‘ಆಸ್ತಿ, ಅಂತಸ್ತು ಬಂದ್ಮೇಲೆ ವಿರಾಟ್​​ ಬದಲಾದ’- ಕೊಹ್ಲಿ ಬಗ್ಗೆ ಶಾಕಿಂಗ್​​ ಸತ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟರ್!​​​

author-image
Ganesh Nachikethu
Updated On
‘ಆಸ್ತಿ, ಅಂತಸ್ತು ಬಂದ್ಮೇಲೆ ವಿರಾಟ್​​ ಬದಲಾದ’- ಕೊಹ್ಲಿ ಬಗ್ಗೆ ಶಾಕಿಂಗ್​​ ಸತ್ಯ ಬಿಚ್ಚಿಟ್ಟ ಮಾಜಿ ಕ್ರಿಕೆಟರ್!​​​
Advertisment
  • ಟೀಮ್​​ ಇಂಡಿಯಾದ ಸ್ಟಾರ್​ ಪ್ಲೇಯರ್​​ ವಿರಾಟ್‌ ಕೊಹ್ಲಿ
  • ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಕೊಹ್ಲಿ ಬೆಸ್ಟ್​ ಬ್ಯಾಟರ್..!
  • ಕೊಹ್ಲಿ ವಿರುದ್ಧ ನಾಲಿಗೆ ಹರಿಬಿಟ್ಟ ಮಾಜಿ ಕ್ರಿಕೆಟರ್​​ ಮಿಶ್ರಾ

ಟೀಮ್​​ ಇಂಡಿಯಾದ ಸ್ಟಾರ್​ ಪ್ಲೇಯರ್​​ ವಿರಾಟ್‌ ಕೊಹ್ಲಿ. ಇವರು ಎಲ್ಲಾ ಮಾದರಿಯ ಕ್ರಿಕೆಟ್‌ನಲ್ಲಿ ಬೆಸ್ಟ್​ ಬ್ಯಾಟರ್​​. ಅಂತರಾಷ್ಟ್ರೀಯ ಕ್ರಿಕೆಟ್​ನಲ್ಲಿ 80ಕ್ಕೂ ಹೆಚ್ಚು ಶತಕಗಳು ಬಾರಿಸಿರೋ ಕೊಹ್ಲಿ ಟೆಸ್ಟ್‌ ಮತ್ತು ಏಕದಿನ ಮಾದರಿಯಲ್ಲಿ 10 ಸಾವಿರಕ್ಕೂ ಅಧಿಕ ರನ್​ ಕಲೆ ಹಾಕಿದ್ದಾರೆ. ಅದರಲ್ಲೂ ಸಚಿನ್​​ ದಾಖಲೆ ಮುರಿಯಲು ಸಾಧ್ಯವಿರೋ ಏಕೈಕ ಪ್ಲೇಯರ್​​ ಕೊಹ್ಲಿ. ಐಪಿಎಲ್‌ನಲ್ಲೂ ಕೊಹ್ಲಿಯೇ ಚೇಸ್​ ಮಾಸ್ಟರ್​​. ಇಷ್ಟು ದಾಖಲೆಗಳು ನಿರ್ಮಿಸಿರೋ ಕೊಹ್ಲಿ ಬಗ್ಗೆ ಭಾರತ ತಂಡದ ಮಾಜಿ ಪ್ಲೇಯರ್​​​ ಅಮಿತ್​ ಮಿಶ್ರಾ ಶಾಕಿಂಗ್​​ ಹೇಳಿಕೆ ನೀಡಿದ್ದಾರೆ.

ಇತ್ತೀಚೆಗಷ್ಟೇ ಟೀಮ್​ ಇಂಡಿಯಾ ಮಾಜಿ ಕ್ರಿಕೆಟರ್​ ಅಂಬಾಟಿ ರಾಯುಡು ಕೊಹ್ಲಿ ಬಗ್ಗೆ ನಾಲಿಗೆ ಹರಿಬಿಟ್ಟಿದ್ದರು. ಈಗ ಮಾಜಿ ಪ್ಲೇಯರ್​​ ಅಮಿತ್​ ಮಿಶ್ರಾ ಸರದಿ. ಕೊಹ್ಲಿ ತುಂಬಾ ಬದಲಾಗಿದ್ದಾರೆ. ನಾನು ಆತನೊಂದಿಗೆ ಮಾತಾಡುವುದಿಲ್ಲ ಎಂದಿದ್ದಾರೆ.

ಅಮಿತ್​ ಮಿಶ್ರಾ ಹೇಳಿದ್ದೇನು..?

ಹಣ ಮತ್ತು ಅಂತಸ್ತು ಬಂದ ಕೂಡಲೇ ಕೊಹ್ಲಿ ಬದಲಾದ. ಯಾರಾದ್ರೂ ಮಾತಾಡಿದ್ರೆ ಸಾಕು ಸಹಾಯ ಕೇಳೋಕೆ ಬಂದಿದ್ದಾರೆ ಅನ್ನೋ ಮನಸು ಆತನದ್ದು. ನಾನು ಆ ತರದ ವ್ಯಕ್ತಿಯಲ್ಲ. ವಿರಾಟ್​​ ನನಗೆ 14 ವರ್ಷ ಇದ್ದಾಗಿನಿಂದಲೂ ಪರಿಚಯ. ದಿನಾ ಸಮೋಸಾ ಮತ್ತು ಪಿಝಾ ತಿನ್ನುತ್ತಿದ್ದ ಹುಡುಗ ಮಾತ್ರ ನನಗೆ ಗೊತ್ತು. ಆ ಚೀಕೂವಿಗು ಈಗಿನ ಕೊಹ್ಲಿಗೆ ಬಹಳ ವ್ಯತ್ಯಾಸವಿದೆ. ಕ್ಯಾಪ್ಟನ್‌ ವಿರಾಟ್‌ ಅಲ್ಲೂ ಬಹಳ ವ್ಯತ್ಯಾಸವಿದೆ. ಈಗ ಎದುರು ಸಿಕ್ಕಾಗ ಗೌರವದಿಂದ ಮಾತನಾಡಿಸುತ್ತಾರೆ ಅಷ್ಟೆ. ಹಿಂದಿದ್ದ ಒಡನಾಟ ಈಗ ಉಳಿದಿಲ್ಲ ಎಂದರು.

ಇದನ್ನೂ ಓದಿ:ಭಾರತ ತಂಡಕ್ಕೆ ಮೋಸ ಮಾಡಿ ಸಿಕ್ಕಿಬಿದ್ದ ಸ್ಟಾರ್​ ಬ್ಯಾಟರ್​​.. ಪಂತ್​ ವಿರುದ್ಧ ಕೇಳಿ ಬಂದ ಆರೋಪವೇನು?

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

Advertisment