/newsfirstlive-kannada/media/post_attachments/wp-content/uploads/2025/02/Shami.jpg)
ಇಂದು ನಡೆಯುತ್ತಿರೋ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಯ 6ನೇ ಪಂದ್ಯದಲ್ಲಿ ಭಾರತ ಮತ್ತು ಪಾಕಿಸ್ತಾನ ತಂಡಗಳು ಮುಖಾಮುಖಿ ಆಗಿವೆ. ಉಭಯ ತಂಡಗಳ ನಡುವಿನ ಹೈವೋಲ್ಟೆಜ್ ಪಂದ್ಯಕ್ಕೆ ದುಬೈನ ಅಂತಾರಾಷ್ಟ್ರೀಯ ಮೈದಾನ ಸಾಕ್ಷಿಯಾಗಿದೆ.
ಸದ್ಯ ಭಾರತದ ವಿರುದ್ಧ ಟಾಸ್ ಗೆದ್ದ ಪಾಕಿಸ್ತಾನ ಮೊದಲು ಬ್ಯಾಟಿಂಗ್ ಆಯ್ದುಕೊಂಡಿದೆ. ಹೀಗಾಗಿ ಟೀಮ್ ಇಂಡಿಯಾ ಬೌಲಿಂಗ್ ಮಾಡುತ್ತಿದೆ. ಹೇಗಾದ್ರೂ ಮಾಡಿ ಈ ಪಂದ್ಯ ಗೆಲ್ಲಲೇಬೇಕು ಎಂದು ಉಭಯ ತಂಡಗಳು ಮುಂದಾಗಿವೆ.
ಬಾಬರ್ ಅಜಂ, ಇಮಾಮ್ ಕಣಕ್ಕೆ
ಪಾಕ್ ತಂಡದ ಪರ ಮಾಜಿ ಕ್ಯಾಪ್ಟನ್ ಬಾಬರ್ ಅಜಂ, ಇಮಾಮ್-ಉಲ್-ಹಕ್ ಓಪನರ್ಸ್ ಆಗಿ ಕಣಕ್ಕಿಳಿದಿದ್ದಾರೆ. ಭಯದಲ್ಲೇ ಬ್ಯಾಟ್ ಬೀಸುತ್ತಿರೋ ಇವರು ರನ್ ಕಲೆ ಹಾಕಲು ಪರದಾಡುತ್ತಿದ್ದಾರೆ.
ಮೊದಲ ಓವರ್ನಲ್ಲೇ 5 ವೈಡ್ ಎಸೆದ ಶಮಿ
ಟೀಮ್ ಇಂಡಿಯಾ ಪರ ಸ್ಟಾರ್ ವೇಗಿ ಮೊಹಮ್ಮದ್ ಶಮಿ ಮೊದಲ ಓವರ್ ಎಸೆದರು. ಭಯದಲ್ಲೇ ಬೌಲಿಂಗ್ ಮಾಡಿದ ಶಮಿ ಬರೋಬ್ಬರಿ 5 ವೈಡ್ ಎಸೆದರು. ಈ ಓವರ್ನಲ್ಲಿ ಬ್ಯಾಟ್ನಿಂದ ಬಂದಿದ್ದು ಕೇವಲ 1 ರನ್ ಮಾತ್ರ. ಒಂದು ಓವರ್ನಲ್ಲಿ ಟೋಟಲ್ 6 ರನ್ ನೀಡಿದರ ಶಮಿ. ಶಮಿ ಬೌಲಿಂಗ್ ಬಗ್ಗೆ ಟೀಮ್ ಇಂಡಿಯಾ ಫ್ಯಾನ್ಸ್ ಸೋಷಿಯಲ್ ಮೀಡಿಯಾದಲ್ಲಿ ಆಕ್ರೋಶ ಹೊರಹಾಕಿದ್ದಾರೆ. ನಾಚಿಕೆ ಆಗಬೇಕು ನಿನಗೆ ಎಂದು ಕಿಡಿಕಾರಿದ್ದಾರೆ.
Pressure or what?
5 wides in an over by Mohammad Shami#INDvPAK#ChampionsTrophypic.twitter.com/G6J3Uopsjx— Champions Trophy 2025 Commentary 🧢 (@IPL2025Auction)
Pressure or what?
5 wides in an over by Mohammad Shami#INDvPAK#ChampionsTrophypic.twitter.com/G6J3Uopsjx— Tata IPL 2025 Commentary (@IPL2025Auction) February 23, 2025
">February 23, 2025
ಬಾಂಗ್ಲಾದೇಶ ವಿರುದ್ಧ ಮೊದಲ ಪಂದ್ಯದಲ್ಲಿ ಗೆಲುವು ಸಾಧಿಸಿರುವ ಭಾರತ 2ನೇ ಪಂದ್ಯದಲ್ಲೂ ಗೆಲುವಿನ ಓಟ ಮುಂದುವರಿಸೋ ಸಾಧ್ಯತೆ ಇದೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ಕಿವೀಸ್ ವಿರುದ್ದ ಸೋತ ಪಾಕ್ ಭಾರತ ವಿರುದ್ಧ ಗೆಲ್ಲಲೇಬೇಕಾದ ಒತ್ತಡದಲ್ಲಿದೆ.
ಇದನ್ನೂ ಓದಿ:ಇಂದು ಬದ್ಧ ವೈರಿಗಳ ಕಾದಾಟ; ಪಾಕ್ ವಿರುದ್ಧ ಬಲಿಷ್ಠ ಟೀಮ್ ಇಂಡಿಯಾ ಕಣಕ್ಕೆ; ಸ್ಟಾರ್ ಆಟಗಾರರಿಗೆ ಕೊಕ್!
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್ನಲ್ಲಿ ‘ರನ್ ಭೂಮಿ’ ವೀಕ್ಷಿಸಿ