/newsfirstlive-kannada/media/post_attachments/wp-content/uploads/2024/12/ROHIT_CUP.jpg)
ಅಡಿಲೇಡ್ನಲ್ಲಿ ನಡೆದ ಬಾರ್ಡರ್ ಗವಾಸ್ಕರ್ ಟ್ರೋಫಿಯ 2ನೇ ಟೆಸ್ಟ್ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಟೀಮ್ ಇಂಡಿಯಾ ಮಕಾಡೆ ಮಲಗಿದೆ. ಈ ಸೋಲಿನಿಂದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿರುವುದು ಬೇಸರದ ಸಂಗತಿಯಾಗಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಕಿಂಗ್ ಪಟ್ಟಿಯಲ್ಲಿ ಭಾರತ 3ನೇ ಸ್ಥಾನಕ್ಕೆ ಕುಸಿದಿದೆ. ಆದರೂ ಚಾಂಪಿಯನ್ಶಿಪ್ ಫೈನಲ್ ರೇಸ್ನಿಂದ ಟೀಮ್ ಇಂಡಿಯಾ ಇನ್ನು ಹೊರಬಿದ್ದಿಲ್ಲ. ಏಕೆಂದರೆ ಆಸ್ಟ್ರೇಲಿಯಾ ವಿರುದ್ಧ ಇನ್ನು 3 ಟೆಸ್ಟ್ ಪಂದ್ಯಗಳು ಬಾಕಿ ಇರುವ ಕಾರಣ ಇದು ಇಂದಿಗೆ ನಿರ್ಧಾರ ಆಗಲ್ಲ. ಒಂದು ವೇಳೆ ಆಸಿಸ್ ವಿರುದ್ಧ ಟೀಮ್ ಇಂಡಿಯಾ 4-1 ರಿಂದ ಸರಣಿ ಗೆದ್ದರೇ ಮಾತ್ರ ಫೈನಲ್ಗೆ ಹೋಗುವ ಸಾಧ್ಯತೆ ಇದೆ. ಇಲ್ಲದಿದ್ದರೇ ಚಾಂಪಿಯನ್ಶಿಪ್ ಫೈನಲ್ ಕನಸು ಕೈಬಿಟ್ಟು ಭಾರತ ತಂಡ ತವರಿಗೆ ವಾಪಸ್ ಆಗಲಿದೆ.
ಇದನ್ನೂ ಓದಿ:ಟೀಮ್ ಇಂಡಿಯಾ ಸೋಲಿಗೆ ಇವರೇ ಕಾರಣ.. ಕೊಹ್ಲಿ, KL ರಾಹುಲ್ ಸೇರಿ ಲಿಸ್ಟ್ಲ್ಲಿ ಯಾರ್ ಯಾರಿದ್ದಾರೆ?
ಪಾಯಿಂಟ್ಗಳನ್ನು ಲೆಕ್ಕಾಚಾರ ಮಾಡಿದರೆ ಮೊದಲ ಸ್ಥಾನದಲ್ಲಿರುವ ಆಸಿಸ್ಗಿಂತ 2 ಪಾಯಿಂಟ್ ಕಡಿಮೆ ಪಡೆದ ಭಾರತ 3ನೇ ಸ್ಥಾನದಲ್ಲಿದೆ. 2ನೇ ಸ್ಥಾನದಲ್ಲಿ ಇರುವ ಆಫ್ರಿಕಾ 64 ಪಾಯಿಂಟ್ ಪಡೆದುಕೊಂಡಿದೆ. ಆದರೆ ಕಡಿಮೆ ಪಂದ್ಯದಲ್ಲಿ ಅಂದರೆ ಕೇವಲ 9 ಮ್ಯಾಚ್ಗಳಲ್ಲಿ ಆಫ್ರಿಕಾ 5 ಪಂದ್ಯ ಗೆದ್ದಿದೆ. ಹೀಗಾಗಿ 2ನೇ ಸ್ಥಾನದಲ್ಲಿದೆ.
ಇಂದು ಅಡಿಲೇಡ್ನಲ್ಲಿ ಟೀಮ್ ಇಂಡಿಯಾ ವಿರುದ್ಧದ ಗೆಲುವಿನೊಂದಿಗೆ ಆಸಿಸ್ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದುಕೊಂಡಿದೆ. ಪಟ್ಟಿಯಲ್ಲಿ ಆಸಿಸ್ ಶೇ. 60.71 ಪಾಯಿಂಟ್ಸ್ ಹೊಂದಿದೆ. ಆಫ್ರಿಕಾ ಶೇ.59.26 ಪಾಯಿಂಟ್ನಿಂದ 2ನೇ ಸ್ಥಾನದಲ್ಲಿದೆ. ಇನ್ನು ಭಾರತ ಶೇ.57.29 ಪಾಯಿಂಟ್ಸ್ನಿಂದ 3ನೇ ಸ್ಥಾನದಲ್ಲಿದೆ. ಶೇಕಾಡವಾರು ಅಂಕಗಳನ್ನು ಗಣನೆಗೆ ತೆಗೆದುಕೊಂಡಾಗ ಭಾರತಕ್ಕಿಂತ ಆಫ್ರಿಕಾ ಉತ್ತಮವಾದ ಪ್ರದರ್ಶನ ನೀಡಿದೆ ಎಂಬುದು ಗೊತ್ತಾಗುತ್ತದೆ. ಹೀಗಾಗಿ ಭಾರತವನ್ನ ಹಿಂದಿಕ್ಕಿದೆ.
ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ ರ್ಯಾಕಿಂಗ್ ಪಟ್ಟಿ
- ಆಸ್ಟ್ರೇಲಿಯಾ 14 ಪಂದ್ಯ, 9 ಗೆಲುವು, 102 ಪಾಯಿಂಟ್ಸ್, ಶೇಕಡಾ 60.71
- ಆಫ್ರಿಕಾ ತಂಡ 9 ಪಂದ್ಯ, 5 ಗೆಲುವು, 64 ಪಾಯಿಂಟ್ಸ್, ಶೇಕಡಾ 59.26
- ಭಾರತ ತಂಡ 16 ಪಂದ್ಯ, 9 ಗೆಲುವು, 110 ಪಾಯಿಂಟ್ಸ್, ಶೇಕಡಾ 57.29
- ಶ್ರೀಲಂಕಾ ತಂಡ 10 ಪಂದ್ಯ, 5 ಗೆಲುವು, 60 ಪಾಯಿಂಟ್ಸ್, ಶೇಕಡಾ 50.00
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ಫಸ್ಟ್ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ