newsfirstkannada.com

ಟೀಮ್ ಇಂಡಿಯಾದಲ್ಲಿ‌ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ

Share :

Published May 8, 2024 at 11:16am

Update May 8, 2024 at 11:18am

    ಧೋನಿ ಅವರೇ ನನಗೆ ಏಕದಿನ ಪಂದ್ಯಗಳಲ್ಲಿ ಅವಕಾಶ ಕೊಡಿಸಿದ್ರು

    ಸಚಿನ್ ಡ್ರೆಸಿಂಗ್ ರೂಮ್ ಶೇರ್ ಮಾಡಿರೋದು ನಂಬೋಕೆ ಆಗ್ತಿಲ್ಲ

    ಐಪಿಎಲ್​ನಲ್ಲಿ 1 ಓವರ್​ನಲ್ಲಿ 40 ರನ್ ಕೊಡುವುದು ಈಗ ಸಾಮಾನ್ಯ

ಕರ್ನಾಟಕ ತಂಡದ ಹಾಗೂ ಟೀಮ್​ ಇಂಡಿಯಾದ ಮಾಜಿ ವೇಗಿ ಅಭಿಮನ್ಯು ಮಿಥುನ್ ಮಿಂಚಿನ ಬೌಲಿಂಗ್​​ನಿಂದ ಕೆಲವೇ ದಿನಗಳಲ್ಲಿ ಕ್ರಿಕೆಟ್​ ಕ್ಷೇತ್ರದಲ್ಲಿ ಸಾಧನೆ ಮಾಡಿದವರು. ಅದರಲ್ಲೂ ನಮ್ಮ ಕನ್ನಡದವರು ಎನ್ನುವುದು ವಿಶೇಷ. ಕ್ರಿಕೆಟ್​ನ ಮೂರು ಮಾದರಿಗಳಲ್ಲಿ ವಿಕೆಟ್​ ಕಬಳಿಸಿ ದಾಖಲೆ ಮಾಡಿದವರು. ಐಪಿಎಲ್​​ನಲ್ಲಿ  ಕನ್ನಡಿಗನಾಗಿ ಆರ್​ಸಿಬಿಯಲ್ಲೂ ಖದರ್ ತೋರಿಸಿದ್ದಾರೆ. ಇದೀಗ ನ್ಯೂಸ್​​ಫಸ್ಟ್​ ಜೊತೆ ಅಭಿಮನ್ಯು ಮಿಥುನ್ ಮನಬಿಚ್ಚಿ ಮಾತನಾಡಿದ್ದಾರೆ.

ನ್ಯೂಸ್​​ಫಸ್ಟ್​ನ ಸ್ಪೆಷಲ್​ ಸಂದರ್ಶನದಲ್ಲಿ ಅಭಿಮನ್ಯು ಮಿಥುನ್ ಅವರು ಮಾತನಾಡಿ, ಟೀಮ್ ಇಂಡಿಯಾದಲ್ಲಿ ಆಡಿರೋದು ತುಂಬಾ ಅಮೇಜಿಂಗ್ ಆಗಿತ್ತು. ಅದನ್ನು ಮರೆಯೋಕೆ ಆಗ್ತಿಲ್ಲ. ಆದರೆ ಮೆಚ್ಯುರಿಟಿ ಇಲ್ಲದೇ ತುಂಬಾ ಬೇಗ ನಾನು ಕ್ರಿಕೆಟ್ ಆಡಿದೆ ಅನಿಸುತ್ತಿದೆ. ಸಚಿನ್ ತೆಂಡೂಲ್ಕರ್ ಡ್ರೆಸಿಂಗ್ ರೂಮ್ ಶೇರ್ ಮಾಡಿರೋದು ನಂಬೋಕೆ ಆಗುತ್ತಿಲ್ಲ. ಧೋನಿಯವರೇ ಟೆಸ್ಟ್​ನಿಂದ ಏಕದಿನ ಪಂದ್ಯಗಳಿಗೆ ಅವಕಾಶ ಕೊಡಿಸಿದರು. ಏನು ಕಲಿಯದೇ ಭಾರತ ತಂಡಕ್ಕೆ ಹೋಗಿದ್ದೆ. ಇವಾಗ ಇರೋ ನ್ಯಾಲೆಡ್ಜ್, ಅವಾಗ ಇಲ್ಲದೇ ಮೆಚ್ಯುರಿಟಿ ಆಗಿರಲಿಲ್ಲ. ಯಾವ ತರ ಪ್ರಾಕ್ಟೀಸ್,​ ಫೇಸ್​​ ಬೌಲಿಂಗ್ ಮಾಡೋದು ಹೇಗೆಲ್ಲ ಎಂಬುದು ಆವಾಗಲೇ ಬಂದಿದ್ದರೆ ಇನ್ನಷ್ಟು ದಿನ ಭಾರತ ತಂಡದಲ್ಲಿ ಆಡಬಹುದಿತ್ತು ಎಂದು ಹೇಳಿದ್ದಾರೆ.

ನೂರಕ್ಕೆ ನೂರರಷ್ಟು ಐಪಿಎಲ್​ನಲ್ಲಿ ಇನ್ನು ಚಾನ್ಸ್​ ಕೊಡಬಹುದಿತ್ತು. ಐಪಿಎಲ್​ನಲ್ಲಿ ಯಾವ ಬೌಲರ್ ಆದರೂ 1 ಓವರ್​ನಲ್ಲಿ 40 ರನ್ ಕೊಡುವುದು ಸಾಮಾನ್ಯ. ಆವಾಗ ಫ್ರಾಂಚೈಸಿಯಲ್ಲಿ ಬ್ಯಾಕಿಂಗ್ ತುಂಬಾ ಕಡಿಮೆ ಇತ್ತು. ಈವಾಗ ಸಿಗೋ ತರ ಅವಾಗ ಬ್ಯಾಕಿಂಗ್ ಸಿಗಬೇಕಿತ್ತು. ಆದರೆ ನನಗೆ ಸಿಗಲಿಲ್ಲ. ಕ್ರಿಕೆಟರ್ ಆಗಿ ಎಲ್ಲ ಕಲಿಯಬೇಕಿತ್ತು. ಅದನ್ನು ನಾನು ಕಲಿತ್ತಿದ್ದೇನೆ ಎಂದು ಹೇಳಿದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

ಟೀಮ್ ಇಂಡಿಯಾದಲ್ಲಿ‌ ಅಭಿಮನ್ಯು ಮಿಥುನ್ ಸ್ಥಾನ ಕಳೆದುಕೊಂಡಿದ್ದು ಯಾಕೆ..? Exclusive ಸಂದರ್ಶನ

https://newsfirstlive.com/wp-content/uploads/2024/05/ABHIMANUY_MITHUN_NEW.jpg

Load More