newsfirstkannada.com

6,6,4,4,4,4,4,4,4; ಬಾಂಗ್ಲಾ ವಿರುದ್ಧ KL​ ರಾಹುಲ್​ ಅಬ್ಬರ; ಟೆಸ್ಟ್​ನಲ್ಲೇ ಅತೀ ವೇಗದ ಅರ್ಧಶತಕ

Share :

Published September 30, 2024 at 5:43pm

Update September 30, 2024 at 5:45pm

    ಬಾಂಗ್ಲಾದೇಶದ ಬೌಲರ್​ಗಳ ಬೆವರಿಳಿಸಿದ ಕೆ.ಎಲ್​ ರಾಹುಲ್​​

    ಟೀಮ್​ ಇಂಡಿಯಾ ಪರ ಕನ್ನಡಿಗ ಕೆ.ಎಲ್​ ರಾಹುಲ್​ ಅಬ್ಬರ..!

    ಕೆ.ಎಲ್​ ರಾಹುಲ್​​ ಅಬ್ಬರದ ಬ್ಯಾಟಿಂಗ್​​ಗೆ ಬೆಚ್ಚಿಬಿದ್ದ ಬಾಂಗ್ಲಾ

ಕಾನ್​​ಪುರ ಇಂಟರ್​​ ನ್ಯಾಷನಲ್​​​ ಕ್ರಿಕೆಟ್​ ಸ್ಟೇಡಿಯಮ್​​ನಲ್ಲಿ ನಡೆಯುತ್ತಿರೋ ಮಹತ್ವದ ಕೊನೆ ಟೆಸ್ಟ್​​ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಕೆ.ಎಲ್​​ ರಾಹುಲ್​ ಭರ್ಜರಿ ಬ್ಯಾಟಿಂಗ್​ ಮಾಡಿದ್ರು.

ಬಾಂಗ್ಲಾದೇಶ ನೀಡಿದ ಸಾಧಾರಣ ಮೊತ್ತದ ಗುರಿ ಬೆನ್ನತ್ತಿದ ಟೀಮ್​​ ಇಂಡಿಯಾ ಪರ ಟಿ20 ಶೈಲಿಯಲ್ಲಿ ಬ್ಯಾಟಿಂಗ್​​ ಮಾಡಿದ ಯಶಸ್ವಿ ಜೈಸ್ವಾಲ್​​ ಕೇವಲ 51 ಬಾಲ್​​ನಲ್ಲಿ 72 ರನ್​ ಚಚ್ಚಿದ್ರು. ಈ ಪೈಕಿ ಬರೋಬ್ಬರಿ 12 ಫೋರ್​​, 2 ಸಿಕ್ಸರ್​ ಸಿಡಿಸಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​ ರೇಟ್​ 140ಕ್ಕೂ ಹೆಚ್ಚಿತ್ತು.

ಯಶಸ್ವಿ ಜೈಸ್ವಾಲ್​​ ಬಳಿಕ ಬ್ಯಾಕ್​ ಟು ಬ್ಯಾಕ್​ ವಿಕೆಟ್​​​ ಕಳೆದುಕೊಂಡು ಸಂಕಷ್ಟದಲ್ಲಿದ್ದಾಗ ಟೀಮ್​ ಇಂಡಿಯಾಗೆ ಆಸರೆಯಾದ ಕೊಹ್ಲಿ ಬಿರುಸಿನ ಬ್ಯಾಟಿಂಗ್​ ಮಾಡಿದ್ರು. ಕೇವಲ 35 ಬಾಲ್​ನಲ್ಲಿ 47 ರನ್​​ ಸಿಡಿಸಿದ್ರು. ಈ ಪೈಕಿ 1 ಸಿಕ್ಸರ್​​, 4 ಫೋರ್​ ಚಚ್ಚಿದ್ರು. ಇಡೀ ಇನ್ನಿಂಗ್ಸ್​ ಉದ್ದಕ್ಕೂ ಬಾಂಗ್ಲಾ ಬೌಲರ್ಸ್​ ಬೆಂಡೆತ್ತಿದ್ರು.

ಕೆ.ಎಲ್​ ರಾಹುಲ್​ ಆರ್ಭಟ

ಇನ್ನು, ಕೊಹ್ಲಿಗೆ ಸಾಥ್​ ನೀಡಿದ ಕೆ.ಎಲ್​ ರಾಹುಲ್​​​ ಅಬ್ಬರಿಸಿದ್ರು. ಕೇವಲ 33 ಬಾಲ್​ನಲ್ಲಿ ಸಿಡಿಲಬ್ಬರದ ಅರ್ಧಶಕತ ಸಿಡಿಸಿದ್ರು. ತಾನು ಎದುರಿಸಿದ 43 ಬಾಲ್​ನಲ್ಲಿ ಬರೋಬ್ಬರಿ 2 ಸಿಕ್ಸರ್​​, 7 ಫೋರ್​ನೊಂದಿಗೆ 68 ರನ್​ ಚಚ್ಚಿದ್ರು. ಇವರ ಬ್ಯಾಟಿಂಗ್​ ಸ್ಟ್ರೈಕ್​​ 158ಕ್ಕೂ ಹೆಚ್ಚಿತ್ತು.

ಸದ್ಯ ಟೀಮ್​ ಇಂಡಿಯಾ ಬಾಂಗ್ಲಾ ವಿರುದ್ಧದ 2 ಪಂದ್ಯಗಳ ಟೆಸ್ಟ್​ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಮೊದಲ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಬರೋಬ್ಬರಿ 280 ರನ್​​ಗಳಿಂದ ಗೆದ್ದು ಬೀಗಿತ್ತು. ಈ ಪಂದ್ಯವೂ ಗೆದ್ದರೆ ಟೀಮ್​ ಇಂಡಿಯಾ ಮುಂದಿನ ವರ್ಷ ನಡೆಯಲಿರೋ ಐಸಿಸಿ ವಿಶ್ವ ಟೆಸ್ಟ್ ಚಾಂಪಿಯನ್​​ಶಿಪ್ ಫೈನಲ್ ಪ್ರವೇಶ ಮಾಡಲಿದೆ.

ಇದನ್ನೂ ಓದಿ: ಟೆಸ್ಟ್​​ ಕ್ರಿಕೆಟ್​​ನಲ್ಲಿ T20 ಶೈಲಿಯಲ್ಲಿ ಬ್ಯಾಟಿಂಗ್​; ಕೊಹ್ಲಿ ಹೊಸ ಅವತಾರಕ್ಕೆ ಬೆಚ್ಚಿಬಿದ್ದ ಬಾಂಗ್ಲಾ ಬೌಲರ್ಸ್​​​

ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್​ಫಸ್ಟ್​ ಚಾನೆಲ್​​​ ಲಭ್ಯ

6,6,4,4,4,4,4,4,4; ಬಾಂಗ್ಲಾ ವಿರುದ್ಧ KL​ ರಾಹುಲ್​ ಅಬ್ಬರ; ಟೆಸ್ಟ್​ನಲ್ಲೇ ಅತೀ ವೇಗದ ಅರ್ಧಶತಕ

https://newsfirstlive.com/wp-content/uploads/2024/09/KL-RAHUL-1.jpg

Load More