KL ರಾಹುಲ್​​ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಗಂಭೀರ್​​; ಟೀಮ್​ ಇಂಡಿಯಾ ಮುಖ್ಯ ಕೋಚ್​​ ವಿರುದ್ಧ ಭಾರೀ ಆಕ್ರೋಶ

author-image
Ganesh Nachikethu
Updated On
ಚಾಂಪಿಯನ್ಸ್​ ಟ್ರೋಫಿಯಲ್ಲಿ KL ರಾಹುಲ್​​​​ಗೆ ಜಾಗವೇ ಇಲ್ಲ.. ಯಾಕೆಂದರೆ..
Advertisment
  • 2ನೇ ಏಕದಿನ ಪಂದ್ಯದಲ್ಲಿ ಗೆದ್ದು ಬೀಗಿದ ಭಾರತ ತಂಡ!
  • ಇಂಗ್ಲೆಂಡ್​​ ವಿರುದ್ಧ ಏಕದಿನ ಸರಣಿ ಗೆದ್ದ ಟೀಮ್​ ಇಂಡಿಯಾ
  • ಕೆ.ಎಲ್​ ರಾಹುಲ್​ ಭವಿಷ್ಯಕ್ಕೆ ಕೊಳ್ಳಿ ಇಟ್ಟ ಗೌತಮ್​ ಗಂಭೀರ್​​

ಇತ್ತೀಚೆಗೆ ಕಟಕ್​​​ ಇಂಟರ್​ ನ್ಯಾಷನಲ್​ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿದೆ. ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆಲ್ಲೋ ಮೂಲಕ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಟೀಮ್​​ ಇಂಡಿಯಾದ ಆಲ್​ರೌಂಡರ್​ ಪ್ರದರ್ಶನವೂ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಅದರಲ್ಲೂ ತಂಡದ ಬ್ಯಾಟಿಂಗ್‌ ವಿಭಾಗ ಬಲಿಷ್ಠ ಆಗಿರುವುದು ಬಿಸಿಸಿಐಗೆ ನಿರಾಳ ಮೂಡಿಸಿದೆ. ಇದರ ಮಧ್ಯೆ ವಿರಾಟ್ ಕೊಹ್ಲಿ ಮತ್ತು ಕೆಎಲ್ ರಾಹುಲ್ ಕಳಪೆ ಫಾರ್ಮ್​​​ ತಂಡಕ್ಕೆ ತಲೆನೋವು ತಂದಿರುವುದು ನಿಜ. ಕೆ.ಎಲ್​ ರಾಹುಲ್ ಬ್ಯಾಟಿಂಗ್‌ ಕ್ರಮಾಂಕ ಪದೇಪದೇ ಬದಲಿಸುತ್ತಿರುವುದು ಭಾರೀ ಆಕ್ರೋಶಕ್ಕೆ ಕಾರಣ ಆಗಿದೆ.

ಕೆ.ಎಲ್​ ರಾಹುಲ್​ ಕಳಪೆ ಪ್ರದರ್ಶನ

ಇಂಗ್ಲೆಂಡ್‌ ವಿರುದ್ಧ ನಡೆದ ಕಳೆದ ಎರಡು ಪಂದ್ಯಗಳಲ್ಲೂ ಕೆ.ಎಲ್​ ರಾಹುಲ್​ ರನ್​​ ಕಲೆ ಹಾಕುವಲ್ಲಿ ಎಡವಿದ್ದಾರೆ. ಕಟಕ್‌ನಲ್ಲಿ 14 ಎಸೆತಗಳಲ್ಲಿ 10 ರನ್​ ಗಳಿಸಿದ್ದ ರಾಹುಲ್​​​, ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್​ ಒಪ್ಪಿಸಿದ್ದರು.

ಮುಂದಿನ ಪಂದ್ಯ ಆಡೋದು ಡೌಟ್​​

ಮೊದಲ 2 ಏಕದಿನ ಪಂದ್ಯಗಳಲ್ಲಿ ರಾಹುಲ್​ ಗಳಿಸಿದ್ದು ಕೇವಲ 12 ರನ್. ಹೀಗಾಗಿ ರಾಹುಲ್​ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಅನುಮಾನ ಮೂಡಿದೆ. ಇದಕ್ಕೆ ಕಾರಣ ಟೀಮ್​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​​.

ಗಂಭೀರ್​ ವಿರುದ್ಧ ಆಕ್ರೋಶ

ಇದಕ್ಕೆಲ್ಲಾ ಟೀಮ್​ ಇಂಡಿಯಾ ಮುಖ್ಯ ಕೋಚ್​ ಗಂಭೀರ್​ ಕಾರಣ ಎಂದು ಫ್ಯಾನ್ಸ್​ ಆಕ್ರೋಶ ಹೊರಹಾಕಿದ್ದಾರೆ. ಗಂಭೀರ್ ತಂತ್ರದಿಂದಾಗಿ ಕೆಎಲ್ ರಾಹುಲ್ ವಿಫಲರಾಗುತ್ತಿದ್ದು, ಇವರ ವೃತ್ತಿಜೀವನ ಅಪಾಯದಲ್ಲಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ:ಆರ್​​ಸಿಬಿ ತಂಡಕ್ಕೆ ಬಿಗ್​ ಶಾಕ್​; ಐಸಿಸಿ ಮೆಗಾ ಟೂರ್ನಿಯಿಂದಲೇ ಹೊರಬಿದ್ದ ಇಬ್ಬರು ಸ್ಟಾರ್​ ಪ್ಲೇಯರ್ಸ್​

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment