/newsfirstlive-kannada/media/post_attachments/wp-content/uploads/2025/02/Karun-Nair_News.jpg)
ರಣಜಿಯಲ್ಲೂ ಕನ್ನಡಿಗ ಸ್ಟಾರ್ ಕ್ರಿಕೆಟರ್ ಕರುಣ್ ನಾಯರ್ ಅಮೋಘ ಬ್ಯಾಟಿಂಗ್ ಪ್ರದರ್ಶನ ಮುಂದುವರಿದಿದೆ. ಇತ್ತೀಚೆಗೆ ತಮಿಳುನಾಡು ವಿರುದ್ಧ 2ನೇ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ವಿದರ್ಭ ತಂಡ ಮೊದಲ ಇನ್ನಿಂಗ್ಸ್ನಲ್ಲಿ 353 ರನ್ ಕಲೆ ಹಾಕಿತ್ತು. ಈ ಮೂಲಕ ತಮಿಳುನಾಡಿಗೆ ಬೃಹತ್ ಟಾರ್ಗೆಟ್ ನೀಡಿತ್ತು.
ಕರುಣ್ ನಾಯರ್ ಶತಕ
ಇನ್ನು, ತಮಿಳುನಾಡು ವಿರುದ್ಧದ ಮಹತ್ವದ ಪಂದ್ಯದಲ್ಲಿ ಕ್ಯಾಪ್ಟನ್ ಕರುಣ್ ನಾಯರ್ ಅಬ್ಬರಿಸಿದ್ರು. ತಾನು ಎದುರಿಸಿದ 243 ಎಸೆತಗಳಲ್ಲಿ 122 ರನ್ ಸಿಡಿಸಿದರು. ಈ ಪೈಕಿ ಬರೋಬ್ಬರಿ 18 ಫೋರ್, 1 ಸಿಕ್ಸರ್ ಚಚ್ಚಿದ್ರು.
ಟಾಪ್ ಆರ್ಡರ್ ವೈಫಲ್ಯ
ವಿದರ್ಭ ತಂಡ ಆರಂಭದಲ್ಲೇ ಬ್ಯಾಕ್ ಟು ಬ್ಯಾಕ್ ವಿಕೆಟ್ ಕಳೆದುಕೊಂಡಿತ್ತು. ಟಾಪ್ ಆರ್ಡರ್ ಬ್ಯಾಟರ್ಗಳ ವೈಫಲ್ಯದಿಂದ ತಂಡಕ್ಕೆ ಉತ್ತಮ ಆರಂಭ ಸಿಗಲಿಲ್ಲ. ಕೇವಲ 44 ರನ್ಗೆ 3 ವಿಕೆಟ್ಗಳು ಬಿದ್ದು ಹೋದವು.
ತಂಡಕ್ಕೆ ಕರುಣ್ ನಾಯರ್ ಆಸರೆ
ಸಂಕಷ್ಟದಲ್ಲಿದ್ದ ತಂಡಕ್ಕೆ ಆಸರೆಯಾದ ಕ್ಯಾಪ್ಟನ್ ಕರುಣ್ ನಾಯರ್ ಅವರು ಕ್ರೀಸ್ನಲ್ಲೇ ನಿಂತು ಬ್ಯಾಟ್ ಬೀಸಿದ್ರು. ಮಿಡ್ಲ್ ಓವರ್‌ಗಳಲ್ಲಿ ವಿಕೆಟ್ ಬೀಳದಂತೆ ಬ್ಯಾಟ್ ಮಾಡಿದರು. ಡ್ಯಾನಿಶ್ ಮಾಲೆವಾರ್, ಕರುಣ್ ನಾಯರ್ ಜೋಡಿ ಸುಮಾರು 30 ಓವರ್ ನೆಲಕಚ್ಚಿ ನಿಂತು ಆಡಿ 98 ರನ್ ಕಲೆ ಹಾಕಿತು.
ಟೀಮ್ ಇಂಡಿಯಾ ಕದ ತಟ್ಟಿದ ಕನ್ನಡಿಗ
ದೇಶೀಯ ಟೂರ್ನಿಯಲ್ಲಿ ಸ್ಥಿರ ಪ್ರದರ್ಶನ ನೀಡುತ್ತಿರೋ ಕರುಣ್ ನಾಯರ್ ಮತ್ತೆ ಟೀಮ್ ಇಂಡಿಯಾ ಕದ ತಟ್ಟಿದ್ದಾರೆ. ಸತತ 7 ವರ್ಷಗಳಿಂದ ಟೀಮ್ ಇಂಡಿಯಾದಿಂದ ದೂರ ಉಳಿದಿರೋ ಕರುಣ್ ಮತ್ತೊಂದು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಹಾಗಾಗಿ ಮುಂದಿನ ದಿನಗಳಲ್ಲಿ ಕನ್ನಡಿಗನಿಗೆ ಅವಕಾಶ ಸಿಗುತ್ತಾ? ಎಂದು ಕಾದು ನೋಡಬೇಕಿದೆ.
ಇದನ್ನೂ ಓದಿ: 2025ರ ಐಪಿಎಲ್: ಆರ್ಸಿಬಿಯಿಂದ ಈ ಆಟಗಾರನನ್ನು ಹೊರಹಾಕಲು ಕಾರಣವೇನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ