/newsfirstlive-kannada/media/post_attachments/wp-content/uploads/2023/08/Team-India-2.jpg)
ಇತ್ತೀಚೆಗೆ ಶ್ರೀಲಂಕಾ ವಿರುದ್ಧ ಗೆಲ್ಲಬಹುದಾದ ಏಕದಿನ ಪಂದ್ಯವನ್ನು ಟೀಮ್ ಇಂಡಿಯಾ ಕೈ ಚೆಲ್ಲಿತ್ತು. ಇಂದು ಹೇಗಾದ್ರೂ ಮಾಡಿ ಗೆದ್ದು ಶ್ರೀಲಂಕಾ ವಿರುದ್ಧದ ಏಕದಿನ ಸರಣಿಯನ್ನು ವಶಪಡಿಸಿಕೊಳ್ಳಬೇಕು ಎಂದು ಟೀಮ್ ಇಂಡಿಯಾ ಜಿದ್ದಿಗೆ ಬಿದ್ದಿದೆ. ಟಾಸ್ ಗೆದ್ದ ಶ್ರೀಲಂಕಾ ತಂಡ ಫಸ್ಟ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ಹಾಗಾಗಿ ಟೀಮ್ ಇಂಡಿಯಾ ಇಂದು ಕೂಡ ಫೀಲ್ಡಿಂಗ್ಗೆ ಇಳಿದಿದೆ.
ಇನ್ನು, ಕಳೆದ ಪಂದ್ಯದಲ್ಲೇ ಕಣಕ್ಕಿಳಿದಿದ್ದ ಆಟಗಾರರೇ ಇಂದು ಕೂಡ ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ನಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ರಿಷಬ್ ಪಂತ್ ಅವರನ್ನು ಮತ್ತೆ ಬೆಂಚ್ ಕಾಯಿಸಿದ್ದು, ವಿಕೆಟ್ ಕೀಪರ್ ಕೆ.ಎಲ್ ರಾಹುಲ್ ಅವರನ್ನೇ ಕಣಕ್ಕಿಳಿಸಲಾಗಿದೆ. ಇದರ ವಿರುದ್ಧ ಒಂದಷ್ಟು ಕಿಡಿಕಾರುತ್ತಿದ್ದಾರೆ. ಇನ್ನೊಂದಷ್ಟು ಜನ ಗೌತಮ್ ಗಂಭೀರ್ ವಿರುದ್ಧ ಬಹಿರಂಗ ಆಕ್ರೋಶ ಹೊರಹಾಕಿದ್ದಾರೆ.
It's shame moment for @GautamGambhir if india?? can't win after ROHIT SHUBHMAN VIRAT SHREYAS AND RAHUL then why he drop 210 fastest scorer of @ishankishan51 shame moment #ishankishan#INDvSL#ishan#GG#polticianpic.twitter.com/a89nS4sTTy
— Purushottam Kumar (@pkrvirat)
It's shame moment for @GautamGambhir if india🇮🇳 can't win after ROHIT SHUBHMAN VIRAT SHREYAS AND RAHUL then why he drop 210 fastest scorer of @ishankishan51 shame moment #ishankishan#INDvSL#ishan#GG#polticianpic.twitter.com/a89nS4sTTy
— Purushottam Kumar (@pkrvirat) August 2, 2024
">August 2, 2024
ಗಂಭೀರ್ ವಿರುದ್ಧ ಆಕ್ರೋಶ!
ಟೀಮ್ ಇಂಡಿಯಾದಲ್ಲಿ ಕ್ಯಾಪ್ಟನ್ ರೋಹಿತ್ ಶರ್ಮಾ, ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್ ಮತ್ತು ರಾಹುಲ್ ತರಹದ ಬಲಿಷ್ಠ ಆಟಗಾರರು ಇದ್ದಾರೆ. ಒಂದು ವೇಳೆ 2ನೇ ಏಕದಿನ ಪಂದ್ಯ ಸೋತರೆ ಗೌತಮ್ ಗಂಭೀರ್ ಒಂದು ಪ್ರಶ್ನೆಗೆ ಉತ್ತರಿಸಬೇಕು. 210 ರನ್ ಚಚ್ಚಿ ಪ್ಲೇಯರ್ ಆಫ್ ದಿ ಸೀರೀಸ್ ಆಗಿದ್ದ ಇಶಾನ್ ಕಿಶನ್ ಅವರನ್ನು ಏಕದಿನ ತಂಡದಿಂದ ಕೈ ಬಿಟ್ಟಿದ್ದು ಯಾಕೆ? ಎಂದು ಉತ್ತರಿಸಬೇಕು ಎಂದು ಚಾಲೆಂಜ್ ಆಗಿದ್ದಾರೆ. ಅಷ್ಟೇ ಅಲ್ಲದೇ ಸರಿಯಾದ ತಂಡ ಆಯ್ಕೆ ಮಾಡದ ಗಂಭೀರ್ಗೆ ನಾಚಿಕೆ ಆಗಬೇಕು ಎಂದು ಟ್ವಿಟರ್ನಲ್ಲಿ ಆಕ್ರೋಶ ವ್ಯಕ್ತಪಡಿಸಲಾಗಿದೆ.
ಇದನ್ನೂ ಓದಿ:ಶ್ರೀಲಂಕಾ ಫಸ್ಟ್ ಬ್ಯಾಟಿಂಗ್; ಪಂತ್ಗೆ ಮತ್ತೆ ನಿರಾಸೆ.. ಪ್ಲೇಯಿಂಗ್-11ರಲ್ಲಿ ಬದಲಾವಣೆ ಆಗಿದೆಯಾ?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ