ರೋಚಕ ಫೈನಲ್​ ಪಂದ್ಯ; ನ್ಯೂಜಿಲೆಂಡ್​ ವಿರುದ್ಧ ಬಲಿಷ್ಠ ಟೀಮ್​ ಇಂಡಿಯಾ ಕಣಕ್ಕೆ!

author-image
Ganesh Nachikethu
Updated On
INDvsNZ: ಫೈನಲ್​​​ ಫೈಟ್‌ನಲ್ಲಿ ಈ ಮೂವರೇ ವಿಲನ್ಸ್​.. ಟೀಮ್ ಇಂಡಿಯಾಗೆ ಕಾದಿದೆ ಬಿಗ್ ಥ್ರೆಟ್; ಯಾರವರು?
Advertisment
  • 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ ಪಂದ್ಯ!
  • ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​, ಭಾರತ ಮುಖಾಮುಖಿ
  • ಟಾಸ್​​​ ಗೆದ್ದ ನ್ಯೂಜಿಲೆಂಡ್​ ತಂಡದ ಮೊದಲು ಬ್ಯಾಟಿಂಗ್​

ಇಂದು ದುಬೈ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಫೈನಲ್​ ಪಂದ್ಯ ನಡೆಯುತ್ತಿದೆ. ಫೈನಲ್​ ಪಂದ್ಯದಲ್ಲಿ ನ್ಯೂಜಿಲೆಂಡ್​, ಭಾರತ ಕ್ರಿಕೆಟ್​ ತಂಡಗಳು ಮುಖಾಮುಖಿ ಆಗಿವೆ.

ಟಾಸ್​​​ ಗೆದ್ದ ನ್ಯೂಜಿಲೆಂಡ್​ ತಂಡದ ಮೊದಲು ಬ್ಯಾಟಿಂಗ್​ ಆಯ್ಕೆ ಮಾಡಿಕೊಂಡಿದೆ. ಹೀಗಾಗಿ ಭಾರತ ಕ್ರಿಕೆಟ್​​ ತಂಡ ಬೌಲಿಂಗ್​ ಮಾಡಬೇಕಿದೆ. ಭಾರತ ತಂಡದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಆದರೆ ನ್ಯೂಜಿಲೆಂಡ್ ತಂಡದಲ್ಲಿ ಒಂದು ಬದಲಾವಣೆ ಮಾಡಲಾಗಿದೆ. ಮ್ಯಾಟ್ ಹೆನ್ರಿ ಬದಲಿಗೆ ನೇಥನ್ ಸ್ಮಿತ್ ತಂಡ ಸೇರಿಕೊಂಡಿದ್ದಾರೆ.

ಟೀಮ್​ ಇಂಡಿಯಾ ಪ್ಲೇಯಿಂಗ್​ ಎಲೆವೆನ್​ ಹೀಗಿದೆ!

ರೋಹಿತ್‌ ಶರ್ಮಾ(ನಾಯಕ), ಶುಭ್ಮನ್​ ಗಿಲ್‌, ವಿರಾಟ್‌ ಕೊಹ್ಲಿ, ಶ್ರೇಯಸ್‌ ಅಯ್ಯರ್, ಅಕ್ಷರ್‌ ಪಟೇಲ್, ಕೆ ಎಲ್ ರಾಹುಲ್‌, ಹಾರ್ದಿಕ್‌ ಪಾಂಡ್ಯ, ರವೀಂದ್ರ ಜಡೇಜಾ, ಕುಲ್ದೀಪ್‌ ಯಾದವ್, ಮೊಹಮ್ಮದ್ ಶಮಿ, ವರುಣ್‌ ಚಕ್ರವರ್ತಿ.

ನ್ಯೂಜಿಲೆಂಡ್‌ ಪ್ಲೇಯಿಂಗ್​ ಎಲೆವೆನ್​ ಹೀಗಿದೆ!

ವಿಲ್ ಯಂಗ್‌, ರಚಿನ್‌ ರವೀಂದ್ರ, ಕೇನ್ ವಿಲಿಯಮ್ಸನ್‌, ಡ್ಯಾರಿಲ್‌ ಮಿಚೆಲ್, ಟಾಮ್ ಲೇಥಮ್‌, ಗ್ಲೆನ್ ಫಿಲಿಪ್ಸ್‌, ಮಿಚೆಲ್ ಬ್ರೇಸ್‌ವೆಲ್‌, ಮಿಚೆಲ್ ಸ್ಯಾಂಟ್ನರ್‌(ನಾಯಕ), ಕೈಲ್ ಜೇಮಿಸನ್‌, ನೇಥನ್ ಸ್ಮಿತ್‌, ವಿಲಿಯಂ ಒರೌರ್ಕೆ.

ಇದನ್ನೂ ಓದಿ:ಸತತ 5 ಪಂದ್ಯದಲ್ಲಿ ಹೀನಾಯ ಸೋಲು.. WPL ಟೂರ್ನಿಯಿಂದಲೇ RCB ಔಟ್‌; ಅಭಿಮಾನಿಗಳ ಆಕ್ರೋಶ!

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment