ಧೋನಿ, ಕೊಹ್ಲಿ ಬಳಿ ಆಗದಿದ್ದು ಗಿಲ್ ಮಾಡ್ತಾರಾ? 58 ವರ್ಷದ ಇತಿಹಾಸ ಅಳಿಸಲು ಯಂಗ್ ಇಂಡಿಯಾ ರೆಡಿ..!

author-image
Ganesh
Updated On
ಧೋನಿ, ಕೊಹ್ಲಿ ಬಳಿ ಆಗದಿದ್ದು ಗಿಲ್ ಮಾಡ್ತಾರಾ? 58 ವರ್ಷದ ಇತಿಹಾಸ ಅಳಿಸಲು ಯಂಗ್ ಇಂಡಿಯಾ ರೆಡಿ..!
Advertisment
  • ಇಂಗ್ಲೆಂಡ್​​ನ ಭದ್ರಕೋಟೆ ಬರ್ಮಿಂಗ್​ಹ್ಯಾಮ್​..!
  • ಎಡ್ಜ್​ಬಾಸ್ಟನ್​ನಲ್ಲಿ ಗೆದ್ದೇ ಇಲ್ಲ ಟೀಮ್ ಇಂಡಿಯಾ..!
  • ಅತಿರಥ ಮಹಾರಥರಿಗೆ ಎಡ್ಜ್​ ಬಾಸ್ಟನ್​ನಲ್ಲಿ ಸೋಲು

ಬರ್ಮಿಂಗ್​ ಹ್ಯಾಮ್​ನ ಎಡ್ಜ್​ ಬಾಸ್ಟನ್​. ಈ ಹೆಸರು ಕೇಳಿದ್ರೇನೆ. ಟೀಮ್ ಇಂಡಿಯಾದ ಎದೆಯಲ್ಲಿ ನಡುಕ ಶುರುವಾಗುತ್ತೆ. ಟೀಮ್ ಇಂಡಿಯಾದ ಸೋಲುಗಳ ಸರಮಾಲೆಗಳೇ ನೆನಪಾಗುತ್ತೆ. ಇದೀಗ ಇಂಗ್ಲೆಂಡ್​ನ ಆ ಭದ್ರಕೋಟೆಗೆ ನುಗ್ಗಿ ಹೊಡೆದು ಇತಿಹಾಸ ನಿರ್ಮಿಸಲು ಯಂಗ್ ಇಂಡಿಯಾ ಸಜ್ಜಾಗಿದೆ. ಯಾವೊಬ್ಬ ನಾಯಕ ಮಾಡದ ಸಾಧನೆ ಮಾಡಲು ಗಿಲ್, ತೆರೆ ಹಿಂದೆಯೇ ಮಾಸ್ಟರ್ ಪ್ಲಾನ್ ರೂಪಿಸ್ತಿದ್ದಾರೆ.

ಇಂಡೋ, ಇಂಗ್ಲೆಂಡ್ ಬರ್ಮಿಂಗ್​ಹ್ಯಾಮ್​ ಬ್ಯಾಟಲ್​​ಗೆ ಕೌಂಟ್​​ಡೌನ್ ಶುರುವಾಗಿದೆ. ಮೊದಲ ಪಂದ್ಯದಲ್ಲಿ ಮುಗ್ಗರಿಸಿದ್ದ ಟೀಮ್ ಇಂಡಿಯಾ, ಎಡ್ಜ್​​ಬಾಸ್ಟನ್​ನಲ್ಲಿ ಭರ್ಜರಿ ಫರ್ಫಾಮೆನ್ಸ್​ ನೀಡುವ ತವಕದಲ್ಲಿದೆ. ಸರಣಿ ಸಮಬಲದ ದೃಷ್ಟಿಯಿಂದ ಇಂಗ್ಲೆಂಡ್​​ ಡಿಚ್ಚಿ ನೀ ಲೆಕ್ಕಾಚಾರದಲ್ಲಿದೆ. ಗೆಲುವಿನ ಹಸಿವಿನಲ್ಲಿರುವ ಟೀಮ್ ಇಂಡಿಯಾ, ಬರ್ಮಿಂಗ್​ಹ್ಯಾಮ್​ಕೋಟೆ ಭೇದಿಸುತ್ತಾ ಎಂಬ ಪ್ರಶ್ನೆ ಎದ್ದಿದೆ.

ಇದನ್ನೂ ಓದಿ: ‘ನನ್ನ ಖುಷಿಗೆ ನೀನೇ ಕಾರಣ’.. ರಿಷಭ್​ ಪಂತ್ 10 ವರ್ಷದ​ ಲವ್ ಬ್ರೇಕಪ್​, ಏನಾಯಿತು?

publive-image

ಇಂಗ್ಲೆಂಡ್​​ನ ಭದ್ರಕೋಟೆ ಬರ್ಮಿಂಗ್​ಹ್ಯಾಮ್​

ಮೊದಲ ಟೆಸ್ಟ್ ಸೋತ ಟೀಮ್ ಇಂಡಿಯಾ, ಬರ್ಮಿಂಗ್​ಹ್ಯಾಮ್​ ಟೆಸ್ಟ್​ ಗೆಲ್ಲುತ್ತಾ ಅಂದ್ರೆ ನಿಜಕ್ಕೂ ಅದು ಸುಲಭದಲ್ಲ. ಬರ್ಮಿಂಗ್ ಹ್ಯಾಮ್​​​​ ಇಂಗ್ಲೆಂಡ್​ನ ಭದ್ರಕೋಟೆ. ಈ ಭದ್ರಕೋಟೆಯಲ್ಲಿ ಆಂಗ್ಲರನ್ನು ಮಣಿಸಲು ಟೀಮ್ ಇಂಡಿಯಾ ಹರಸಾಹಸವನ್ನೇ ಮಾಡಿದೆ. 1967ರಿಂದಲೂ ಎಡ್ಜ್​ ಬಾಸ್ಟನ್​ನಲ್ಲಿ ಟೆಸ್ಟ್​ ಗೆಲ್ಲದ ಟೀಮ್ ಇಂಡಿಯಾ, 8 ಟೆಸ್ಟ್​ ಪಂದ್ಯಗಳ ಪೈಕಿ ಒಂದು ಡ್ರಾ ಬಿಟ್ರೆ, ಇನ್ನುಳಿದ 7 ಪಂದ್ಯಗಳಲ್ಲೂ ಸೋತು ಸುಣ್ಣವಾಗಿದೆ. ಹೀಗಾಗಿ 58 ವರ್ಷಗಳ ಬಳಿಕ ಗೆಲ್ಲೋ ಕನಸು ಕಾಣ್ತಿರುವ ಶುಭ್​ಮನ್​​ ಗಿಲ್​​ ಪಡೆ, ಈಗ ಗೆದ್ದು ಹೊಸ ಇತಿಹಾಸ ನಿರ್ಮಿಸುವ ತವಕದಲ್ಲಿದೆ.

ಅತಿರಥ ಮಹಾರಥರಿಗೆ ಎಡ್ಜ್​ ಬಾಸ್ಟನ್​ನಲ್ಲಿ ಸೋಲು..!

ಎಡ್ಜ್​ ಬಾಸ್ಟನ್​ನಲ್ಲಿ ಟೀಮ್ ಇಂಡಿಯಾ 8 ಟೆಸ್ಟ್​ ಪಂದ್ಯಗಳನ್ನಾಡಿದೆ. ಈ 8 ಟೆಸ್ಟ್​ ಪಂದ್ಯಗಳಲ್ಲಿ ಟೀಮ್ ಇಂಡಿಯಾ ಪರ ಅತಿರಥ ಮಹಾರಥ ಆಟಗಾರರು, ನಾಯಕರುಗಳೇ ಕಣಕ್ಕಿಳಿದಿದ್ದಾರೆ. ಮನ್ಸೂರ್ ಆಲಿ ಖಾನ್ ಪಟೌಡಿ, ಕಪಿಲ್​ ದೇವ್, ಮಹಮ್ಮದ್ ಅಜರುದ್ದೀನ್, ಎಮ್​.ಎಸ್.ಧೋನಿ, ವಿರಾಟ್ ಕೊಹ್ಲಿ, ಜಸ್​​ಪ್ರೀತ್​​ ಬೂಮ್ರಾ ನಾಯಕತ್ವದ ತಂಡಗಳೇ ಮುಖಭಂಗ ಅನುಭವಿಸಿದೆ. ಆದ್ರೆ, ಈ ಪೈಕಿ 1986ರಲ್ಲಿ ಕಪಿಲ್ ದೇವ್ ನಾಯಕತ್ವದ ಟೀಮ್ ಇಂಡಿಯಾ ಹೊರತು ಪಡೆಸಿದ್ರೆ. ಉಳಿದೆಲ್ಲ ಕಂಡಿದ್ದು ಸೋಲುಗಳೇ.

ಧೋನಿ, ಕೊಹ್ಲಿ ನಾಯಕತ್ವದಲ್ಲಿ ಆಗದಿದ್ದು ಗಿಲ್ ಮಾಡ್ತಾರಾ?

ಇಂಥ ಪ್ರಶ್ನೆ ಸಹಜವಾಗೇ ಉದ್ಬವವಾಗುತ್ತೆ. ಯಾಕಂದ್ರೆ, 2011ರಲ್ಲಿ ಇಂಗ್ಲೆಂಡ್ ಪ್ರವಾಸ ಕೈಗೊಂಡಿದ್ದ ಧೋನಿ ನಾಯಕತ್ವದ ಟೀಮ್ ಇಂಡಿಯಾದಲ್ಲಿ ದಿಗ್ಗಜ ಆಟಗಾರರೇ ಇದ್ದರು. ವಿರೇಂದ್ರ ಸೆಹ್ವಾಗ್, ರಾಹುಲ್ ದ್ರಾವಿಡ್, ಸಚಿನ್ ತೆಂಡುಲ್ಕರ್, ವಿವಿಎಸ್ ಲಕ್ಷಣ್​, ಇಶಾಂತ್ ಶರ್ಮಾ, ಶ್ರೀಶಾಂತ್​​​ರಂಥ ಆಟಗಾರರ ಟೀಮ್ ಇಂಡಿಯಾ ಬಲಿಷ್ಠವಾಗಿತ್ತು. ಇಂಗ್ಲೆಂಡ್ ಪೇಸರ್​ಗಳ ಅಟ್ಯಾಕ್​ಗೆ ಟೀಮ್ ಇಂಡಿಯಾ ಉಡೀಸ್ ಆಗಿತ್ತು.

ಇದನ್ನೂ ಓದಿಇಂಗ್ಲೆಂಡ್​ ಪ್ರವಾಸದ ಬೆನ್ನಲ್ಲೇ ಟೀಮ್ ಇಂಡಿಯಾದಲ್ಲಿ ಮೇಜರ್​ ಸರ್ಜರಿ.. ಏನೇನು ಆಗಲಿದೆ?

publive-image

ಧೋನಿ ನಾಯಕತ್ವದ ಟೀಮ್ ಇಂಡಿಯಾ ಮಾತ್ರವಲ್ಲ. 2018ರಲ್ಲಿ ಇಂಗ್ಲೆಂಡ್ ಪ್ರವಾಸದಲ್ಲಿದ್ದ ಕೊಹ್ಲಿ ನಾಯಕತ್ವದ ಟೀಮ್ ಇಂಡಿಯಾ, ಟೆಸ್ಟ್ ಕ್ರಿಕೆಟ್​ನ ನಂಬರ್​.1 ತಂಡವಾಗಿತ್ತು. ಈ ತಂಡದಲ್ಲಿ ಮುರಳಿ ವಿಜಯ್, ಶಿಖರ್ ಧವನ್, ಅಜಿಂಕ್ಯಾ ರಹಾನೆಯ ಟೆಸ್ಟ್​ ಸ್ಪೆಷಲಿಸ್ಟ್​ಗಳ ದಂಡೇ ಇತ್ತು. ಸೋಲಿನ ಮುಖಭಂಗ ಅನುಭವಿಸಿತ್ತು. ಹೀಗಾಗಿ ಅನಾನುಭವಿ ಕ್ಯಾಪ್ಟನ್​​ ಶುಭ್​ಮನ್, ಗೆಲುವಿನ ದಡ ಸೇರಿಸ್ತಾರಾ ಎಂಬ ಪ್ರಶ್ನೆ ಅಭಿಮಾನಿಗಳಲ್ಲಿದೆ.

ಇತಿಹಾಸ ನಿರ್ಮಿಸಲು ಯಂಗ್ ಇಂಡಿಯಾ ಸಜ್ಜು

ಬರ್ಮಿಂಗ್​ಹ್ಯಾಮ್​ನ ಎಡ್ಜ್​ಬಾಸ್ಟನ್​​ನಲ್ಲಿ ಟೀಮ್ ಇಂಡಿಯಾ ಗೆದ್ದಿಲ್ಲ ನಿಜ. 58 ವರ್ಷಗಳ ಇತಿಹಾಸಕ್ಕೆ ಬ್ರೇಕ್​ ಹಾಕಬಲ್ಲ ತಾಕತ್ತು ಯಂಗ್ ಇಂಡಿಯಾಗೆ ಇದ್ದೇ ಇದೆ. ಲೀಡ್ಸ್​ನ ಶತಕವೀರರ ಜೊತೆಗೆ ಮಿಡಲ್ ಆರ್ಡರ್​, ಲೋವರ್ ಆರ್ಡರ್​ ರನ್​ ಗಳಿಸುವ ಜೊತೆಗೆ ಬೌಲರ್​ಗಳಿಗೆ ಫೀಲ್ಡರ್​ಗಳು ಕೈಹಿಡಿದ್ರೆ. ಎಡ್ಜ್​ಬಾಸ್ಟನ್​ನಲ್ಲಿ ಟೀಮ್ ಇಂಡಿಯಾದಿಂದ ಬ್ಲಾಕ್ ಬಾಸ್ಟರ್ ಪರ್ಫಾಮೆನ್ಸ್​ ಹೊರಬರೋದ್ರಲ್ಲಿ ಡೌಟೇ ಇಲ್ಲ. ಗೆಲುವು ದಾಖಲಿಸಿ, ಹೊಸ ಇತಿಹಾಸ ನಿರ್ಮಿಸುವುದು ಗ್ಯಾರಂಟಿ. ಅಂತಹದೊಂದು ಇತಿಹಾಸ ನಿರ್ಮಿಸಲು ಟೀಮ್ ಇಂಡಿಯಾದಿಂದ ಸಂಘಟಿತ ಆಟ ಹೊರಬರಬೇಕಿದೆ ಅಷ್ಟೇ.

ಇದನ್ನೂ ಓದಿ: ಟೀಂ ಇಂಡಿಯಾಗೆ ಇಂದಿನಿಂದ ಅಗ್ನಿ ಪರೀಕ್ಷೆ; ಶಾರ್ದೂಲ್ ಔಟ್​.. ಬದಲಿ ಆಟಗಾರ ಯಾರು..?

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

Advertisment