ಗೆದ್ದರಷ್ಟೇ ಸರಣಿ ಜೀವಂತ! ಇತಿಹಾಸ ಬೇರೆನೇ ಹೇಳ್ತಿದೆ.. ಇಲ್ಲಿ ನುಗ್ಗಿ ಹೊಡೆದ್ರೆನೇ ಚರಿತ್ರೆ..!

author-image
Ganesh
Updated On
ಗೆದ್ದರಷ್ಟೇ ಸರಣಿ ಜೀವಂತ! ಇತಿಹಾಸ ಬೇರೆನೇ ಹೇಳ್ತಿದೆ.. ಇಲ್ಲಿ ನುಗ್ಗಿ ಹೊಡೆದ್ರೆನೇ ಚರಿತ್ರೆ..!
Advertisment
  • ಭಾರತ, ಇಂಗ್ಲೆಂಡ್ ನಡುವಿನ 4ನೇ ಟೆಸ್ಟ್​ ಪಂದ್ಯಕ್ಕೆ ಕ್ಷಣಗಣನೆ
  • ಮ್ಯಾಂಚೆಸ್ಟರ್​ನಲ್ಲಿ ಯಂಗ್ ಇಂಡಿಯಾ ಬರೆಯುತ್ತಾ ಚರಿತ್ರೆ?
  • 89 ವರ್ಷಗಳ ಇತಿಹಾಸ ಬದಲಿಸಲಿದೆಯಾ ಟೀಮ್ ಇಂಡಿಯಾ?

ಮ್ಯಾಂಚೆಸ್ಟರ್​ನಲ್ಲಿ ಟೀಮ್ ಇಂಡಿಯಾ ಇತಿಹಾಸ ಸೃಷ್ಟಿಸುತ್ತಾ? ಈ ಮೈದಾನದಲ್ಲೇ ಗೆಲುವನ್ನೇ ಕಾಣದ ಟೀಮ್ ಇಂಡಿಯಾ, ಈಗ ಇಂಜುರಿಯ ನಡುವೆ ಗೆದ್ದು ಬೀಗುತ್ತಾ ಎಂಬ ಪ್ರಶ್ನೆ ಅಭಿಮಾನಿಗಳ ಮನದಲ್ಲಿ ಕಾಡ್ತಿದೆ. ಕ್ರಿಕೆಟ್ ಪಂಡಿತರಲ್ಲೂ ಇದೆ.

ಇಂಡೋ, ಇಂಗ್ಲೆಂಡ್ ಹೈವೋಲ್ಟೇಜ್ ಫೈಟ್​​ಗೆ ಕ್ಷಣಗಣನೆ ಶುರುವಾಗಿದೆ. ಡು ಆರ್​ ಡೈ ಮ್ಯಾಚ್​ನಲ್ಲಿ ಗೆಲ್ಲಲೇಬೇಕಾದ ಒತ್ತಡಕ್ಕೆ ಟೀಮ್ ಇಂಡಿಯಾ ಸಿಲುಕಿದೆ. ಇಂಜುರಿಯ ನಡುವೆಯೂ ಹೋರಾಟಕ್ಕಿಳಿಯುತ್ತಿರುವ ಶುಭ್​​ಮನ್​ ಪಡೆ, ಮ್ಯಾಂಚೆಸ್ಟರ್​ನಲ್ಲಿ ಗೆಲ್ಲುತ್ತಾ ಎಂಬ ಪ್ರಶ್ನೆಯೂ ಕಾಡ್ತಿದೆ. ಇದಕ್ಕೆ ಕಾರಣ ಮ್ಯಾಂಚೆಸ್ಟರ್​ನಲ್ಲಿ ಟೀಮ್ ಇಂಡಿಯಾದ ದಾಖಲೆ.

ಇದನ್ನೂ ಓದಿ: ಇಂಗ್ಲೆಂಡ್ ವಿರುದ್ಧ ಕಣಕ್ಕಿಳಿಯಲು ರೈತನ ಮಗ ಸಜ್ಜು.. ಇಂದು ಅವಕಾಶ ಸಿಕ್ರೆ ಪರಿಶ್ರಮಕ್ಕೆ ಸಿಕ್ಕ ಬೆಲೆ..!

1936ರಿಂದ ಮ್ಯಾಂಚೆಸ್ಟರ್​ನಲ್ಲಿ ಪಂದ್ಯಗಳನ್ನಾಡ್ತಿರುವ ಟೀಮ್ ಇಂಡಿಯಾ, ಬರೋಬ್ಬರಿ 89 ವರ್ಷಗಳಲ್ಲಿ ಗೆಲುವಿನ ಸಿಹಿಯನ್ನೇ ಕಂಡಿಲ್ಲ. ಆಡಿರುವ 9 ಪಂದ್ಯಗಳಲ್ಲಿ 4ರಲ್ಲಿ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, 5 ಪಂದ್ಯಗಳನ್ನು ಡ್ರಾ ಮಾಡಿಕೊಂಡಿದೆ. ದಿಗ್ಗಜ ನಾಯಕರುಗಳ ಅಡಿಯಲ್ಲೇ ಸಾಲು ಸಾಲು ಸೋಲುಂಡಿರುವ ಟೀಮ್ ಇಂಡಿಯಾ, ಈಗ ಯುವ ಪಡೆಯೊಂದಿಗೆ ಗೆದ್ದು ಬೀಗುತ್ತಾ ಅಂದ್ರೆ ಯೆಸ್​.. ಗೆದ್ದು ಬೀಗುತ್ತೆ.

89 ವರ್ಷಗಳ ಇತಿಹಾಸ ಬದಲಿಸಿಲಿದೆ ಯಂಗ್ ಇಂಡಿಯಾ!

89 ವರ್ಷಗಳಿಂದ ಮ್ಯಾಂಚೆಸ್ಟರ್​ನಲ್ಲಿ ಟೀಮ್ ಇಂಡಿಯಾ ಗೆದ್ದಿಲ್ಲ ನಿಜ. 2018ರಿಂದ ವಿಶ್ವ ಕ್ರಿಕೆಟ್​ನಲ್ಲಿ ಟೀಮ್ ಇಂಡಿಯಾ ಇತಿಹಾಸ ಕೆದಕಿದ್ರೆ. ಬೇರೇಯದ್ದೇ ಕಥೆ ಹೇಳ್ತಿದೆ. ಅದೇ ಟೀಮ್ ಇಂಡಿಯಾದ ದಂಡಯಾತ್ರೆಯ ಕಥೆ. ಎದುರಾಳಿ ತಂಡದ ಭದ್ರಕೋಟೆಗೆ ನುಗ್ಗಿ ವಿಜಯಪತಾಕೆ ಹಾರಿಸುವ ಹೋರಾಟದ ಕಥೆ. ಇದಕ್ಕೆ ಲೇಟೆಸ್ಟ್​ ಎಕ್ಸಾಂಪಲ್ ಎಡ್ಜ್​ಬಾಸ್ಟನ್ ಟೆಸ್ಟ್.

ಎಡ್ಜ್​ಬಾಸ್ಟನ್​ನಲ್ಲಿ ಟೀಮ್ ಇಂಡಿಯಾ ಒಂದೇ ಒಂದು ಪಂದ್ಯವನ್ನು ಗೆದ್ದಿರಲಿಲ್ಲ. ಬರೋಬ್ಬರಿ 58 ವರ್ಷಗಳಿಂದ ಗೆಲ್ಲುವ ಕನಸಿನಲ್ಲೇ ಉಳಿಯುತ್ತಿತ್ತು. ಶುಭ್​ಮನ್ ಗಿಲ್ ನಾಯಕತ್ವ ಯಂಗ್ ಇಂಡಿಯಾ, ಇಂಗ್ಲೆಂಡ್​ನ ಭದ್ರಕೋಟೆಯನ್ನೇ ಉಡಾಹಿಸಿತ್ತು. ಟೀಮ್ ಇಂಡಿಯಾ ಇರಲಿ, ಏಷ್ಯಾದ ಯಾವಬ್ಬ ನಾಯಕನೂ ಮಾಡದ ಸಾಧನೆ ಮಾಡಿತ್ತು. 58 ವರ್ಷಗಳ ಬಳಿಕ ಗೆದ್ದು ಚರಿತ್ರೆ ಬರೆದಿತ್ತು. ಇಂಟ್ರೆಸ್ಟಿಂಗ್ ಅಂದ್ರೆ ಕೇವಲ ಎಡ್ಜ್​ಬಾಸ್ಟನ್​ ಟೆಸ್ಟ್ ಮಾತ್ರವಲ್ಲ. 2018ರಿಂದ ಇಂಥಹ ಸಾಲು ಸಾಲು ಕಥೆಗಳಿವೆ.

ಇದನ್ನೂ ಓದಿ: ಇವತ್ತಿನಿಂದ ಧರ್ಮಸ್ಥಳ ಕೇಸ್​ನ ಅಸಲಿ ರಹಸ್ಯ ಹುಡುಕಾಟ.. SITಗೆ ಹೆಚ್ಚುವರಿಯಾಗಿ 20 ಅಧಿಕಾರಿಗಳ ನೇಮಕ

ಟೀಮ್ ಇಂಡಿಯಾ ದಂಡಯಾತ್ರೆ

2018 : 37 ವರ್ಷಗಳ ಬಳಿಕ ಮೆಲ್ಬರ್ನ್​ನಲ್ಲಿ ಟೀಮ್ ಇಂಡಿಯಾ ಗೆಲುವು
2021 : 77 ವರ್ಷಗಳ ಬಳಿಕ ಬ್ರಿಸ್ಬೇನ್​ನಲ್ಲಿ ಮೊದಲ ಗೆಲುವು ದಾಖಲು
2021 : 50 ವರ್ಷಗಳ ನಂತರ ಓವಲ್​ನಲ್ಲಿ ಗೆದ್ದಿದ್ದ ಟೀಮ್ ಇಂಡಿಯಾ
2021 : 11 ವರ್ಷಗಳ ಬಳಿಕ ಸೆಂಚೂರಿಯನ್​​ನಲ್ಲಿ ಮೊದಲ ರಣಕೇಕೆ
2024 : 31 ವರ್ಷಗಳ ಬಳಿಕ ಮೊದಲ ಬಾರಿ ಕೇಪ್​ಟೌನ್​ನಲ್ಲಿ ಗೆಲುವು
2025 : ಬರ್ಮಿಂಗ್​​ಹ್ಯಾಮ್​ನಲ್ಲಿ 58 ವರ್ಷಗಳ ನಂತರ ಮೊದಲ ಗೆಲುವು

ಗೆದ್ದರಷ್ಟೇ ಟೆಸ್ಟ್​ ಸರಣಿ ಜೀವಂತ..!

18 ವರ್ಷಗಳಿಂದ ಇಂಗ್ಲೆಂಡ್‌ ನೆಲದಲ್ಲಿ ಟೀಮ್ ಇಂಡಿಯಾ ಟೆಸ್ಟ್ ಗೆದ್ದಿಲ್ಲ. 2007ರಲ್ಲಿ ಕನ್ನಡಿಗ ರಾಹುಲ್ ದ್ರಾವಿಡ್ ನಾಯಕತ್ವದಲ್ಲಿ ಬಿಟ್ರೆ, ಆ ಬಳಿಕ ಧೋನಿ, ವಿರಾಟ್​​ ಕೊಹ್ಲಿ​ ಅವರಂತಹ ಪ್ರತಿಭಾವಂತ ನಾಯಕರ ಅಡಿಯಲ್ಲೂ ಟೀಮ್ ಇಂಡಿಯಾ ಮಣ್ಣು ಮುಕ್ಕಿದೆ. ಇದೀಗ ಗಿಲ್ ನಾಯಕತ್ವದ ಯಂಗ್ ಇಂಡಿಯಾ ಸರಣಿ ಗೆಲುವಿನ ಬರ ನೀಗಿಸಿಕೊಳ್ಳುವ ಸುವರ್ಣಾವಕಾಶ ಇದೆ. ಈ ಕನಸು ನನಸಾಗಬೇಕಾದ್ರೆ, ಮ್ಯಾಂಚೆಸ್ಟರ್​​ ಟೆಸ್ಟ್​ ಪಂದ್ಯವನ್ನ ಗೆಲ್ಲಲೇಬೇಕು. ಇಲ್ಲ ಅದೇ ಸೋಲಿನ ಸರಮಾಲೆ ಮುಂದುವರಿದ್ರೆ. ಸೋಲು ಮಾತ್ರವೇ ಅಲ್ಲ. ಸರಣಿ ಸೋಲು ಅನುಭವಿಸಲಿದೆ. ಹೀಗಾಗಿ ಹೋರಾಟದ ಮನೋಭಾವ ತೋರುವ ಮೂಲಕ ಹೊಸ ಚರಿತ್ರೆ ಸೃಷ್ಟಿಸಬೇಕಿದೆ.

ಇದನ್ನೂ ಓದಿ: ಕ್ರೀಡಾಪಟುಗಳಿಗೆ ಗುಡ್​ನ್ಯೂಸ್​; ಚಿನ್ನ, ಬೆಳ್ಳಿ, ಕಂಚಿನ ಪದಕ ಗೆದ್ದರೆ ಕೋಟಿ ಕೋಟಿ ಹಣ.. ಸರ್ಕಾರಿ ಉದ್ಯೋಗ

ಕೆಲ ವರ್ಷಗಳಿಂದ ಗೆಲುವನ್ನೇ ಕಾಣದ ಮೈದಾನಗಳಲ್ಲಿ ಗೆದ್ದು ಬೀಗ್ತಿರುವ ಟೀಮ್ ಇಂಡಿಯಾ, ಎಡ್ಜ್​ಬಾಸ್ಟನ್​ನಂತೆಯೇ ಮ್ಯಾಂಚೆಸ್ಟರ್ ಗೆದ್ದು ಹೊಸ ಇತಿಹಾಸ ಬರೆಯುತ್ತಾ ಕಾದುನೋಡಬೇಕಿದೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment