newsfirstkannada.com

ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

Share :

Published July 19, 2024 at 2:06pm

    ಶ್ರೀಲಂಕಾ ಪ್ರವಾಸಕ್ಕೆ ಟೀಮ್​ ಇಂಡಿಯಾ ಪ್ರಕಟ

    ನೋ ಎನ್ನಲಿಲ್ಲ, ರೋಹಿತ್​​​ ಹಾದಿಯಲ್ಲೇ ಸಾಗಿದ ಕೊಹ್ಲಿ​

    ಸೂರ್ಯಂಗೆ ನಗುವುದೋ? ಅಳುವುದೋ ಪರಿಸ್ಥಿತಿ

ಟೀಮ್​ ಇಂಡಿಯಾದ ನೂತನ ಹೆಡ್​ ಕೋಚ್​ ಗೌತಮ್​ ಗಂಭೀರ್​ ಮೊದಲ ಸೆಲೆಕ್ಷನ್​​ ಮೀಟಿಂಗ್​ನಲ್ಲೇ ಮೇಲುಗೈ ಸಾಧಿಸಿದ್ದಾರೆ. ಗಂಭೀರ್​ ಬಿಗಿಪಟ್ಟಿಗೆ ಕಿಂಗ್​ ಕೊಹ್ಲಿಯೇ ತಲೆಬಾಗಿದ್ರೆ, ಕೆ.ಎಲ್​ ರಾಹುಲ್​, ಹಾರ್ದಿಕ್​ ಪಾಂಡ್ಯಗೆ ಶಾಕ್​ ಎದುರಾಗಿದೆ. ಟೀಮ್​ ಸೆಲೆಕ್ಷನ್​ ಮಾಡಿದ್ದು ಸೆಲೆಕ್ಷನ್​ ಕಮಿಟಿಯಾದ್ರೂ, ಆಯ್ಕೆ ವಿಚಾರದಲ್ಲಿ ಗಂಭೀರ್​ ಸಖತ್ತಾಗೇ ಗೇಮ್​ ಆಡಿದ್ದಾರೆ.

ಮೊದಲ ಟಾಸ್ಕ್​ಗೆ ಟೀಮ್​ ಇಂಡಿಯಾ ಹೆಡ್​ಕೋಚ್​ ಗೌತಮ್​ ಗಂಭೀರ್​ ಸಜ್ಜಾಗಿದ್ದಾರೆ. ಜುಲೈ 27ರಿಂದ ಆರಂಭವಾಗೋ ಲಂಕಾ ಎದುರಿನ ಸರಣಿಯೊಂದಿಗೆ ಅಧಿಕೃತವಾಗಿ ಗೌತಿ ಚಾರ್ಜ್​ ತೆಗೆದುಕೊಳ್ಳಲಿದ್ದಾರೆ. ಅದಕ್ಕೂ ಮುನ್ನ ಟೀಮ್ ಸೆಲೆಕ್ಷನ್​​ನಲ್ಲೇ ಗಂಭೀರ್​ ಬಿಗಿ ಹಿಡಿತ ಸಾಧಿಸಿದ್ದಾರೆ.

ಇದನ್ನೂ ಓದಿ:ಎಣ್ಣೆ ಪ್ರಿಯರಿಗೆ ಇದು ಬೇಸರದ ಸುದ್ದಿ.. ಈ ವಿಚಾರಕ್ಕೆ ಎಚ್ಚರಿಕೆ ಕೊಟ್ಟ ಅಬಕಾರಿ ಇಲಾಖೆ..!

ಗಂಭೀರ್​​ ಮಾತಿಗೆ ತಲೆ ಬಾಗಿದ ಕೊಹ್ಲಿ
ಲಂಕಾ ಎದುರಿನ ಏಕದಿನ ಸರಣಿಯಿಂದ ವಿರಾಟ್​ ಕೊಹ್ಲಿ, ರೋಹಿತ್​ ಶರ್ಮಾ ಸೇರಿದಂತೆ ಹಲ ಸೀನಿಯರ್ಸ್​ ರೆಸ್ಟ್​ ಬಯಸಿದ್ರು. ಗೌತಮ್​ ಗಂಭೀರ್​ ಮುಂಬರೋ ಚಾಂಪಿಯನ್ಸ್​ ಟ್ರೋಫಿ ದೃಷ್ಟಿಯಿಂದ ಸೀನಿಯರ್ಸ್​ ಆಡಲೇಬೇಕು ಬಿಗಿ ಪಟ್ಟು ಹಿಡಿದಿದ್ರು. ಕೊನೆಗೂ ಗೌತಿ ಒತ್ತಾಯಕ್ಕೆ ಸೀನಿಯರ್ಸ್​ ಮಣಿದಿದ್ದಾರೆ. ರೋಹಿತ್​ ಶರ್ಮಾ, ವಿರಾಟ್​ ಕೊಹ್ಲಿ ಏಕದಿನ ಸರಣಿಯನ್ನಾಡಲು ಯೆಸ್​​ ಎಂದಿದ್ದಾರೆ.

ರಾಹುಲ್​, ಹಾರ್ದಿಕ್​ಗೆ ತೀವ್ರ ನಿರಾಸೆ..!
ರೋಹಿತ್​ ಶರ್ಮಾ ಬಳಿಕ ಕೆ.ಎಲ್​ ರಾಹುಲ್​ ಹಾಗೂ ಹಾರ್ದಿಕ್​ ಪಾಂಡ್ಯ ಟೀಮ್​ ಇಂಡಿಯಾದ ನಾಯಕತ್ವದ ಮೇಲೆ ಕಣ್ಣಿಟ್ಟಿದ್ರು. ಗೌತಮ್​​ ಗಂಭೀರ್​ ಇಬ್ಬರ ಕನಸಿಗೆ ತಣ್ಣೀರೆರೆಚಿದ್ದಾರೆ. ಟಿ20 ನಾಯಕತ್ವವನ್ನ ಸೂರ್ಯಕುಮಾರ್​ಗೆ ನೀಡಿ ಶಾಕ್​ ಕೊಟ್ಟಿದ್ದಾರೆ. ಇಷ್ಟೇ ಅಲ್ಲ.. ಭವಿಷ್ಯದಲ್ಲಿ ಏಕದಿನ ತಂಡದ ನಾಯಕತ್ವವೂ ನಿಮಗೆ ಸಿಗಲ್ಲ ಅನ್ನೋ ಪರೋಕ್ಷ ಸಂದೇಶವನ್ನ ರವಾನಿಸಿದ್ದಾರೆ.

ಶುಭ್​ಮನ್​ ಗಿಲ್​​ ಭವಿಷ್ಯದ ನಾಯಕ..!
ಜಿಂಬಾಬ್ವೆ ಪ್ರವಾಸದಲ್ಲಿ ತಂಡವನ್ನು ಮುನ್ನಡೆಸಿ ನಾಯಕತ್ವದ ಅಗ್ನಿ ಪರೀಕ್ಷೆ ಗೆದ್ದ ಶುಭ್​​ಮನ್​ ಗಿಲ್​ಗೆ ಬಂಪರ್​ ಜಾಕ್​ಪಾಟ್​ ಹೊಡೆದಿದೆ. ಏಕದಿನ ಹಾಗೂ ಟಿ20 ಎರಡೂ ತಂಡಗಳ ಉಪನಾಯಕನ ಪಟ್ಟವನ್ನ ಶುಭ್​ಮನ್​ ಗಿಲ್​ಗೆ ನೀಡಲಾಗಿದೆ. ಈ ಮೂಲಕ ಯುವ ಶುಭ್​ಮನ್​ ಗಿಲ್​ನ ಭವಿಷ್ಯದ ನಾಯಕನನ್ನಾಗಿ ಬೆಳೆಸೋ ಯತ್ನಕ್ಕೆ ಟೀಮ್​ ಇಂಡಿಯಾ ಕೈ ಹಾಕಿದೆ ಎಂದೇ ವಿಶ್ಲೇಷಣೆ ಮಾಡಲಾಗುತ್ತೆ.

ಇದನ್ನೂ ಓದಿ:ಪಾಂಡ್ಯ-ನಟಾಶಾ ಇನ್ಮುಂದೆ ಬೇರೆ ಬೇರೆ.. ಪುತ್ರ ಅಗಸ್ತ್ಯ ಯಾರ ಜೊತೆಗೆ ಇರುತ್ತಾನೆ..?

ಸೂರ್ಯನಿಗೆ ಸರ್​​​ಪ್ರೈಸ್​ ಮತ್ತು ಶಾಕ್​..!
ರೋಹಿತ್​ ಶರ್ಮಾ ನಿವೃತ್ತಿಯ ಬೆನ್ನಲ್ಲೇ ಸರ್​ಪ್ರೈಸ್​ ರೀತಿಯಲ್ಲಿ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್​ ಯಾದವ್​​ನ ಅರಸಿಕೊಂಡು ಬಂದಿದೆ. ಇದ್ರಿಂದ ನೂರಕ್ಕೆ ನೂರರಷ್ಟು ಸೂರ್ಯ ಖುಷಿಪಡುವಂತಿಲ್ಲ. ಟಿ20 ಫಾರ್ಮೆಟ್​ನ ನಾಯಕತ್ವ ಬಂದ ಬೆನ್ನಲ್ಲೇ, ಏಕದಿನ ತಂಡದಿಂದ ಸೂರ್ಯನಿಗೆ ಜಾಗವೇ ಇಲ್ಲದಂತಾಗಿದೆ. ಓಡಿಐ ತಂಡದಿಂದ ಸೂರ್ಯನಿಗೆ ಗೇಟ್​ಪಾಸ್​ ನೀಡಲಾಗಿದೆ.

ಸಂಜು ಸ್ಯಾಮ್ಸನ್​, ಶ್ರೇಯಸ್ ಅಯ್ಯರ್​​ಗೆ ಲೈಫ್​ ಲೈನ್​
ಶ್ರೀಲಂಕಾ ಪ್ರವಾಸದ T20 ತಂಡದಲ್ಲಿ ಮಾತ್ರ ಸಂಜು ಸ್ಯಾಮ್ಸನ್​ ಸ್ಥಾನ ನೀಡಲಾಗಿದೆ. ಏಕದಿನ ತಂಡಕ್ಕೆ ಟೀಮ್​ ಇಂಡಿಯಾದಿಂದಲೇ ಹೊರಬಿದ್ದಿದ್ದ ಶ್ರೇಯಸ್​ ಅಯ್ಯರ್​ ಕಮ್​ಬ್ಯಾಕ್​ ಮಾಡಿದ್ದಾರೆ. ಖಾಯಂ ಸ್ಥಾನಕ್ಕಾಗಿ ಸ್ಟ್ರಗಲ್​ ಮಾಡ್ತಿರೋ ಸಂಜು ಹಾಗೂ ಕಮ್​ಬ್ಯಾಕ್​ ಮಾಡಿರೋ ಶ್ರೇಯಸ್​ಗೆ ಈ ಅವಕಾಶವನ್ನ ಲೈಫ್​ಲೈನ್​ ಎನ್ನಲಾಗ್ತಿದೆ. ಇಲ್ಲಿ ಮಿಂಚಿದ್ರಷ್ಟೇ ಭವಿಷ್ಯ ಭದ್ರವಾಗಲಿದೆ.

ಖಲೀಲ್​​, ಪರಾಗ್, ವಾಷಿಂಗ್ಟನ್​ ಮೇಲೆ ಫೋಕಸ್​
ಹಲವು ಟ್ಯಾಲೆಂಟೆಡ್​ ಆಟಗಾರರು ತಂಡದಲ್ಲಿ ಸ್ಥಾನಗಿಟ್ಟಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಖಲೀಲ್​ ಅಹ್ಮದ್​, ರಿಯಾನ್​ ಪರಾಗ್, ವಾಷಿಂಗ್ಟನ್​ ಸುಂದರ್​ ಸೆಲೆಕ್ಷನ್​ ಸದ್ಯ ಎಲ್ಲರ ಕುತೂಹಲ ಹೆಚ್ಚಿಸಿದೆ. ಭವಿಷ್ಯದ ತಂಡ ಕಟ್ಟೋ ದೃಷ್ಟಿಯಿಂದ ಈ ಮೂವರಿಗೆ ಸ್ಥಾನ ನೀಡಲಾಗಿದೆ ಎನ್ನಲಾಗ್ತಿದೆ. ಸರಣಿಯೂದ್ದಕ್ಕೂ ಇವರನ್ನ ಟೀಮ್​ ಮ್ಯಾನೇಜ್​ಮೆಂಟ್​ನ ಹದ್ದಿನ ಕಣ್ಣಿರಲಿದೆ.

ಇದನ್ನೂ ಓದಿ:ಪಾಂಡ್ಯ ಹಿಂದಿಕ್ಕಿ ಸೂರ್ಯ ಪಟ್ಟ ಗಿಟ್ಟಿಸಿಕೊಂಡಿದ್ದು ಹೇಗೆ..? ಇದು ತ್ರಿಮೂರ್ತಿಗಳ ಕೃಪಾಕಟಾಕ್ಷ..!

ಒಟ್ಟಿನಲ್ಲಿ, ಮೊದಲ ಟೀಮ್​ ಸೆಲೆಕ್ಷನ್​ನಲ್ಲೇ ಗೌತಮ್​ ಗಂಭೀರ್​, ಬಿಗಿ ಹಿಡಿತ ಸಾಧಿಸಿರೋದು ಸ್ಪಷ್ಟವಾಗಿ ಗೊತ್ತಾಗ್ತಿದೆ. ಐಸಿಸಿ ಟ್ರೋಫಿಗಳನ್ನ ಟಾರ್ಗೆಟ್​ ಮಾಡಿ, ಗಂಭೀರ್​ ಈ ಎಲ್ಲಾ ನಿರ್ಧಾರಗಳನ್ನ ಮಾಡಿದ್ದಾರೆ. ಟಫ್​ ಕಾಲ್​​ಗಳನ್ನ ತೆಗೆದುಕೊಂಡಿರೋ ಹೆಡ್​ ಮಾಸ್ಟರ್​​ ಗಂಭೀರ್​, ಇದೀಗ ಪರ್ಫಾಮೆನ್ಸ್​ನ ಉತ್ತರ ಕೊಡಬೇಕಿದೆ. ಅದೇ ಸದ್ಯದ ಕುತೂಹಲ.

ವಿಶೇಷ ವರದಿ: ವಸಂತ್​ ಮಳವತ್ತಿ

ವಿಶೇಷ ಸೂಚನೆ: ಕ್ರಿಕೆಟ್​​ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್

ಗಂಭೀರ್​​ ಆಡಿದ ಗೇಮ್​ಗೆ ಬೆಂಡ್​ ಆದ ಕೊಹ್ಲಿ.. ಆರಂಭದಲ್ಲೇ ಜುಟ್ಟು ಹಿಡಿದು ಬಿಗಿಗೊಳಿಸಿದ ಗೌತಿ..!

https://newsfirstlive.com/wp-content/uploads/2024/07/KOHLI-GAMBHIR.jpg

Load More