/newsfirstlive-kannada/media/post_attachments/wp-content/uploads/2023/10/KL_RAHUL-3.jpg)
ಬಹುನಿರೀಕ್ಷಿತ ಐಸಿಸಿ ಚಾಂಪಿಯನ್ಸ್ ಟ್ರೋಫಿ 2025ರ ಟೂರ್ನಿ ಆರಂಭಕ್ಕೆ ದಿನಗಣನೆ ಶುರುವಾಗಿದೆ. ಈ ಮೆಗಾ ಟೂರ್ನಿಗೆ ಎಲ್ಲಾ ರೀತಿಯ ಸಿದ್ಧತೆಗಳನ್ನು ಶುರುವಾಗಿವೆ.
ಇನ್ನು, ಈಗಾಗಲೇ ಬಿಸಿಸಿಐ ಕೂಡ ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಮಾಡಿದೆ. ಬಲಿಷ್ಠ ಟೀಮ್ ಇಂಡಿಯಾ ಪ್ರಕಟ ಆದ್ರೂ ಪ್ಲೇಯಿಂಗ್ ಎಲೆವೆನ್ನಲ್ಲಿ ಯಾರಿಗೆ ಸ್ಥಾನ ಅನ್ನೋ ಚರ್ಚೆ ಶುರುವಾಗಿದೆ. ಇದರ ಭಾಗವಾಗಿ ಕೋಚ್ ಗಂಭೀರ್, ಕ್ಯಾಪ್ಟನ್ ರೋಹಿತ್ ಮಧ್ಯೆ ಮಾತುಕತೆ ನಡೆಯಲಿದೆ. ಟೀಮ್ ಇಂಡಿಯಾದಲ್ಲಿ ಸ್ಥಾನಕ್ಕಾಗಿ ಸಾಕಷ್ಟು ಆಟಗಾರರ ಮಧ್ಯೆ ಪೈಪೋಟಿ ನಡೆಯುತ್ತಿದೆ. ಮುಖ್ಯ ಕೋಚ್ ಗಂಭೀರ್ ಕೃಪೆ ಯಾರ ಮೇಲಿದೆ? ಎಂಬುದು ನೋಡಬೇಕಿದೆ.
ಪ್ಲೇಯಿಂಗ್ ಎಲೆವೆನ್ ಆಯ್ಕೆ ಸವಾಲ್
ಚಾಂಪಿಯನ್ಸ್ ಟ್ರೋಫಿಗೆ ಟೀಮ್ ಇಂಡಿಯಾ ಪ್ಲೇಯಿಂಗ್ ಎಲೆವೆನ್ ಆಯ್ಕೆ ಮಾಡೋದು ಅಷ್ಟು ಸುಲಭವಲ್ಲ. ಇದಕ್ಕಾಗಿ ಬಿಸಿಸಿಐ ಸೆಲೆಕ್ಷನ್ ಕಮಿಟಿ, ಕ್ಯಾಪ್ಟನ್ ರೋಹಿತ್ ಮತ್ತು ಗೌತಮ್ ಗಂಭೀರ್ ಮಹತ್ವದ ನಿರ್ಧಾರ ಕೈಗೊಳ್ಳಬೇಕಿದೆ.
ಕನ್ನಡಿಗ ಕಳಪೆ ಪ್ರದರ್ಶನ
ಏಕದಿನ ವಿಶ್ವಕಪ್ ಫೈನಲ್ ನಂತರ ಟೀಮ್ ಇಂಡಿಯಾ ಕೇವಲ 7 ಏಕದಿನ ಪಂದ್ಯಗಳನ್ನು ಆಡಿದೆ. ಟೀಮ್ ಇಂಡಿಯಾ ಅನುಭವಿ ಬ್ಯಾಟರ್ ಕೆ.ಎಲ್ ರಾಹುಲ್ ದಕ್ಷಿಣ ಆಫ್ರಿಕಾ ಮತ್ತು ಶ್ರೀಲಂಕಾ ವಿರುದ್ಧ ನಡೆದ 6 ಏಕದಿನ ಪಂದ್ಯಗಳಿಗೂ ಆಯ್ಕೆಯಾಗಿದ್ದರು. ಶ್ರೀಲಂಕಾ ವಿರುದ್ಧ ಸರಣಿಯಲ್ಲಿ ನಿರೀಕ್ಷಿತ ಪ್ರದರ್ಶನ ನೀಡದ ಕಾರಣ ಇವರನ್ನು ಸರಣಿ ಮಧ್ಯದಲ್ಲೇ ಕೈಬಿಡಲಾಗಿತ್ತು. 2023ರ ನವೆಂಬರ್ 19ರಂದು ಆಸ್ಪ್ರೇಲಿಯಾ ವಿರುದ್ಧದ ಪಂದ್ಯದಲ್ಲೂ ಕೆ.ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡಿರಲಿಲ್ಲ. ಇಂದು ಇಂಗ್ಲೆಂಡ್ ವಿರುದ್ಧ ನಡೆದ ಪಂದ್ಯಲ್ಲೂ ಕೇವಲ 2 ರನ್ಗೆ ಔಟಾದ್ರು.
ಕೆ.ಎಲ್ ರಾಹುಲ್ಗೆ ಕೊಕ್
ಇತ್ತ ಯಶಸ್ವಿ ಜೈಸ್ವಾಲ್ ಏಕದಿನ ತಂಡದಲ್ಲಿ ಸ್ಥಾನ ನೀಡಲಾಗಿದೆ. ಇವರು ಅಗ್ರ ನಾಲ್ಕರಲ್ಲಿ ಕಾಣಿಸಿಕೊಳ್ಳುವ ನಿರೀಕ್ಷೆಯಿದೆ. ಒಂದು ವೇಳೆ ಪಂತ್ ಮೊದಲ ವಿಕೆಟ್ ಕೀಪರ್ ಆಯ್ಕೆಯಾದರೆ, ರಾಹುಲ್ ಬೆಂಚ್ ಕಾಯಲೇಬೇಕು. ಹೀಗಾಗಿ ರಾಹುಲ್ ಸ್ಥಾನದ ಬಗ್ಗೆ ಗೊಂದಲ ಮುಂದುವರಿದಿದೆ.
ಇದನ್ನೂ ಓದಿ:ನಾಳೆ ರಾಜ್ಯದ ಈ ಜಿಲ್ಲೆಗಳಲ್ಲಿ ಭಾರೀ ಮಳೆ; ಹವಾಮಾನ ಇಲಾಖೆ ಕೊಟ್ಟ ಎಚ್ಚರಿಕೆ ಏನು?
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ