/newsfirstlive-kannada/media/post_attachments/wp-content/uploads/2025/06/team-india-5.jpg)
- ಕಳಪೆ ಆಟವನ್ನ ಡಿಫೆಂಡ್ ಮಾಡಿಕೊಂಡ ಹೆಡ್ಕೋಚ್
- ಕ್ಯಾಚ್ ಡ್ರಾಪ್ನ ಗಂಭೀರವಾಗಿ ಪರಿಗಣಿಸದ ಕೋಚ್
- ನಾಯಕನ ಕೆಟ್ಟ ನಿರ್ಣಯವನ್ನ ಸಮರ್ಥನೆ ಸರೀನಾ?
ಲೀಡ್ಸ್​ನಲ್ಲಿ ಟೀಮ್​ ಇಂಡಿಯಾ ಮುಖಭಂಗ ಅನುಭವಿಸಿದೆ. ಗೆಲ್ಲಬಹುದಾಗಿದ್ದ ಪಂದ್ಯವನ್ನ ಕೈಚೆಲ್ಲಿ ವಿಶ್ವ ಕ್ರಿಕೆಟ್​ನ ಎದುರು ವೀಕ್​ನೆಸ್​ ಎಕ್ಸ್​​ಪೋಸ್​ ಮಾಡಿಕೊಂಡಿದೆ. ಟೀಮ್​ ಇಂಡಿಯಾ ಹೀನಾಯ ಸೋಲಿನ ಮುಖಭಂಗ ಎದುರಿಸಿದ್ದರೂ ಟೀಮ್​ ಇಂಡಿಯಾ ಹೆಡ್​ ಕೋಚ್​ ಗಂಭೀರ್​ ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅಂತಿದ್ದಾರೆ!
ಜಟ್ಟಿ ಕೆಳಗೆ ಬಿದ್ದರೂ ಮೀಸೆ ಮಣ್ಣಾಗಲಿಲ್ಲ
ಕಳೆದ 9 ಟೆಸ್ಟ್​ ಪಂದ್ಯಗಳಲ್ಲಿ ಟೀಮ್​ ಇಂಡಿಯಾ ಸೋತ 7ನೇ ಪಂದ್ಯ ಇದು. ಈ ಸೋಲುಗಳು ಬಂದಿದ್ದ ಹೆಡ್​ಕೋಚ್​​​ ಗೌತಮ್​ ಗಂಭೀರ್​ ಮಾರ್ಗದರ್ಶನದಲ್ಲೇ. ಇಷ್ಟೊಂದು ಹೀನಾಯ ರೆಕಾರ್ಡ್​​ ಇದ್ದರೂ ಹೆಡ್​ ಕೋಚ್​ ವರ್ತನೆ, ಕೆಳಗೆ ಬಿದ್ರೂ ಮೀಸೆ ಮಣ್ಣಾಗಲಿಲ್ಲ ಅನ್ನುವಂತಿದೆ. ಹೀನಾಯ ಸೋಲಿನ ಬಳಿಕ ಪ್ರೆಸ್​ಮೀಟ್​ ಮಾಡಿರೋ ಗಂಭೀರ್​, ಕಳಪೆ ಆಟವನ್ನು ಡಿಫೆಂಡ್​ ಮಾಡಿಕೊಂಡಿದ್ದಾರೆ.
ಕ್ಯಾಚ್ ಡ್ರಾಪ್ ಬಗ್ಗೆ ಏನಂದ್ರು..?
ಕ್ಯಾಚ್ಗಳು ಆಗಾಗ ಡ್ರಾಪ್ ಆಗ್ತವೆ. ವಿಶ್ವದ ಅತ್ಯುತ್ತಮ ಫೀಲ್ಡರ್ಗಳೂ ಕೂಡ ಕ್ಯಾಚ್ಗಳನ್ನ ಮಿಸ್ ಮಾಡ್ತಾರೆ. ಯಾರೂ ಬೇಕಂತ ಇದನ್ನ ಮಾಡಲ್ಲ-ಗೌತಮ್ ಗಂಭೀರ್, ಮುಖ್ಯ ಕೋಚ್
ಲೀಡ್ಸ್​​​ ಟೆಸ್ಟ್​ನಲ್ಲಿ ಟೀಮ್​ ಇಂಡಿಯಾ ಸೋಲಿಗೆ ಕ್ಯಾಚ್​ ಡ್ರಾಪ್​ಗಳೇ ಪ್ರಮುಖ ಕಾರಣ. ಹೆಡ್​ ಕೋಚ್​ ಗೌತಮ್​ ಗಂಭೀರ್​ ಇದನ್ನು ಸೀರಿಯಸ್ಸಾಗಿ ತೆಗೆದುಕೊಂಡಂತಿಲ್ಲ. ಅತ್ಯುತ್ತಮ ಫೀಲ್ಡರ್​​ಗಳೂ ಕೂಡ ಡ್ರಾಪ್​ ಮಾಡ್ತಾರೆ ಅಂತಾ ಪರೋಕ್ಷವಾಗಿ ಸಮರ್ಥಿಸಿಕೊಳ್ತಾರೆ. ಒಂದಾದ್ರೆ ಒಕೆ, ಎರಡಾದ್ರೆ ಬಿಡು ಪರವಾಗಿಲ್ಲ ಅನ್ನಬಹುದು. ಆದರೆ ಬರೋಬ್ಬರಿ 6 ಸುಲಭದ ಕ್ಯಾಚ್​ಗಳನ್ನ​ ಡ್ರಾಪ್​ ಮಾಡಿದ್ದನ್ನ ಸೀರಿಯಸ್ಸಾಗಿ ತೆಗೆದುಕೊಳ್ಳಲಿಲ್ಲ ಅಂದ್ರೆ ಏನರ್ಥ ಎಂಬ ಪ್ರಶ್ನೆ ಶುರುವಾಗಿದೆ.
ಇದನ್ನೂ ಓದಿ: 4 ಕ್ಯಾಚ್ ಡ್ರಾಪ್ ಮಾಡಿದ್ದರೂ ಕಾಡಲಿಲ್ಲ ಪಶ್ಚಾತಾಪ.. ಡ್ಯಾನ್ಸ್ ಮಾಡಿ ಕೆಂಗಣ್ಣಿಗೆ ಗುರಿಯಾದ ಸ್ಟಾರ್..! VIDEO
ಲೀಡ್ಸ್​​ ಟೆಸ್ಟ್​ನ ಎರಡೂ ಇನ್ನಿಂಗ್ಸ್​​ಗಳಲ್ಲಿ ಟೀಮ್​ ಇಂಡಿಯಾದ ಟಾಪ್​ ಆರ್ಡರ್​​ ಬ್ಯಾಟರ್​​ಗಳು ಪಾರಮ್ಯ ಮೆರೆದಿದ್ರು. ನಂತರದಲ್ಲಾದ ದಿಢೀರ್​ ಕುಸಿತ ಬಿಗ್​​ ಸ್ಕೋರ್​ ಕಲೆ ಹಾಕೋ ಸುವರ್ಣಾವಕಾಶವನ್ನ ನುಚ್ಚು ನೂರು ಮಾಡ್ತು. ಇದೂ ಕೂಡ ಸೋಲಿಗೆ ಪ್ರಮುಖ ಕಾರಣವಾಯ್ತು. ಇದ್ರ ಬಗ್ಗೆ ಕೇಳಿದ್ರೆ ಕೋಚ್​ ಆಗಾಗ ಹೀಗೆಲ್ಲಾ ಆಗುತ್ತೆ ಅಂತಿದ್ದಾರೆ. 2ನೇ ಟೆಸ್ಟ್​​ಗೆ ಎಲ್ಲಾ ತಪ್ಪನ್ನ ತಿದ್ದಿಕೊಳ್ತೀವಿ ಅಂತಾನೂ ಹೇಳ್ತಿಲ್ಲ. Hopefully, we can learn ಅಂತಿದ್ದಾರೆ.
ಬ್ಯಾಟಿಂಗ್ನಲ್ಲಿ ಇದು ಬೇಸರದ ವಿಷಯ. ಯಾಕಂದ್ರೆ ಮೊದಲ ಇನ್ನಿಂಗ್ಸ್ನಲ್ಲಿ 7 ವಿಕೆಟ್ಗಳನ್ನ 40 ರನ್ಗಳಿಗೆ ಮತ್ತು ಸೆಕೆಂಡ್ ಇನ್ನಿಂಗ್ಸ್ನಲ್ಲಿ 30 ರನ್ಗೆ 6 ವಿಕೆಟ್ ಕಳೆದುಕೊಂಡ್ವಿ. ನಮಗೆ ಫಸ್ಟ್ ಇನ್ನಿಂಗ್ಸ್ನಲ್ಲಿ 600ರ ಆಸುಪಾಸಿನಲ್ಲಿ ರನ್ಗಳಿಸೋ ಅವಕಾಶವಿತ್ತು. ಹಾಗಾಗಿದ್ರೆ ನಾವು ಡಾಮಿನೇಟ್ ಮಾಡಬಹುದಿತ್ತು. ಆಗಾಗ ಹೀಗೆಲ್ಲಾ ಆಗಿತ್ತೆ. Hopefully 2ನೇ ಟೆಸ್ಟ್ ವೇಳೆಗೆ ಕಲೀತಿವಿ.
ಜನ ಕೆಲವೊಮ್ಮೆ ಫೇಲ್ ಆಗ್ತಾರೆ that's okay. ಅವರು ತಮ್ಮನ್ನ ತಾವು ಅನ್ವಯಿಸಿಕೊಳ್ತಿಲ್ಲ ಅಂತಲ್ಲ. ಜನ ಕೆಲವೊಮ್ಮೆ ಫೇಲ್ ಆಗ್ತಾರೆ. ಮತ್ತು ಅದು ಪರವಾಗಿಲ್ಲ. ಇದರರ್ಥ ಅವರು ನೆಟ್ಸ್ನಲ್ಲಿ ಹಾರ್ಡ್ವರ್ಕ್ ಮಾಡ್ತಿಲ್ಲ ಅಂತಲ್ಲ. ಕೆಲವೊಮ್ಮೆ ಹೀಗೆಲ್ಲ ಅಗುತ್ತೆ. ಕೆಲವೊಮ್ಮೆ ಅದ್ಭುತ ಬ್ಯಾಟ್ಸ್ಮನ್ಗಳೂ ವೈಫಲ್ಯ ಅನುಭವಿಸ್ತಾರೆ- ಗೌತಮ್ ಗಂಭೀರ್, ಟೀಂ ಇಂಡಿಯಾದ ಮುಖ್ಯ ಕೋಚ್
ನಾಯಕನ ಕೆಟ್ಟ ನಿರ್ಣಯ ಸಮರ್ಥಿಸಿದ್ದು ಸರೀನಾ?
ಕೋಚ್​ ಅಂದ್ಮೇಲೆ ನಾಯಕನಿಗೆ ಬೆಂಬಲ ವ್ಯಕ್ತಪಡಿಸಬೇಕು. ಅದ್ರಲ್ಲೂ ಮೊದಲ ಬಾರಿ ನಾಯಕತ್ವ ನಿಭಾಯಿಸಿದ ಶುಭ್​ಮನ್​ ಗಿಲ್​ಗೆ ಬೆಂಬಲದ ಅಗತ್ಯ ಇದ್ದೇ ಇದೆ. ನಾಯಕನ ಮಾಡಿದ ತಪ್ಪುಗಳನ್ನ, ಫೀಲ್ಡ್​ನಲ್ಲಿ ತೆಗೆದುಕೊಂಡ ಕೆಟ್ಟ ನಿರ್ಧಾರವನ್ನ ಸಮರ್ಥಿಸೋದು ಸರಿಯಲ್ಲ. ಗಂಭೀರ್​, ಗಿಲ್ ಅವರ ತಪ್ಪು ನಿರ್ಧಾರವನ್ನೂ ಸಮರ್ಥಿಸಿದ್ದಾರೆ. ಸೆಕೆಂಡ್​ ಇನ್ನಿಂಗ್ಸ್​ನಲ್ಲಿ 2 ವಿಕೆಟ್​ ತೆಗೆದುಕೊಂಡು ಟೀಮ್​ ಇಂಡಿಯಾಗೆ ರಿಲೀಫ್​ ನೀಡಿದ ಶಾರ್ದೂಲ್​ ಠಾಕೂರ್​ಗೆ ಫಸ್ಟ್​ ಇನ್ನಿಂಗ್ಸ್​​ನಲ್ಲಿ ಗಿಲ್​ ಟ್ರಸ್ಟ್​ ಮಾಡಲಿಲ್ಲ. ಇದ್ರ ಬಗ್ಗೆ ಕೇಳಿದ್ರೆ ಶಾರ್ದೂಲ್​ನ ಸ್ಪೆಷಲಿಸ್ಟ್​ ಬೌಲರ್​ ಆಗಿ ನಾವು ಸೆಲೆಕ್ಟ್​ ಮಾಡಲಿಲ್ಲ ಎಂದಿದ್ದಾರೆ.
ಮೊದಲ ಸೋಲಿನ ಬಳಿಕ ಪ್ರೆಸ್​​ಮೀಟ್​ಗೆ ಬಂದ ಗಂಭೀರ್​ ಮಾಡಿದ ತಪ್ಪುಗಳನ್ನ ಒಪ್ಪಿಕೊಳ್ಳುವುದಕ್ಕಿಂತ ಹೆಚ್ಚಾಗಿ ಸಮರ್ಥನೆಯನ್ನೇ ಮಾಡಿ ಮುಗಿಸಿದ್ದಾರೆ. ಮುಂದಿನ ಟೆಸ್ಟ್​ ಆರಂಭಕ್ಕೆ ಇನ್ನೂ 6 ದಿನಗಳ ಟೈಮ್​ ಇದೆ. ಈ ಗ್ಯಾಪ್​ನಲ್ಲಾದ್ರೂ ವೀಕ್​ನೆಸ್​ ಮೇಲೆ ಹೆಡ್​ಕೋಚ್​ ಗಂಭೀರ್​ ವರ್ಕ್ ಮಾಡಬೇಕಿದೆ.
ಇದನ್ನೂ ಓದಿ: ಮೊದಲ ಟೆಸ್ಟ್​​ ಸೋಲಿನ ಬೆನ್ನಲ್ಲೇ ತಂಡದಿಂದ ಸ್ಟಾರ್ ವೇಗಿಯ ಕೈಬಿಟ್ಟ ಟೀಂ ಇಂಡಿಯಾ
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ