/newsfirstlive-kannada/media/post_attachments/wp-content/uploads/2024/11/Ishant-Sharma.jpg)
ಟೀಮ್ ಇಂಡಿಯಾ, ಆಸ್ಟ್ರೇಲಿಯಾ ನಡುವಿನ 5 ಪಂದ್ಯಗಳ ಮಹತ್ವದ ಟೆಸ್ಟ್ ಸರಣಿ ಶುರುವಾಗಲು ಕೇವಲ ಒಂದು ದಿನ ಮಾತ್ರ ಬಾಕಿ ಇದೆ. ನಾಡಿದ್ದು ಎಂದರೆ ನವೆಂಬರ್ 5ನೇ ತಾರೀಕು ಆರಂಭವಾಗಲಿರೋ ಈ ಟೆಸ್ಟ್ ಸರಣಿಗಾಗಿ ಟೀಮ್ ಇಂಡಿಯಾ ಆಸ್ಟ್ರೇಲಿಯಾ ಪ್ರವಾಸ ಬೆಳೆಸಿದೆ. ಇದರ ಮಧ್ಯೆ ಟೀಮ್ ಇಂಡಿಯಾದ ಸ್ಟಾರ್ ವೇಗಿ ಒಬ್ಬರು ತಂಡದಲ್ಲಿ ಸ್ಥಾನ ಪಡೆದಿದ್ದಾರೆ.
ಕಳೆದ ಮೂರು ವರ್ಷಗಳಿಂದ ಇಂಟರ್ ನ್ಯಾಷನಲ್ ಕ್ರಿಕೆಟ್ನಿಂದ ದೂರ ಉಳಿದಿದ್ದ ಟೀಮ್ ಇಂಡಿಯಾ ಸ್ಟಾರ್ ಬೌಲರ್ ಇವರು. ಇವರ ವಯಸ್ಸು ಬರೋಬ್ಬರಿ 36 ವರ್ಷ. ಇವ್ರು ಮೂರು ವರ್ಷಗಳ ನಂತರ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಗೆ ಆಯ್ಕೆಯಾಗಿದ್ದಾರೆ. ಈ ಸ್ಟಾರ್ ಕ್ರಿಕೆಟರ್ ಬೇರೆ ಯಾರು ಅಲ್ಲ, ಬದಲಿಗೆ ಇಶಾಂತ್ ಶರ್ಮಾ.
ಇಶಾಂತ್ ಶರ್ಮಾ ಸ್ಥಾನ ಪಡೆದಿರುವುದು ಟೀಮ್ ಇಂಡಿಯಾದಲ್ಲಿ ಅಲ್ಲ, ದೆಹಲಿ ತಂಡದಲ್ಲಿ. ಇವರ ಅನುಭವಕ್ಕೆ ದೆಹಲಿ ತಂಡ ಮಣೆ ಹಾಕಿ ಸೈಯದ್ ಮುಷ್ತಾಕ್ ಅಲಿ ಕ್ರಿಕೆಟ್ ಟೂರ್ನಿಗೆ ಆಯ್ಕೆ ಮಾಡಿದೆ. 2021 ನವೆಂಬರ್ ತಿಂಗಳಲ್ಲಿ ತಮ್ಮ ಕೊನೆ ಟೆಸ್ಟ್ ಪಂದ್ಯ ಆಡಿದ್ದ ಇಶಾಂತ್ ಶರ್ಮಾ ಮತ್ತೆ ಟೀಮ್ ಇಂಡಿಯಾಗೆ ಕಮ್ಬ್ಯಾಕ್ ಮಾಡೋ ಕನಸು ಕಾಣುತ್ತಿದ್ದಾರೆ.
ಹಿರಿಯ ಬೌಲರ್‌ಗೆ ಮಣೆ
ಸೈಯದ್ ಮುಷ್ತಾಕ್ ಅಲಿ ಟೂರ್ನಿಗೆ ಇಶಾಂತ್ ಶರ್ಮಾ ದೆಹಲಿ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ದೆಹಲಿ ತಂಡದ ನಾಯಕತ್ವವನ್ನು ಸ್ಟಾರ್ ಬ್ಯಾಟ್ಸ್‌ಮನ್ ಆಯುಷ್ ಬದೋನಿಗೆ ನೀಡಲಾಗಿದೆ. ಆಯುಷ್ ಬದೋನಿ ನಾಯಕತ್ವದಲ್ಲಿ ಇಶಾಂತ್ ಶರ್ಮಾ ಮೈದಾನಕ್ಕಿಳಿಯಲಿದ್ದಾರೆ.
ಸಯ್ಯದ್ ಮುಷ್ತಾಕ್ ಅಲಿ ಟ್ರೋಫಿಗೆ ದೆಹಲಿ ತಂಡ ಹೀಗಿದೆ!
ಪ್ರಿಯಾಂಶ್ ಆರ್ಯ, ಅನುಜ್ ರಾವತ್, ಆಯುಷ್ ಬದೋನಿ (ನಾಯಕ), ಹಿಮ್ಮತ್ ಸಿಂಗ್, ಮಯಾಂಕ್ ಗುಸೇನ್, ಮಯಾಂಕ್ ಯಾದವ್, ಜಾಂಟಿ ಸಿಧು, ಇಶಾಂತ್ ಶರ್ಮಾ, ಯಶ್ ಧುಲ್, ಸಿಮರ್ಜೀತ್ ಸಿಂಗ್, ವೈಭವ್ ಕಂಡ್ಪಾಲ್, ಹರ್ಷ ತ್ಯಾ, ಹರ್ಷ್ ತ್ಯಾ ಹಿಮಾಂಶು ಚೌಹಾಣ್, ವಂಶ್ ಬೇಡಿ, ಆರ್ಯನ್ ರಾಣಾ, ಅಖಿಲ್ ಚೌಧರಿ, ಧ್ರುವ ಕೌಶಿಕ್, ಸಾರ್ಥಕ್ ರಂಜನ್, ಸುಯಶ್ ಶರ್ಮಾ, ದಿಗ್ವೇಶ್ ರಾಠಿ, ಆಯುಷ್ ಸಿಂಗ್, ಪ್ರಿನ್ಸ್ ಚೌಧರಿ, ಪ್ರಣವ್ ರಣವಂಶಿ.
ಇದನ್ನೂ ಓದಿ: ಆಸ್ಟ್ರೇಲಿಯಾ ಸರಣಿಗೆ ಟೆಸ್ಟ್ ಸ್ಪೆಷಲಿಸ್ಟ್ ಎಂಟ್ರಿ; ಟೀಮ್ ಇಂಡಿಯಾದಲ್ಲಿ ಕೊಹ್ಲಿ ಆಪ್ತನಿಗೆ ಹೊಸ ಜವಾಬ್ದಾರಿ
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ