ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ಮಧ್ಯೆ ಕೊನೆಯ ಟೆಸ್ಟ್
ಕ್ಯಾಪ್ಟನ್ ರೋಹಿತ್ ಶರ್ಮಾಗೆ ಸರಿಯಾಗಿ ಕೈ ಕೊಟ್ಟ ಸರ್ಫರಾಜ್ ಖಾನ್
ಭಾರತ ತಂಡದಿಂದ ಕೆ.ಎಲ್ ರಾಹುಲ್ ಕೈ ಬಿಡಲು ಕಾರಣವೇನು ಗೊತ್ತಾ?
ಸದ್ಯ ಮುಂಬೈನ ವಾಂಖೆಡೆ ಇಂಟರ್ ನ್ಯಾಷನಲ್ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ಟೀಮ್ ಇಂಡಿಯಾ, ನ್ಯೂಜಿಲೆಂಡ್ ತಂಡದ ಮಧ್ಯೆ ಕೊನೆಯ ಟೆಸ್ಟ್ ನಡೆಯುತ್ತಿದೆ. ನ್ಯೂಜಿಲೆಂಡ್ ನೀಡಿದ ಟಾರ್ಗೆಟ್ ಬೆನ್ನತ್ತಿದ ಟೀಮ್ ಇಂಡಿಯಾ ಮೊದಲ ಇನ್ನಿಂಗ್ಸ್ನಲ್ಲಿ 262 ರನ್ಗಳಿಗೆ ಆಲೌಟ್ ಆಗಿದೆ.
ಭಾರತ ತಂಡದ ಭರವಸೆಯ ಆಟಗಾರ ಶುಭ್ಮನ್ ಗಿಲ್ ಹಾಗೂ ಸ್ಟಾರ್ ವಿಕೆಟ್ ಕೀಪರ್ ರಿಷಬ್ ಪಂತ್ ಅವರು ಅರ್ಧಶತಕ ಬಾರಿಸಿದ್ರು. ಇವರ ಅರ್ಧಶತಕದ ನೆರವಿನಿಂದ ಟೀಮ್ ಇಂಡಿಯಾ ನ್ಯೂಜಿಲೆಂಡ್ ತಂಡದ ವಿರುದ್ಧ ಮುನ್ನಡೆ ಸಾಧಿಸಿದೆ.
ಶುಭ್ಮನ್ ಗಿಲ್ ಅಬ್ಬರದ ಬ್ಯಾಟಿಂಗ್
ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟದಲ್ಲಿದ್ದ ಟೀಮ್ ಇಂಡಿಯಾ ಪರ ಶುಭ್ಮನ್ ಗಿಲ್ ಮನಮೋಹಕ ಬ್ಯಾಟಿಂಗ್ ಮಾಡಿದ್ರು. 5ನೇ ವಿಕೆಟ್ಗೆ ಗಿಲ್ಗೆ ಪಂತ್ ಸಾಥ್ ನೀಡಿದ್ರು. ಇಬ್ಬರು 114 ಬಾಲ್ನಲ್ಲಿ 96 ರನ್ ಕಲೆ ಹಾಕಿದ್ರು. ಈ ಜೋಡಿಯನ್ನು ಕಟ್ಟಿ ಹಾಕುವಲ್ಲಿ ನ್ಯೂಜಿಲೆಂಡ್ ವಿಫಲವಾಗಿದೆ.
ಗಿಲ್ ಅಮೋಘ ಪ್ರದರ್ಶನ
ಟೀಮ್ ಇಂಡಿಯಾ ಪರ ಮಧ್ಯಮ ಕ್ರಮಾಂಕದಲ್ಲಿ ಶುಭ್ಮನ್ ಗಿಲ್ ಅಮೋಘ ಬ್ಯಾಟಿಂಗ್ ಪ್ರದರ್ಶನ ನೀಡಿದ್ರು. ಇನ್ನಿಂಗ್ಸ್ ಉದ್ಧಕ್ಕೂ ನ್ಯೂಜಿಲೆಂಡ್ ತಂಡದ ಬೌಲರ್ಗಳ ಬೆವರಿಳಿಸಿದ್ರು. ಬರೋಬ್ಬರಿ 7 ಫೋರ್, 1 ಸಿಕ್ಸರ್ನಿಂದ 90 ರನ್ ಚಚ್ಚಿ ಔಟಾದ್ರು. ಪಂತ್ 60, ವಾಷಿಂಗ್ಟನ್ ಸುಂದರ್ ಅಜೇಯ 38 ರನ್ ಸಿಡಿಸಿ ಔಟ್ ಆದರು. ರವೀಂದ್ರ ಜಡೇಜಾ 14 ರನ್ ಮಾಡಿದರು.
ಕೈ ಕೊಟ್ಟ ಸರ್ಫರಾಜ್ ಖಾನ್
ಬೆಂಗಳೂರಲ್ಲಿ ನಡೆದ ಮೊದಲ ಟೆಸ್ಟ್ ಮೊದಲ ಇನ್ನಿಂಗ್ಸ್ನಲ್ಲಿ 150 ರನ್ ಸಿಡಿಸಿ ಭಾರೀ ಸದ್ದು ಮಾಡಿದ್ದ ಸರ್ಫರಾಜ್ ಖಾನ್ ಟೀಮ್ ಇಂಡಿಯಾಗೆ ಕೈ ಕೊಟ್ಟರು. ಕೊನೆ ಟೆಸ್ಟ್ ಪಂದ್ಯದಲ್ಲಿ ಸರ್ಫರಾಜ್ ಖಾನ್ ಶೂನ್ಯಕ್ಕೆ ವಿಕೆಟ್ ಒಪ್ಪಿಸಿದ್ರು. ಕಳೆದ ಮೂರು ಇನ್ನಿಂಗ್ಸ್ನಲ್ಲಿ ಸರ್ಫರಾಜ್ ಖಾನ್ 11(24), 9(15), 0(4) ಗಳಿಸೋ ಮೂಲಕ ಕಳಪೆ ಪ್ರದರ್ಶನ ನೀಡಿದ್ರು.
ಕೆ.ಎಲ್ ರಾಹುಲ್ ಕೈ ಬಿಟ್ಟು ತಪ್ಪು ಮಾಡಿದ ಟೀಮ್ ಇಂಡಿಯಾ
ಕೇವಲ ಒಂದು ಪಂದ್ಯದಲ್ಲಿ ಸರಿಯಾಗಿ ಆಡದಿದ್ದಕ್ಕೆ ಕೆ.ಎಲ್ ರಾಹುಲ್ ಅವರನ್ನು 2 ಪಂದ್ಯಗಳಿಂದ ಬೆಂಚ್ ಕಾಯಿಸಲಾಗಿದೆ. ಇವರ ಬದಲಿಗೆ ಸರ್ಫರಾಜ್ ಖಾನ್ ಅವರಿಗೆ ಅವಕಾಶ ನೀಡಲಾಗಿದೆ. ಈಗ ಸರ್ಫರಾಜ್ ಖಾನ್ ಸಂಪೂರ್ಣ ಬ್ಯಾಟಿಂಗ್ನಲ್ಲಿ ವೈಫಲ್ಯರಾಗಿದ್ದು, ಕೆ.ಎಲ್ ರಾಹುಲ್ ಅವರನ್ನು ಕೈ ಬಿಟ್ಟು ಭಾರತ ಕ್ರಿಕೆಟ್ ತಂಡ ತಪ್ಪು ಮಾಡಿದ್ಯಾ? ಅನ್ನೋ ಪ್ರಶ್ನೆಗಳು ಕೇಳಿ ಬಂದಿವೆ.
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ