David-Johnson-Cricketer-1.jpg)
ಭಾರತದ ಮಾಜಿ ಆಟಗಾರ ಡೇವಿಡ್ ಜಾನ್ಸನ್ ಸಾವನ್ನಪ್ಪಿದ್ದಾರೆ. ಇಂದು ಮಧ್ಯಾಹ್ನ 12.30ರ ಸುಮಾರಿಗೆ 53 ವರ್ಷ ವಯಸ್ಸಿನ ಡೇವಿಡ್​​ ತಮ್ಮ ನಿವಾಸದಲ್ಲಿ ಕೊನೆಯುಸಿರೆಳೆದಿದ್ದಾರೆ.
ಕನ್ನಡಿಗ ಡೇವಿಡ್ ಜಾನ್ಸನ್
ಕರ್ನಾಟಕದ ಹಾಸನದ ಅರಸೀಕೆರೆ ಮೂಲದವರಾದ ಡೇವಿಡ್ ಜಾನ್ಸನ್ ಅನಾರೋಗ್ಯದಿಂದ ಬಳಲುತ್ತಿದ್ದರು. ಆದರೀಗ ಡೇವಿಡ್ ಅವರ ಸಾವು ಕ್ರಿಕೆಟ್ ಪ್ರಿಯರಿಗೆ ಆಘಾತದ ಸುದ್ದಿಯಾಗಿದೆ. ಭಾರತ ಪರ 2 ಟೆಸ್ಟ್ ಪಂದ್ಯಗಳನ್ನಾಡಿದ್ದ ಕನ್ನಡಿಗನ ಸಾವು ಕ್ರಿಕೆಟ್​ ಪ್ರಿಯರಿಗೆ ನೋವು ನೀಡಿದೆ.
/newsfirstlive-kannada/media/post_attachments/wp-content/uploads/2024/06/David-Johnson-Cricketer.jpg)
ವೇಗದ ಬೌಲರ್ ಡೇವಿಡ್ ಜಾನ್ಸನ್
ಅಕ್ಟೋಬರ್​ 16, 1971ರಲ್ಲಿ ಜನಿಸಿದ ಡೇವಿಡ್​, ವೇಗದ-ಮಧ್ಯಮ ಬೌಲರ್ ಆಗಿ ಗುರುತಿಸಿಕೊಂಡಿದ್ದರು. ಜೊತೆಗೆ ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್ ಆಗಿದ್ದರು. 1996ರಲ್ಲಿ ಎರಡು ಟೆಸ್ಟ್ ಪಂದ್ಯಗಳನ್ನು ಆಡಿದ್ದಲ್ಲದೆ, 3 ವಿಕೆಟ್​ಗಳನ್ನು ಪಡೆದಿದ್ದರು.
ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us