12 ವರ್ಷಗಳ ಬಳಿಕ ಮತ್ತೆ ಅವಕಾಶ.. ದುಬೈನಲ್ಲಿ ಟೀಮ್ ಇಂಡಿಯಾ ಟ್ರೋಫಿ ಗೆಲ್ಲೋ ಚಾನ್ಸ್ ಎಷ್ಟಿದೆ?

author-image
admin
Updated On
ಆಫ್ರಿಕಾದ 27 ವರ್ಷದ ಕನಸು.. ಕಿವೀಸ್​ ಸೋಲಿಸಿ ಟೀಮ್ ಇಂಡಿಯಾ ಜೊತೆ ಫೈನಲ್ ಫೈಟ್ ಮಾಡುತ್ತಾ?
Advertisment
  • ಇಂದು ದುಬೈನಲ್ಲಿ ಭಾರತ-ನ್ಯೂಜಿಲೆಂಡ್​ ಮುಖಾಮುಖಿ
  • ಕಿವೀಸ್‌ನ ಮಣಿಸಿ ಟ್ರೋಫಿ ಹಿಡಿಯತ್ತಾ ಟೀಂ ಇಂಡಿಯಾ?
  • ಇಂದು ಕಪ್ ಗೆಲ್ಲಲಿ ಅಂತ ಶತಕೋಟಿ ಭಾರತೀಯರ ಪ್ರಾರ್ಥನೆ

ಚಾಂಪಿಯನ್ಸ್ ಟ್ರೋಫಿ ಫೈನಲ್​​ ಫೈಟ್​​ಗೆ ಕೌಂಟ್​ಡೌನ್ ಶುರುವಾಗಿದೆ. 12 ವರ್ಷಗಳ ಬಳಿಕ ಟೀಮ್ ಇಂಡಿಯಾ ಮತ್ತೆ ಚಾಂಪಿಯನ್ಸ್ ಟ್ರೋಫಿಯ ಚಾಂಪಿಯನ್ ಆಗೋಕೆ ಹೊರಟಿದೆ. ಅತ್ತ ಡೇಂಜರಸ್ ನ್ಯೂಜಿಲೆಂಡ್, ದುಬೈನಲ್ಲಿ ದರ್ಬಾರ್ ನಡೆಸೋಕೆ ತುದಿಗಾಲಲ್ಲಿ ನಿಂತಿದೆ. ಹಾಗಾದ್ರೆ ಇಂದಿನ ಫೈನಲ್​ ಫೈಟ್​​ನ ಸ್ಪೆಷಲ್​ ರಿಪೋರ್ಟ್​ ಇಲ್ಲಿದೆ ನೋಡಿ.

23 ಜೂನ್​ 2013 ಬರ್ಮಿಂಗ್​ಹ್ಯಾಮ್​
ಇಂಗ್ಲೆಂಡ್​ ಮಣಿಸಿ ಇಂಡಿಯಾ ಚಾಂಪಿಯನ್​!
ಬರೋಬ್ಬರಿ 12 ವರ್ಷಗಳ ಹಿಂದೆ ಚಾಂಪಿಯನ್ಸ್​ ಟ್ರೋಫಿ ಫೈನಲ್​​ನಲ್ಲಿ ಟೀಮ್​ ಇಂಡಿಯಾ ಚಾಂಪಿಯನ್​ ಆಗಿ ಮರೆದಾಡಿತ್ತು. ಧೋನಿ ನಾಯಕತ್ವದ ಟೀಮ್​ ಇಂಡಿಯಾ, ಆಂಗ್ಲರನ್ನ ಸೆದೆಬಡಿದು ರೋಚಕ ಗೆಲುವು ಸಾಧಿಸಿತ್ತು. ಬರ್ಮಿಂಗ್​ಹ್ಯಾಮ್​ ವಿಜಯೋತ್ಸವ ಆಚರಿಸಿತ್ತು.

publive-image

ಅಂದು ಚಾಂಪಿಯನ್​ ಆಗಿ ಮೆರೆದಾಡಿದ ಟೀಮ್​ ಇಂಡಿಯಾ 2017ರಲ್ಲಿ ಕೊನೆಯ ಹೆಜ್ಜೆಯಲ್ಲಿ ಎಡವಿತ್ತು. ಫೈನಲ್ಸ್​ನಲ್ಲಿ ಸೋತು ನಿರಾಸೆ ಅನುಭವಿಸಿತ್ತು. ಆ ಸೋಲಿನ ನೋವು, ಹತಾಶೆ ಇಡೀ ಭಾರತವನ್ನ ಬಿಡದೇ ಕಾಡಿತ್ತು. ಇದೀಗ ಆ ನೋವನ್ನ ಮರೆತೂ ಮತ್ತೆ ಸಂಭ್ರಮಿಸೋ ಟೈಮ್​ ಬಂದಿದೆ. ಇಂದು ನಡೆಯೋ ಯುದ್ಧದಲ್ಲಿ ಕಿವೀಸ್​ ಕಿವಿ ಹಿಂಡಿ ಚಾಂಪಿಯನ್​ ಆಗಿ ಮೆರೆದಾಡಲು ರೋಹಿತ್​ ಶರ್ಮಾ ಪಡೆ ಸಜ್ಜಾಗಿದೆ.

ಚಾಂಪಿಯನ್ಸ್​ ಟ್ರೋಫಿ ಫೈನಲ್​ ಕದನಕ್ಕೆ ಕೌಂಟ್​ಡೌನ್​
ದುಬೈ ಅಂಗಳದಲ್ಲಿ ಪಟ್ಟಕ್ಕಾಗಿ ಇಂಡೋ-ಕಿವೀಸ್​​ ಕದನ
ದುಬೈನಲ್ಲಿ ಇಂದು ಟೀಮ್ ಇಂಡಿಯಾ ಮತ್ತು ನ್ಯೂಜಿಲೆಂಡ್ ಅದೃಷ್ಟದ ಪರೀಕ್ಷೆಗೆ ಇಳಿಯಲಿದೆ. ಟೂರ್ನಿಯಲ್ಲಿ ಒಂದೇ ಒಂದು ಪಂದ್ಯ ಸೋಲದ ಟೀಮ್ ಇಂಡಿಯಾ ಅಜೇಯವಾಗಿ ಫೈನಲ್​ಗೆ ಎಂಟ್ರಿ ನೀಡಿದೆ. ಜಬರ್ದಸ್ತ್​ ಬ್ಯಾಟಿಂಗ್​, ಅತ್ಯದ್ಭುತ ಬೌಲಿಂಗ್​ ಮೂಲಕ ಟೂರ್ನಿಯಲ್ಲಿ ಕ್ವಾಲಿಟಿ ಆಟವಾಡಿರೋ ಟೀಮ್​ ಇಂಡಿಯಾ ಫೈನಲ್​​ನಲ್ಲೂ ಗೆದ್ದು ಬೀಗುವ ತವಕದಲ್ಲಿದೆ. 3ನೇ ಬಾರಿ ಚಾಂಪಿಯನ್ಸ್​ ಟ್ರೋಫಿಗೆ ಮುತ್ತಿಕ್ಕೋ ತವಕದಲ್ಲಿದೆ.

publive-image

ಹಾಗಂತ ಎದುರಾಳಿ ನ್ಯೂಜಿಲೆಂಡ್​​ ಮಣಿಸೋದು ಅಷ್ಟು ಸುಲಭಾನ? ಚಾನ್ಸೇ ಇಲ್ಲ.. ನ್ಯೂಜಿಲೆಂಡ್​ ತಂಡದಲ್ಲಿ ಇರೋವವರೆಲ್ಲಾ ಸೈಲೆಂಟ್​ ಕಿಲ್ಲರ್ಸ್​. ಯಾಮಾರಾದ್ರೆ, ಸೋಲಿನ ದರ್ಶನ ಮಾಡಿಸಿ ಬಿಡ್ತಾರೆ. ಟೂರ್ನಿಯ ಲೀಗ್​ ಹಂತದಲ್ಲಿ ಟೀಮ್​ ಇಂಡಿಯಾ ಎದುರು ಸೋತಿದ್ದು ಬಿಟ್ರೆ, ಸೆಮಿಸ್​ ಸೇರಿ ಉಳಿದ 3 ಪಂದ್ಯಗಳಲ್ಲಿ ಗೆದ್ದು ಬೀಗಿದೆ. ತಂಡದಲ್ಲಿರೋ ಕೇನ್​ ವಿಲಿಯಮ್​​ಸನ್​, ರಚಿನ್​ ರವೀಂದ್ರರಂತ ಯುವ ಹಾಗೂ ಅನುಭವಿ ಬ್ಯಾಟರ್ಸ್​ ಸಾಲಿಡ್​ ಫಾರ್ಮ್​ನಲ್ಲಿದ್ದಾರೆ. ಸ್ಪಿನ್​ &, ಪೇಸ್​ ಎರಡೂ ವಿಭಾಗವೂ ಬಲಿಷ್ಟವಾಗಿದ್ದು ಟಾಪ್​ ಕ್ಲಾಸ್​ ಬೌಲಿಂಗ್​ ಅಟ್ಯಾಕ್​​ನ ಬಲ ತಂಡಕ್ಕಿದೆ. ಯಾವ ಕಾರಣಕ್ಕೂ ಕಿವೀಸ್​ನ ಸುಲಭಕ್ಕೆ ಪರಿಗಣಿಸುವಂತೇ ಇಲ್ಲ.

ಇದನ್ನೂ ಓದಿ: ಚಾಂಪಿಯನ್ ಪಟ್ಟಕ್ಕೆ ಬಿಗ್ ಫೈಟ್‌.. ಫೈನಲ್ಸ್​ನಲ್ಲಿ ವರ್ಕ್​ಔಟ್ ಆಗುತ್ತಾ ಆ ಮ್ಯಾಜಿಕ್? ಕಿವೀಸ್‌ಗೆ ದೊಡ್ಡ ಟೆನ್ಷನ್‌! 

ಸೇಡಿನ ಸಮರ.. ಟ್ರೋಫಿ ಗೆದ್ದರಷ್ಟೇ ಸಮಾಧಾನ!
ಟೀಮ್​ ಇಂಡಿಯಾ ಪಾಲಿಗೆ ಇಂದಿನ ಫೈನಲ್​​ ಪಂದ್ಯ ಸೇಡಿನ ಸಮರ. 2019ರ ಏಕದಿನ ವಿಶ್ವಕಪ್​​ನ ಸೆಮಿಸ್​ ಸೋಲು ಅಭಿಮಾನಿಗಳನ್ನ ಇಂದಿಗೂ ಬಿಡದೇ ಕಾಡ್ತಿದೆ. ಅಂದು ಮ್ಯಾಂಚೆಸ್ಟರ್​​ನಲ್ಲಿ ನಡೆದ ಸೆಮಿಸ್​ ಸಮರದಲ್ಲಿ ಟೀಮ್​ ಇಂಡಿಯಾ ಸೋಲಿಗೆ ಶರಣಾಗಿತ್ತು. ಜಗತ್ತನ್ನೇ ಗೆದ್ದ ಸಂಭ್ರದಲ್ಲಿ ಕಿವೀಸ್​ ಪ್ಲೇಯರ್ಸ್​ ಸಂಭ್ರಮಿಸ್ತಾ ಇದ್ರೆ, ಟೀಮ್​ ಇಂಡಿಯಾ ಡ್ರೆಸ್ಸಿಂಗ್​ ರೂಮ್​ ಮೌನ ಆವರಿಸಿತ್ತು. ಅಸಂಖ್ಯ ಭಾರತೀಯ ಅಭಿಮಾನಿಗಳ ಹಾರ್ಟ್​​ ಬ್ರೇಕ್​ ಆಗಿತ್ತು. ಅಂದಾಗಿತ್ತು ಆ ಬೇಸರ, ಹತಾಶೆ, ನೋವನ್ನ ತೀರಿಸಿಕೊಳ್ಳಲು ಇದಕ್ಕಿಂತ ಒಳ್ಳೆ ಅವಕಾಶ ಬೇರೆ ಇಲ್ಲವೇ ಇಲ್ಲ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ ಫಸ್ಟ್‌ ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment