/newsfirstlive-kannada/media/post_attachments/wp-content/uploads/2023/10/Yashaswi-Jaiswal-1.jpg)
ಟೀಮ್ ಇಂಡಿಯಾದ ಯುವ ಬ್ಯಾಟರ್ ಯಶಸ್ವಿ ಜೈಸ್ವಾಲ್. ಜೈಸ್ವಾಲ್ ಈಗಾಗಲೇ ಟಿ20 ಹಾಗೂ ಟೆಸ್ಟ್ ಫಾರ್ಮೇಟ್ನಲ್ಲಿ ಟೀಮ್ ಇಂಡಿಯಾ ಪರ ಅಮೋಘ ಪ್ರದರ್ಶನ ನೀಡಿ ಸೈ ಎನಿಸಿಕೊಂಡಿದ್ದಾರೆ. ಟಿ20 ಮತ್ತು ಟೆಸ್ಟ್ ಫಾರ್ಮೇಟ್ನಲ್ಲಿ ಚೆನ್ನಾಗಿ ಆಡುತ್ತಿದ್ರೂ ಏಕದಿನ ತಂಡದಲ್ಲಿ ಮಾತ್ರ ಇನ್ನೂ ಚಾನ್ಸ್ ಸಿಕ್ಕಿಲ್ಲ.
ಸದ್ಯ ಇಂಟರ್ ನ್ಯಾಷನಲ್ ಕ್ರಿಕೆಟ್ಗೆ ಡೆಬ್ಯೂ ಮಾಡಿದ ಒಂದೂವರೆ ವರ್ಷದ ನಂತರ ಯಶಸ್ವಿ ಜೈಸ್ವಾಲ್ ಏಕದಿನ ತಂಡ ಪರ ಆಡುವ ಅವಕಾಶ ಒದಗಿ ಬಂದಿದೆ. ಈ ಸಲ ಏಕದಿನ ತಂಡಕ್ಕೆ ಜೈಸ್ವಾಲ್ ಅವರನ್ನು ಏಕದಿನ ಆಯ್ಕೆ ಮಾಡಲು ಬಿಸಿಸಿಐ ಆಯ್ಕೆ ಸಮಿತಿ ನಿರ್ಧರಿಸಿದೆ.
ಬ್ಯಾಕಪ್ ಓಪನರ್ ಆಗಿ ಜೈಸ್ವಾಲ್
ಟೀಮ್ ಇಂಡಿಯಾ ಪರ ಓಪನರ್ ಆಗಿ ರೋಹಿತ್ ಶರ್ಮಾ ಮತ್ತು ಶುಭ್ಮನ್ ಗಿಲ್ ಸಾಕಷ್ಟು ಹೆಸರು ಮಾಡಿದ್ದಾರೆ. ಇಂಗ್ಲೆಂಡ್ ವಿರುದ್ಧ ಸರಣಿಗೆ 3ನೇ ಓಪನರ್ ಆಗಿ ಜೈಸ್ವಾಲ್ ಅವರನ್ನು ಬಿಸಿಸಿಐ ಆಯ್ಕೆ ಮಾಡಲಿದೆ.
ಜೈಸ್ವಾಲ್ ಅಮೋಘ ಪ್ರದರ್ಶನ
ಟಿ20 ಕ್ರಿಕೆಟ್ನಲ್ಲಿ ಆರಂಭಿಕನಾಗಿ ಯಶಸ್ವಿಯಾಗಿರೋ ಜೈಸ್ವಾಲ್ ಅವರು ತಾನು ಆಡಿದ 22 ಇನಿಂಗ್ಸ್ಗಳಿಂದ 723 ರನ್ ಕಲೆಹಾಕಿದ್ದಾರೆ. ಟೆಸ್ಟ್ನಲ್ಲಿ 36 ಇನಿಂಗ್ಸ್ಗಳಲ್ಲಿ ಓಪನರ್ ಆಗಿ ಜೈಸ್ವಾಲ್ 2 ದ್ವಿಶತಕ ಹಾಗೂ 4 ಶತಕಗಳೊಂದಿಗೆ 1798 ರನ್ ಬಾರಿಸಿದ್ದಾರೆ.
ಏಕದಿನ ತಂಡಕ್ಕೆ ಎಂಟ್ರಿ ಕೊಡಲು ಸಜ್ಜಾಗಿರೋ ಜೈಸ್ವಾಲ್ಗೆ ಇಂಗ್ಲೆಂಡ್ ವಿರುದ್ಧ ಆಡಲು ಅವಕಾಶ ಸಿಗುತ್ತಾ? ಎಂದು ಕಾದು ನೋಡಬೇಕು. ಸಿಕ್ಕ ಅವಕಾಶವನ್ನು ಸರಿಯಾಗಿ ಬಳಸಿಕೊಂಡರೆ ಜೈಸ್ವಾಲ್ 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಆಯ್ಕೆಯಾಗೋದು ಗ್ಯಾರಂಟಿ.
ಇದನ್ನೂ ಓದಿ:ಮುಂಬೈ ಇಂಡಿಯನ್ಸ್ನಿಂದ ಅಚ್ಚರಿ ನಿರ್ಧಾರ; ಹಳೆಯ ನಾಯಕನಿಗೆ ಕ್ಯಾಪ್ಟನ್ಸಿ ಪಟ್ಟ
ವಿಶೇಷ ಸೂಚನೆ: ಕ್ರಿಕೆಟ್ನ ವಿಶೇಷ ಸುದ್ದಿಗಳಿಗಾಗಿ ವೀಕ್ಷಿಸಿ ‘ರನ್ ಭೂಮಿ’ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್ ಫಸ್ಟ್ ಚಾನೆಲ್