newsfirstkannada.com

ಟೀಂ ಇಂಡಿಯಾಗೆ ಇದೆಂಥಾ ಪರಿಸ್ಥಿತಿ? 3 ತಿಂಗಳಿಂದ ಜರ್ಸಿ ಸ್ಪಾನ್ಸರ್​ಗಾಗಿ ಬಿಸಿಸಿಐ ಹೆಣಗಾಟ..!

Share :

Published July 1, 2023 at 10:36am

  ಸ್ಪಾನ್ಸರ್ ಇಲ್ಲದೇ WTC ಫೈನಲ್ ಆಡಿದ್ದ ರೋಹಿತ್ ಪಡೆ

  ಬಲಾಢ್ಯ ಬಿಸಿಸಿಐಗೆ ಜರ್ಸಿ ಸ್ಪಾನ್ಸರ್ ಸಿಗ್ತಿಲ್ಲ ಯಾಕೆ..?

  ಈ ಕಾರಣದಿಂದ ರೋಹಿತ್​ ಬಾಯ್ಸ್​ಗೆ ಸ್ಪಾನ್ಸರ್​​ ಮಿಸ್ಸಿಂಗ್​​

ಹೇಳಿಕೊಳ್ಳೋಕೆ ಇದು ವರ್ಲ್ಡ್ ರಿಚೆಸ್ಟ್​ ಬೋರ್ಡ್​. ಆದರೆ ಇವರ ಸ್ಥಿತಿ ನೋಡಿದ್ರೆ ಅಯ್ಯೋ ಅನ್ನಿಸುತ್ತೆ. ಐಸಿಸಿಯನ್ನ ಕಿರುಬೆರಳಿನಲ್ಲಿ ಆಡಿಸುವ ಈ ಕ್ರಿಕೆಟ್ ಮಂಡಳಿ ಟೀಮ್​​​​ ಸ್ಪಾನ್ಸರ್​​ಗಾಗಿ ಪಡಬಾರದ ಕಷ್ಟ ಪಡ್ತಿದೆ. ಅಷ್ಟಕ್ಕೂ ಆ ರಿಚೆಸ್ಟ್​ ಕ್ರಿಕೆಟ್ ಬೋರ್ಡ್​​ ಮತ್ಯಾವುದೂ ಅಲ್ಲ, ಅದುವೇ ಬಿಸಿಸಿಐ. ಇದರ ಸ್ಪಾನ್ಸರ್​​​ ಕಥೆ ಹೀಗಿದೆ ನೋಡಿ.

ಬಿಸಿಸಿಐ.. ವಿಶ್ವದ ಶ್ರೀಮಂತ ಕ್ರಿಕೆಟ್ ಮಂಡಳಿಗಳಲ್ಲಿ ಒಂದು. ಕ್ರಿಕೆಟ್ ಮಟ್ಟಿಗೆ ಬಿಸಿಸಿಐ ಆಡಿದ್ದೇ ಆಟ. ಇದೀಗ ಇದೇ ರಿಚೆಸ್ಟ್​ ಬೋರ್ಡ್​ ತನ್ನ ಪವರ್ ಬಳಸಿ 2023ರ ಒನ್ಡೇ ವಿಶ್ವಕಪ್​ ಆತಿಥ್ಯ ಗಿಟ್ಟಿಸಿಕೊಂಡಿದೆ. ಮೇಗಾ ಟೂರ್ನಿ ಯಶಸ್ವಿಗೊಳಿಸಲು ಸಿದ್ಧತೆಯೂ ಆರಂಭಿಸಿದೆ. ಆದರೆ ವಿಶ್ವಕಪ್​​ನಂತ ಬಿಗ್​​ ಬ್ಯಾಟಲ್​ ಸಮೀಪಿಸ್ತಿದ್ರೂ ಟೀಮ್ ಇಂಡಿಯಾಗೆ ಜರ್ಸಿ ಸ್ಪಾನ್ಸರ್​​​​​ ಇಲ್ಲ ಅನ್ನೋದು ಅಭಿಮಾನಿಗಳನ್ನ ಅಚ್ಚರಿ ತಳ್ಳಿದೆ.

ಸ್ಪಾನ್ಸರ್​​​ಗಾಗಿ ವಿಶ್ವದ ಶ್ರೀಮಂತ ಮಂಡಳಿ ಹೆಣಗಾಟ

ಬಿಸಿಸಿಐಗೆ ಏನು ಕಮ್ಮಿ ಇದೆ ಹೇಳಿ? ವಿಶ್ವದ ಯಾವ ದೇಶದ ಹತ್ತಿರ ಇಲ್ಲದಷ್ಟು ದುಡ್ಡಿದೆ. ದೊಡ್ಡ ಪ್ರಭಾವ ಹೊಂದಿದೆ. ಅಷ್ಟೇ ಏಕೆ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರು ಟೀಮ್ ಇಂಡಿಯಾದಲ್ಲಿದ್ದಾರೆ. ಇಷ್ಟೆಲ್ಲಾ ಇದ್ರೂ ಜೆರ್ಸಿ ಸ್ಪಾನ್ಸರ್​​​​​​​​​ ಹುಡುಕಾಡಲು ಬಿಸಿಸಿಐ ಹೆಣಗಾಡ್ತಿದೆ. ಬೈಜುಸ್​​​​​​​​ ಜೊತೆಗಿನ ಪ್ರಾಯೋಜಕತ್ವದ ಅವಧಿ ಮುಗಿದಿದ್ದೇ ಮುಗಿದಿದ್ದು. ಬಳಿಕ ನೂತನ ಜರ್ಸಿ ಸ್ಪಾನ್ಸರ್ ಸಿಕ್ಕಿಲ್ಲ. ಇತ್ತೀಚೆಗೆ ಮುಗಿದ ವಿಶ್ವಟೆಸ್ಟ್ ಚಾಂಪಿಯನ್​ಶಿಪ್​ ಫೈನಲ್ ನಂತ ಐಸಿಸಿ ಟೂರ್ನಿಯಲ್ಲಿ ರೋಹಿತ್ ಪಡೆ ಸ್ಪಾನ್ಸರ್ ಇಲ್ಲದೇ ಆಸ್ಟ್ರೇಲಿಯಾ ವಿರುದ್ಧ ಕಣಕ್ಕಿಳಿದಿತ್ತು.

ಬಿಸಿಸಿಐ ಜೊತೆ ಪಾಲುದಾರಿಕೆ ಹೊಂದಲು ಎಲ್ಲರೂ ಮುಗಿಬೀಳ್ತಾರೆ. ಟಿವಿ ರೈಟ್ಸ್ ಮತ್ತು ಡಿಜಿಟಲ್ ರೈಟ್ಸ್​​ಗಾಗಿ ಪ್ರತಿಸಲ ಸಾಕಷ್ಟು ಪೈಪೋಟಿ ಏರ್ಪಡುತ್ತೆ. ಇನ್ನು ಜಾಹೀರಾತು, ಸ್ಪಾನ್ಸರ್​ಶಿಪ್​​ಗಾಗಿ ಹಲವು ಕಂಪನಿಗಳು ಕ್ಯೂನಲ್ಲಿ ನಿಲ್ತವೆ. ಆದರೆ ಜರ್ಸಿ ಸ್ಪಾನ್ಸರ್​ಗಾಗಿ ಮಾತ್ರ ಯಾರು ಮುಂದೆ ಬರ್ತಿಲ್ಲ. ಬಿಸಿಸಿಐ ಟೆಂಡರ್ ಕರೆದಿದ್ರೂ ಯಾರೂ ಆಸಕ್ತಿ ತೋರಿಸ್ತಿಲ್ಲ. ಹಾಗಾದ್ರೆ ಅದ್ಭುತ ಜರ್ಸಿ ಜರ್ನಿಯನ್ನ ಹೊಂದಿರೋ ಟೀಮ್ ಇಂಡಿಯಾಗೆ ಜರ್ಸಿ ಸ್ಪಾನ್ಸರ್ ಸಿಗದಿರಲು ಕಾರಣ ಏನಿರಬಹುದು ?

ರೀಸನ್ ನಂ. 1: ಅನಿಶ್ಚಿತತೆ

ಈ ಅನಿಶ್ಚಿತತೆ ಟೀಮ್ ಇಂಡಿಯಾಗೆ ಜರ್ಸಿ ಸ್ಪಾನ್ಸರ್​​​​​​ ಸಿಗದಂತೆ ಮಾಡಿದೆ ಅಂದ್ರೂ ತಪ್ಪಲ್ಲ. ಯಾಕಂದ್ರೆ ಸ್ಟಾರ್ ಆಟಗಾರರನ್ನು ನಂಬಿಕೊಂಡೇ ಒಪ್ಪಂದಕ್ಕೆ ಮನಸ್ಸು ಮಾಡುತ್ತವೆ. ಕ್ಯಾಪ್ಟನ್ ರೋಹಿತ್ ಹಾಗೂ ವಿರಾಟ್ ಕೊಹ್ಲಿ ಕೆರಿಯರ್​ ಒನ್ಡೇ ವಿಶ್ವಕಪ್​ ಬಳಿಕ ಏನಾಗುತ್ತೆ ಅನ್ನೋದು ಯಾರಿಗೂ ಗೊತ್ತಿಲ್ಲ. ಯಾಕಂದ್ರೆ ಈ ದಿಗ್ಗಜರನ್ನ ಈಗಾಗಲೇ ಟಿ-20 ತಂಡದಿಂದ ಕೈಬಿಡಲಾಗಿದೆ. 2022ರ ಟಿ20 ವಿಶ್ವಕಪ್​​​​ ಬಳಿಕ ಒಂದೇ ಒಂದು ಟಿ20 ಪಂದ್ಯವನ್ನು ಆಡಿಲ್ಲ. ಈ ಅನಿಶ್ಚಿತತೆ ಭಾವ ಕಾಡ್ತಿರೋದ್ರಿಂದ ಪ್ರಾಯೋಜಕತ್ವಕ್ಕೆ ಯಾರು ಮನಸ್ಸು ಮಾಡ್ತಿಲ್ಲ.

ರೀಸನ್ ನಂ. 2: ಯಂಗ್​ಸ್ಟರ್ಸ್​ ಮೇಲಿಲ್ಲ ನಂಬಿಕೆ

ಭವಿಷ್ಯದಲ್ಲಿ ಯಂಗ್ ಇಂಡಿಯಾ ಕಟ್ಟಲು ಬಿಸಿಸಿಐ ಚಿಂತಿಸ್ತಿದೆ. ಆಗಲೇ ಟಿ20 ತಂಡದಲ್ಲಿ ಯಂಗ್​ಸ್ಟರ್ಸ್​ಗೆ ಹೆಚ್ಚು ಅವಕಾಶಗಳನ್ನ ನೀಡಲಾಗ್ತಿದೆ. ಶುಭ್​​ಮನ್ ಗಿಲ್​​​, ಇಶನ್​ ಕಿಶನ್​​​, ರುತುರಾಜ್​ ಗಾಯಕ್ವಾಡ್​​​​​ ಹಾಗೂ ಉಮ್ರಾನ್​​ ಮಲಿಕ್​​ ಭವಿಷ್ಯದ ತಾರೆಗಳು. ಆದರೆ ಇವರ ಮೇಲೆ ಸ್ಪಾನ್ಸರ್​ಶಿಪ್​​​ನವರಿಗೆ ನಂಬಿಕೆ ಇಲ್ಲ. ಇವರು ಸುರ್ದೀಘ ಕಾಲ ಆಡ್ತಾರೋ ಅನ್ನುವ ಭರವಸೆಯೂ ಇಲ್ಲ. ಹೀಗಾಗಿ ಜರ್ಸಿ ಸ್ಪಾನ್ಸರ್ ಸಿಗೋದು ತಡವಾಗ್ತಿದೆ.

ರೀಸನ್ ನಂ. 3: ಬಿಸಿಸಿಐ ನಿಂದ ಸಿಕ್ಕಾಪಟ್ಟೆ ಡಿಮ್ಯಾಂಡ್​

ಜರ್ಸಿ ಸ್ಪಾನ್ಸರ್​​ನಿಂದ ಸಾವಿರಾರು ಕೋಟಿ ರೂಪಾಯಿ ಗಳಿಸಲು ಬಿಸಿಸಿಐ ಎದುರು ನೋಡ್ತಿದೆ. ಬೈಜುಸ್​ 2 ವರ್ಷಗಳ ಒಪ್ಪಂದಕ್ಕೆ 1300 ಕೋಟಿ ನೀಡುವುದಾಗಿ ಹೇಳಿತ್ತು. ಸದ್ಯ ಬಿಸಿಸಿಐ ನೂತನ ಜರ್ಸಿ ಸ್ಪಾನ್ಸರ್​​​​​ನಿಂದ 1500 ಕೋಟಿಗೂ ಅಧಿಕ ಲಾಭದ ನಿರೀಕ್ಷೆಯಲ್ಲಿದೆ. ಇದರಿಂದ ಯಾವ ಕಂಪನಿಗಳು ಬಿಗ್​​ಬಾಸ್​ಗಳ ಜೊತೆ ಪ್ರಾಯೋಜಕತ್ವದ ಒಪ್ಪಂದಕ್ಕೆ ಹಿಂದೇಟು ಹಾಕುತ್ತಿವೆ.

ರೀಸನ್ ನಂ. 4: ಸುದೀರ್ಘ ಪ್ರಾಯೋಜಕತ್ವಕ್ಕೆ ಆಸಕ್ತಿ

ಈ ರೀಸನ್ ಕೂಡ ಯಾರು ನೂತನ ಜರ್ಸಿ ಸ್ಪಾನ್ಸರ್​ ಒಪ್ಪಂದಕ್ಕೆ ಮುಂದಾಗದಂತೆ ಮಾಡಿದೆ. ಬಿಸಿಸಿಐ ಸುದೀರ್ಘ ಪ್ರಾಯೋಜಕತ್ವದ ಹುಡುಕಾಟದಲ್ಲಿದೆ. ಯಾಕಂದ್ರೆ ಕಳೆದ ನಾಲ್ಕು ವರ್ಷದಲ್ಲಿ ಟೀಮ್ ಇಂಡಿಯಾ ಎರಡು ಜರ್ಸಿ ಸ್ಪಾನ್ಸರ್​ಗಳನ್ನ ಕಂಡಿದೆ. ಬೈಜುಸ್​ ನಿಗದಿತ ಒಪ್ಪಂದಕ್ಕೆ ಮೊದಲೇ ಹಿಂದೆ ಸರಿದಿತ್ತು. ಮತ್ತೆ ಈ ಸಮಸ್ಯೆ ಉಲ್ಬಣಿಸದಿರಲು ಬಿಸಿಸಿಐ ಪ್ಲಾನ್ ಮಾಡಿದ್ದು, ಸುರ್ದಿಘ ಜರ್ಸಿ ಸ್ಪಾನ್ಸರ್​​ಗಳ ಹುಡುಕಾಟದಲ್ಲಿದೆ.

ಒಟ್ಟಿನಲ್ಲಿ ಸಹರಾ, ಸ್ಟಾರ್​ ಇಂಡಿಯಾದಂತ ಅದ್ಭುತ ಜರ್ಸಿ ಜೆರ್ನಿ ಹೊಂದಿರೋ ಟೀಮ್ ಇಂಡಿಯಾಗೆ ಈಗ ಸ್ಪಾನ್ಸರ್ ಇಲ್ಲದಂತಾಗಿದೆ. ಒನ್ಡೇ ವಿಶ್ವಕಪ್​​ ಒಳಗಾದರೂ ನೂತನ ಜರ್ಸಿ ಸ್ಪಾನ್ಸರ್ ಹುಡುಕಾಟಕ್ಕೆ ಪುಲ್​ಸ್ಟಾಪ್ ಬೀಳುತ್ತಾ? ವಿಶ್ವ ಶ್ರೀಮಂತ ಕ್ರಿಕೆಟ್​ ಮಂಡಳಿ ಸ್ಪಾನ್ಸರ್ ಇಲ್ಲದೇ ಪೇಚಿಗೆ ಸಿಲುಕುತ್ತಾ ಅನ್ನೋದು ಶೀಘ್ರವೇ ಗೊತ್ತಾಗಲಿದೆ.

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

ಟೀಂ ಇಂಡಿಯಾಗೆ ಇದೆಂಥಾ ಪರಿಸ್ಥಿತಿ? 3 ತಿಂಗಳಿಂದ ಜರ್ಸಿ ಸ್ಪಾನ್ಸರ್​ಗಾಗಿ ಬಿಸಿಸಿಐ ಹೆಣಗಾಟ..!

https://newsfirstlive.com/wp-content/uploads/2023/06/TEAM_INDIA-1-1.jpg

Load More