newsfirstkannada.com

IND vs ENG; ಧ್ರುವ್, ಅಶ್ವಿನ್ ಉತ್ತಮ ಬ್ಯಾಟಿಂಗ್.. ಬೃಹತ್ ಮೊತ್ತದ ರನ್ ಕಲೆ ಹಾಕಿದ ಟೀಮ್ ಇಂಡಿಯಾ

Share :

Published February 16, 2024 at 2:49pm

Update February 16, 2024 at 2:51pm

  ಶುಭ್​ಮನ್ ಗಿಲ್ ಡಕೌಟ್ ಆಗಿದ್ದು ಭಾರತಕ್ಕೆ ಭಾರೀ ನಷ್ಟ

  ಒಟ್ಟು 130 ಓವರ್​ಗಳನ್ನು ಆಡಿದ ರೋಹಿತ್ ಶರ್ಮಾ ಪಡೆ

  ಸೆಂಚುರಿ ಆಟವಾಡಿದ್ದ ರೋಹಿತ್ ಶರ್ಮಾ, ರವೀಂದ್ರ ಜಡೇಜಾ

ಗುಜರಾತ್​ನ ರಾಜ್​ಕೋಟ್​​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ಇಂಗ್ಲೆಂಡ್ ವಿರುದ್ಧ ಟೀಮ್ ಇಂಡಿಯಾ 3ನೇ ಟೆಸ್ಟ್​ ಪಂದ್ಯವಾಡುತ್ತಿದೆ. ಮೊದಲ ಇನ್ನಿಂಗ್ಸ್​​ನಲ್ಲಿ ಮೊದಲ ಬ್ಯಾಟಿಂಗ್ ಮಾಡಿದ ರೋಹಿತ್ ಪಡೆ 130 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 445 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ.

3ನೇ ಟೆಸ್ಟ್​ ಪಂದ್ಯದ ಮೊದಲ ದಿನದಾಟದಲ್ಲಿ ಕ್ಯಾಪ್ಟನ್​ ರೋಹಿತ್​ ಶರ್ಮಾ ಮತ್ತು ಆಲ್​ರೌಂಡರ್​ ರವೀಂದ್ರ ಜಡೇಜಾ ಅಕ್ಷರಶಃ ಆರ್ಭಟಿಸಿದರು. ನಿನ್ನೆಯೇ ಶತಕ ಸಿಡಿಸಿದ್ದ ರೋಹಿತ್ 131, ಜಡೇಜಾ 112 ತಂಡವನ್ನು ಬೃಹತ್​ ಮೊತ್ತದತ್ತ ಕೊಂಡೋಯ್ಯುದರು. ಸರ್ಫರಾಜ್​ ಬ್ಯಾಟಿಂಗ್​ನಿಂದ ಇಡೀ ಮೈದಾನವೇ ದಂಗು ಬಡಿದಿತ್ತು. ಆದರೆ ಅವರ ರನೌಟ್​ ಕ್ರಿಕೆಟ್​ ಅಭಿಮಾನಿಗಳನ್ನ ಭಾರೀ ನಿರಾಸೆ ಮಾಡಿತು. ಗಿಲ್ ಡಗೌಟ್ ಆದರು. ಯಶಸ್ವಿ ಜೈಸ್ವಾಲ್ (10) ಜಾಸ್ತಿ ಹೊತ್ತು ಕ್ರೀಸ್​ನಲ್ಲಿ ಇರಲಿಲ್ಲ. ರಜತ್​ ಪಾಟೀದರ್ ವಿಫಲ ಬ್ಯಾಟಿಂಗ್ ಮಾಡಿ 5 ರನ್​ಗೆ ಪೆವಿಲಿಯನ್​ಗೆ ನೆಡೆದರು.

ನಿನ್ನೆ 5 ವಿಕೆಟ್​​ಗೆ 326 ರನ್​ಗಳನ್ನು ಭಾರತ ಕಲೆ ಹಾಕಿತ್ತು. ಅದರಂತೆ ಇಂದು 2ನೇ ದಿನದಾಟ ಮುಂದುವರೆಸಿದ ರೋಹಿತ್ ಪಡೆ 119ರನ್​ಗಳನ್ನು ಮಾತ್ರ ಕಲೆ ಹಾಕಿ ತನ್ನೆಲ್ಲ ವಿಕೆಟ್ ಒಪ್ಪಿಸಿತು. ಕುಲ್​ದೀಪ್ 4, ದ್ರುವ್ ಜುರೆಲ್ 3 ಅಮೋಘ ಸಿಕ್ಸರ್ ಸಮೇತ 46 ರನ್​, ಅಶ್ವಿನ್ 37, ಬೂಮ್ರಾ 26, ಸಿರಾಜ್ 3 ರನ್ ಗಳಿಸಿದರು. ಇದರಿಂದ ಭಾರತ ಒಟ್ಟು 130 ಓವರ್​ಗಳಲ್ಲಿ ಎಲ್ಲ ವಿಕೆಟ್​ ಕಳೆದುಕೊಂಡು 445 ರನ್​ಗಳ ಬೃಹತ್​ ಮೊತ್ತ ಪೇರಿಸಿದೆ. ಇನ್ನು ಇಂಗ್ಲೆಂಡ್ ಪರ ಮಾರ್ಕ್​ ಹುಡ್​ 4 ವಿಕೆಟ್ಸ್​ ಪಡೆದು ಪರಿಣಾಮಕಾರಿ ಬೌಲರ್ ಎನಿಸಿದರು. ರೇಹಾನ್ ಅಹ್ಮದ್ 2 ವಿಕೆಟ್ ಪಡೆದು ತಂಡಕ್ಕೆ ಆಸರೆಯಾದರು.
ಸದ್ಯ ಇಂಗ್ಲೆಂಡ್ ಮೊದಲ ಇನ್ನಿಂಗ್ಸ್​​ನಲ್ಲಿ​ 31 ರನ್​ಗಳು ಗಳಿಸಿ ಆಡುತ್ತಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

IND vs ENG; ಧ್ರುವ್, ಅಶ್ವಿನ್ ಉತ್ತಮ ಬ್ಯಾಟಿಂಗ್.. ಬೃಹತ್ ಮೊತ್ತದ ರನ್ ಕಲೆ ಹಾಕಿದ ಟೀಮ್ ಇಂಡಿಯಾ

https://newsfirstlive.com/wp-content/uploads/2024/02/Dhruv_Jurel.jpg

Load More