/newsfirstlive-kannada/media/post_attachments/wp-content/uploads/2024/09/Bumrah_IND.jpg)
ಟೀಮ್​ ಇಂಡಿಯಾ, ಬಾಂಗ್ಲಾದೇಶದ ನಡುವಿನ ಮೊದಲ ಟೆಸ್ಟ್ ಪಂದ್ಯ ಚೆನ್ನೈನ ಎಂ.ಎ ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿದೆ. ಟೆಸ್ಟ್‌ನ 2ನೇ ದಿನ ಭಾರತ ಮೊದಲ ಇನಿಂಗ್ಸ್‌ನಲ್ಲಿ 376 ರನ್​ಗೆ ಆಲೌಟ್​ ಆಗಿದೆ.
ಇನ್ನು, ಭಾರತದ 376 ರನ್​​ಗಳ ಗುರಿ ಬೆನ್ನತ್ತಿದ ಬಾಂಗ್ಲಾದೇಶದ ಪರ ಓಪನರ್ಸ್​ ಆಗಿ ಬಂದ ಶಾದ್ಮನ್ ಇಸ್ಲಾಂ ಮೊದಲ ಓವರ್​ನಲ್ಲೇ ವಿಕೆಟ್​ ಒಪ್ಪಿಸಿದ್ರು. ಭಾರತದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಎಸೆದ ಈ ಓವರ್​​ನಲ್ಲಿ ಔಟ್​ ಆಗಿ ಪೆವಿಲಿಯನ್​ಗೆ ತೆರಳಿತು.
ಮೊದಲ ಓವರ್​ನಲ್ಲೇ ಮ್ಯಾಜಿಕ್​​
ಕ್ಯಾಪ್ಟನ್​ ರೋಹಿತ್​ ಶರ್ಮಾ ಮೊದಲ ಓವರ್​ ಎಸೆಯುವಂತೆ ಬುಮ್ರಾಗೆ ಆದೇಶಿಸಿದ್ರು. ನಾಯಕನ ಆದೇಶದ ಮೇರೆಗೆ ಬೌಲಿಂಗ್ ಮಾಡಿದ ಬುಮ್ರಾ ಅವರು ಬಾಂಗ್ಲಾದೇಶದ ಬ್ಯಾಟರ್​​ಗಳ ಬೆವರಿಳಿಸಿದ್ರು. ಬಾಂಗ್ಲಾ ತಂಡದ ಎಡಗೈ ಬ್ಯಾಟರ್ ಶಾದ್ಮನ್ ಇಸ್ಲಾಂ ಅವರನ್ನು ಮೊದಲ ಓವರ್​​​ನ 5ನೇ ಎಸೆತದಲ್ಲೇ ಕ್ಲೀನ್​​ ಬೌಲ್ಡ್​ ಮಾಡಿದ ಬುಮ್ರಾ ಅಚ್ಚರಿ ಮೂಡಿಸಿದ್ರು.
ಇಷ್ಟೇ ಅಲ್ಲ, ಮುಶ್ಫಿಕರ್ ರಹೀಮ್, ಹಸನ್ ಮಹಮೂದ್, ತಸ್ಕಿನ್ ಅಹ್ಮದ್ ಅವರನ್ನು ಔಟ್​ ಮಾಡಿದ ಬುಮ್ರಾ ಬಾಂಗ್ಲಾದೇಶ ತಂಡವನ್ನು ಆಲೌಟ್​ ಮಾಡುವುದರಲ್ಲಿ ಪ್ರಮುಖ ಪಾತ್ರವಹಿಸಿದ್ರು. ಬುಮ್ರಾ ತಾನು ಎಸೆದ 11 ಓವರ್​​ನಲ್ಲಿ 50 ರನ್​​ ನೀಡಿ 4 ವಿಕೆಟ್​ ತೆಗೆದರು.
ಭಾರತದ ಮೊದಲ ಇನ್ನಿಂಗ್ಸ್
ಚೆನ್ನೈ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 376 ರನ್ ಕಲೆ ಹಾಕಿದೆ. ಭಾರತದ ಸ್ಟಾರ್​ ಆಲ್​ರೌಂಡರ್​​​ ರವಿಚಂದ್ರನ್ ಅಶ್ವಿನ್. ಅವರು ತಮ್ಮ ತವರು ನೆಲದಲ್ಲಿ 113 ರನ್‌ಗಳ ಅದ್ಭುತ ಶತಕ ಸಿಡಿಸಿ ಟೀಮ್ ಇಂಡಿಯಾಕ್ಕೆ ಆಸರೆಯಾದರು. ರವೀಂದ್ರ ಜಡೇಜಾ ಶತಕ ವಂಚಿತರಾಗಿ 86 ರನ್ ಗಳಿಸಿ ಔಟಾಗಿ ಪೆವಿಲಿಯನ್‌ಗೆ ಮರಳಿದರು.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ
/newsfirstlive-kannada/media/agency_attachments/2025/07/28/2025-07-28t072019657z-newsfirst_banner_logo-2025-07-28-12-50-19.png)
Follow Us