ಕಿವೀಸ್​ ​ವಿರುದ್ಧ ಗೆಲ್ಲಲು ಇನ್ನೂ ಇದೆ ಸುವರ್ಣಾವಕಾಶ! ಟೀಮ್​ ಇಂಡಿಯಾ ಮಾಡಬೇಕಾದ ಕೆಲಸ ಇಷ್ಟೇ!

author-image
Ganesh Nachikethu
Updated On
ಟೀಮ್​​ ಇಂಡಿಯಾಗೆ ಭರ್ಜರಿ ಗುಡ್​ನ್ಯೂಸ್​​; 1 ವರ್ಷದ ಬಳಿಕ ಸ್ಟಾರ್​ ಪ್ಲೇಯರ್​ ಎಂಟ್ರಿ
Advertisment
  • ಟೀಮ್​ ಇಂಡಿಯಾ, ನ್ಯೂಜಿಲೆಂಡ್​​ ತಂಡದ ಮಧ್ಯೆ ಮೊದಲ ಟೆಸ್ಟ್​
  • ನ್ಯೂಜಿಲೆಂಡ್​ ವಿರುದ್ಧ ಗೆಲ್ಲಲು ಟೀಮ್​ ಇಂಡಿಯಾಗೆ ಇದೆ ಅವಕಾಶ?
  • ಕಿವೀಸ್​​ ವಿರುದ್ಧ ಭಾರತ ಕ್ರಿಕೆಟ್​ ತಂಡ ಮಾಡಬೇಕಾದ ಕೆಲಸ ಇಷ್ಟೇ!

ಎಂ. ಚಿದಂಬರಂ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ಟೀಮ್​ ಇಂಡಿಯಾ ಮತ್ತು ನ್ಯೂಜಿಲೆಂಡ್​​ ನಡುವಿನ ಮೊದಲ ಟೆಸ್ಟ್​​ ಪಂದ್ಯ ನಡೆಯುತ್ತಿದೆ. ಈ ಮಹತ್ವದ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಟೀಮ್ ಇಂಡಿಯಾ ಕೇವಲ 46 ರನ್‌ಗಳಿಗೆ ಆಲೌಟ್ ಆಗಿದೆ. ಹಾಗಾಗಿ ಟೀಮ್​​ ಇಂಡಿಯಾಗೆ ಮೊದಲ ಪಂದ್ಯ ಗೆಲ್ಲೋ ಅವಕಾಶ ಇದ್ಯಾ? ಅನ್ನೋ ಚರ್ಚೆ ಜೋರಾಗಿದೆ.

ಟೀಮ್​ ಇಂಡಿಯಾ ನೀಡಿರೋ ಕಡಿಮೆ ರನ್​​ಗಳ ಗುರಿ ಬೆನ್ನತ್ತಿರೋ ನ್ಯೂಜಿಲೆಂಡ್​ ತಂಡವು ಈಗ 402 ರನ್​​ಗಳ ಬೃಹತ್​ ಮೊತ್ತ ಸೇರಿಸಿ ಆಲೌಟ್​ ಆಗಿದೆ. ಅಲ್ಲದೆ 356 ರನ್​​ಗಳ ಇನಿಂಗ್ಸ್‌ ಮುನ್ನಡೆ ಸಾಧಿಸಿದೆ.

ಅಗ್ರೆಸ್ಸಿವ್​ ಆಟಕ್ಕೆ ಮುಂದಾದ ಟೀಮ್​​ ಇಂಡಿಯಾ

ಟೀಮ್ ಇಂಡಿಯಾ ಇತ್ತೀಚೆಗೆ ಅಗ್ರೆಸ್ಸಿವ್​ ಆಟಕ್ಕೆ ಮುಂದಾಗಿದೆ. ಇದು ಕೆಲವೊಮ್ಮೆ ಕೈ ಹಿಡಿಯದೆ ಹೋದಾಗ ತಂಡದ ಮನೋಬಲದ ಮೇಲೆ ಪರಿಣಾಮ ಬೀರುತ್ತದೆ. ಎಲ್ಲ ಆಟಗಾರರು ಚೆನ್ನಾಗಿ ಆಡುತ್ತಿದ್ದಾರೆ. ಕೇವಲ ಟಾಪ್​ ಆರ್ಡರ್​​ ಮಾತ್ರವಲ್ಲ ಮಧ್ಯಮ ಕ್ರಮಾಂಕದ ಬ್ಯಾಟಿಂಗ್​ ಕೂಡ ಉತ್ತಮ ಫಾರ್ಮ್​​ನಲ್ಲೇ ಇದೆ. ಇದಕ್ಕೆ ಕಾರಣ ತಂಡ ಮಾಡುತ್ತಿರೋ ಅಪ್ರೋಚ್.

ಕ್ಯಾಪ್ಟನ್​ ರೋಹಿತ್​ ಅಗ್ರೆಸ್ಸಿವ್​ ಅಪ್ರೋಚ್​​

ರೋಹಿತ್ ಶರ್ಮಾ ಕ್ಯಾಪ್ಟನ್ಸಿಯಲ್ಲಿ ಟೀಮ್​​ ಇಂಡಿಯಾ ಆಕ್ರಮಣಕಾರಿ ಬ್ಯಾಟಿಂಗ್ ಮಾಡುತ್ತಿದೆ. ಇಷ್ಟೇ ಅಲ್ಲ ಇವರ ಕ್ಯಾಪ್ಟನ್ಸಿ ಕೂಡ ಅಷ್ಟೇ ಆಕ್ರಮಣಕಾರಿ ಆಗಿದೆ. ಹೀಗೆ ಮುಂದುವರಿದರೆ ನ್ಯೂಜಿಲೆಂಡ್​ ವಿರುದ್ಧ ಗೆಲ್ಲೋದು ಕಷ್ಟವೇನಲ್ಲ.

ಕಾನ್ಪುರ ಟೆಸ್ಟ್‌ ಬೆಸ್ಟ್​​ ಉದಾಹರಣೆ

ಇತ್ತೀಚೆಗೆ ನಡೆದ ಬಾಂಗ್ಲಾದೇಶ ವಿರುದ್ಧದ ಎರಡನೇ ಟೆಸ್ಟ್. ಈ ಟೆಸ್ಟ್​​ ಪಂದ್ಯಕ್ಕೂ ​ಮಳೆ ಕಾಟ ನೀಡಿತ್ತು. ಒಂದಲ್ಲ, ಎರಡಲ್ಲ, ಮೂರು ದಿನ ಮಳೆ ಕಾಟ ಇತ್ತು. ಇನ್ನೇನು ಪಂದ್ಯ ಡ್ರಾ ಆಗಲಿದೆ ಎಂದು ಎಲ್ಲರೂ ಭಾವಿಸಿದ್ರು. ಆದರೆ ರೋಹಿತ್ ಶರ್ಮಾ ಮಾಡಿದ ಕ್ಯಾಪ್ಟನ್ಸಿಯಿಂದ ಟೀಮ್​ ಇಂಡಿಯಾ ಬಾಂಗ್ಲಾ ವಿರುದ್ಧ 7 ವಿಕೆಟ್​​ಗಳಿಂದ ಗೆದ್ದು ಬೀಗಿತ್ತು. ಹಾಗೆಯೇ ನ್ಯೂಜಿಲೆಂಡ್​ ತಂಡವನ್ನು ಟೀಮ್​ ಇಂಡಿಯಾ ಸೋಲಿಸಬಹುದು.

ಬೌಲಿಂಗ್​​ನಲ್ಲಿ ಮೋಡಿ ಮಾಡಬೇಕು!

ಟೀಮ್ ಇಂಡಿಯಾದಲ್ಲಿ ಉತ್ತಮ ಬೌಲಿಂಗ್​ ಪಡೆ ಇದೆ. ಬೌಲರ್ಸ್​​​ ನ್ಯೂಜಿಲೆಂಡ್​ ತಂಡದ ಬೌಲರ್​ಗಳನ್ನು 2ನೇ ಇನ್ನಿಂಗ್ಸ್​ನಲ್ಲಿ ಕಟ್ಟಿ ಹಾಕಬಹುದು. ಯಾರ್ಕರ್‌ ಸ್ಪೇಷಲಿಸ್ಟ್‌ ಬುಮ್ರಾ ತಮ್ಮ ಬೌಲಿಂಗ್​ನಿಂದ ಮ್ಯಾಜಿಕ್​ ಮಾಡಬೇಕು. ಇನ್ನು ಈ ಪಿಚ್‌ನಲ್ಲಿ ಸಾಕಷ್ಟು ಅನುಭವ ಪಡೆದ ಸಿರಾಜ್‌ ಕೂಡ ಉತ್ತಮ ಕಿವೀಸ್​ ಬ್ಯಾಟರ್​ಗಳನ್ನು ಕಾಡಬೇಕು. ಕುಲ್ದೀಪ್​ ಯಾದವ್​​, ಆರ್​​. ಅಶ್ವಿನ್​​​. ಜಡೇಜಾ ಮನಸ್ಸು ಮಾಡಿದ್ರೆ ಟೀಮ್​ ಇಂಡಿಯಾಗೆ ಗೆಲುವು ಗ್ಯಾರಂಟಿ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment