/newsfirstlive-kannada/media/post_attachments/wp-content/uploads/2024/11/Suryakumar-Yadav.jpg)
ಟೀಮ್ ಇಂಡಿಯಾ, ಇಂಗ್ಲೆಂಡ್ ನಡುವಿನ 5 ಪಂದ್ಯಗಳ ಸರಣಿಯಲ್ಲಿ ಈಗಾಗಲೇ 3 ಪಂದ್ಯಗಳು ಮುಗಿದಿವೆ. ಚೆನ್ನೈ ಮತ್ತು ಕೋಲ್ಕತ್ತಾದಲ್ಲಿ ನಡೆದ ಮೊದಲ ಎರಡು ಪಂದ್ಯಗಳಲ್ಲಿ ಗೆದ್ದು ಬೀಗಿದ್ದ ಟೀಮ್ ಇಂಡಿಯಾ 3ನೇ ಟಿ20 ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ.
ಸೂರ್ಯಕುಮಾರ್ ಯಾದವ್ ಕಳಪೆ ಪ್ರದರ್ಶನ
ರಾಜ್‌ಕೋಟ್ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ 3ನೇ ಟಿ20 ಪಂದ್ಯದಲ್ಲಿ ಟೀಮ್ ಇಂಡಿಯಾದ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಳಪೆ ಪ್ರದರ್ಶನ ನೀಡಿದ್ರು. ಇಂಗ್ಲೆಂಡ್ ವಿರುದ್ಧದ 3 ಟಿ20 ಪಂದ್ಯಗಳಲ್ಲೂ ಸೂರ್ಯ ತನ್ನ ಜವಾಬ್ದಾರಿ ಮರೆತು ಬ್ಯಾಟ್ ಬೀಸಿದ್ದಾರೆ. ಟಿ20 ಕ್ರಿಕೆಟ್‌ನಲ್ಲಿ ಅಮೋಘವಾಗಿ ಬ್ಯಾಟ್ ಮಾಡುತ್ತಿದ್ದ ಇವರು ಪ್ರಸಕ್ತ ಸರಣಿಯಲ್ಲಿ ಮಂಕಾಗಿ ಹೋಗಿದ್ದಾರೆ.
ಫ್ಲಾಪ್ ಶೋ
3ನೇ ಟಿ20 ಪಂದ್ಯದಲ್ಲೂ ಸೂರ್ಯನ ಫ್ಲಾಪ್ ಶೋ ಮುಂದುವರಿದಿದೆ. ಹೀಗಾಗಿ ಕ್ಯಾಪ್ಟನ್ ಸೂರ್ಯಕುಮಾರ್ ಯಾದವ್ ಕಳಪೆ ಫಾರ್ಮ್ ಟೀಮ್ ಇಂಡಿಯಾದ ಟೆನ್ಷನ್ ಹೆಚ್ಚಿಸಿದೆ. ಟೀಮ್ ಇಂಡಿಯಾ ಕ್ಯಾಪ್ಟನ್ ಆದಮೇಲೆ ಇವರ ಬ್ಯಾಟ್ ಮೌನವಾಗಿದೆ. ಇಂಗ್ಲೆಂಡ್ ವಿರುದ್ಧ ನಡೆದ ಮೊದಲ ಮೂರು ಪಂದ್ಯಗಳಲ್ಲಿ ಹೀನಾಯ ಪ್ರದರ್ಶನ ನೀಡಿದ ಸೂರ್ಯ ವಿರುದ್ಧ ಭಾರೀ ಆಕ್ರೋಶ ವ್ಯಕ್ತವಾಗಿದೆ.
ಸೂರ್ಯ ವಿರುದ್ಧ ಭಾರೀ ಆಕ್ರೋಶ
ಸೂರ್ಯ ಕುಮಾರ್ ಯಾದವ್ ಕಳೆದ 3 ಪಂದ್ಯಗಳಲ್ಲಿ 0, 12, 14 ರನ್ ಗಳಿಸಿದ್ದಾರೆ. ಇವರು 3 ಪಂದ್ಯಗಳಲ್ಲಿ ಕೇವಲ 26 ರನ್ ಸಿಡಿಸಿದ್ದು, ಫ್ಯಾನ್ಸ್ ಆಕ್ರೋಶ ಹೊರಹಾಕಿದ್ದಾರೆ. ಟೀಮ್ ಇಂಡಿಯಾದಲ್ಲಿ ಸೂರ್ಯನ ಕಾಲ ಮುಗಿಯಿತು, ಇವರಿಗೆ ನಾಚಿಕೆ ಆಗಬೇಕು. ಇವರನ್ನು ನಂಬಿದ ಬಿಸಿಸಿಐಗೆ ತರಾಟೆಗೆ ತೆಗೆದುಕೊಳ್ಳಬೇಕು ಅಂದು ಅಸಮಾಧಾನ ಹೊರಹಾಕಿದ್ದಾರೆ.
ಇನ್ನು, ಸೂರ್ಯಕುಮಾರ್ ಯಾದವ್ ಇದುವರೆಗೂ 20 ಟಿ20 ಪಂದ್ಯಗಳಲ್ಲಿ ಟೀಮ್ ಇಂಡಿಯಾ ಲೀಡ್ ಮಾಡಿದ್ದಾರೆ. ಇವರಿಗೆ 19 ಇನಿಂಗ್ಸ್‌ಗಳಲ್ಲಿ ಬ್ಯಾಟ್ ಮಾಡುವ ಅವಕಾಶ ಸಿಕ್ಕಿದೆ. ಈ ಅವಧಿಯಲ್ಲಿ 29.26 ಸರಾಸರಿಯಲ್ಲಿ 556 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ ಹೆಚ್ಚು ಕಡಿಮೆಯಾಗಿಲ್ಲ ಮತ್ತು 165.97 ರಷ್ಟಿದೆ.
ಇದನ್ನೂ ಓದಿ:ಟೀಮ್ ಇಂಡಿಯಾ ಹೀನಾಯ ಸೋಲಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ಸೂರ್ಯ; ಏನಂದ್ರು ಗೊತ್ತಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ