/newsfirstlive-kannada/media/post_attachments/wp-content/uploads/2024/08/KL-RAHUL-1.jpg)
ಸದ್ಯ ಟೀಮ್​ ಇಂಡಿಯಾ ಮತ್ತು ಇಂಗ್ಲೆಂಡ್​ ಮಧ್ಯೆ ಮೂರು ಪಂದ್ಯಗಳ ಏಕದಿನ ಸರಣಿ ನಡೆಯುತ್ತಿದೆ. ಈಗಾಗಲೇ ಟೀಮ್​​ ಇಂಡಿಯಾ ಇಂಗ್ಲೆಂಡ್​ ವಿರುದ್ಧ ಏಕದಿನ ಸರಣಿಯನ್ನು 2-0 ಅಂತರದಿಂದ ಗೆದ್ದುಕೊಂಡಿದೆ.
ಇತ್ತೀಚೆಗೆ ಕಟಕ್​​ನಲ್ಲಿ​ ನಡೆದ 2ನೇ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್​​ ವಿರುದ್ಧ ಟೀಮ್​ ಇಂಡಿಯಾ ಗೆದ್ದು ಬೀಗಿತ್ತು. ಬ್ಯಾಕ್​ ಟು ಬ್ಯಾಕ್​ 2 ಪಂದ್ಯ ಗೆಲ್ಲೋ ಮೂಲಕ ಏಕದಿನ ಸರಣಿಯನ್ನು ತನ್ನದಾಗಿಸಿಕೊಂಡಿದೆ. ನಾಳೆ ಟೀಮ್​ ಇಂಡಿಯಾ, ಇಂಗ್ಲೆಂಡ್​ ನಡುವಿನ ಕೊನೆಯ ಏಕದಿನ ಪಂದ್ಯ ನಡೆಯಲಿದ್ದು, ಬಿಗ್​ ಅಪ್ಡೇಟ್​ ಒಂದಿದೆ.
ಐಸಿಸಿ ಚಾಂಪಿಯನ್ಸ್ ಟ್ರೋಫಿಗೆ ಮುನ್ನ ಟೀಮ್​​ ಇಂಡಿಯಾದ ಆಲ್​ರೌಂಡರ್​ ಪ್ರದರ್ಶನವೂ ಅಭಿಮಾನಿಗಳಲ್ಲಿ ಭಾರೀ ಸಂತಸ ತಂದಿದೆ. ಅದರಲ್ಲೂ ತಂಡದ ಬ್ಯಾಟಿಂಗ್ ವಿಭಾಗ ಬಲಿಷ್ಠ ಆಗಿರುವುದು ಬಿಸಿಸಿಐಗೆ ನಿರಾಳ ಮೂಡಿಸಿದೆ. ಇದರ ಮಧ್ಯೆ ಕೆಎಲ್ ರಾಹುಲ್ ಕಳಪೆ ಫಾರ್ಮ್​​​ ತಂಡಕ್ಕೆ ತಲೆನೋವು ತಂದಿರುವುದು ನಿಜ. ಹಾಗಾಗಿ ಇವರಿಗೆ 3ನೇ ಪಂದ್ಯದಿಂದ ಗೇಟ್​ಪಾಸ್​ ಸಿಗೋ ಸಾಧ್ಯತೆ ಇದೆ.
ಕೆ.ಎಲ್​ ರಾಹುಲ್​ ಕಳಪೆ ಪ್ರದರ್ಶನ
ಇಂಗ್ಲೆಂಡ್ ವಿರುದ್ಧ ನಡೆದ ಕಳೆದ ಎರಡು ಪಂದ್ಯಗಳಲ್ಲೂ ಕೆ.ಎಲ್​ ರಾಹುಲ್​ ರನ್​​ ಕಲೆ ಹಾಕುವಲ್ಲಿ ಎಡವಿದ್ದಾರೆ. ಕಟಕ್‌ನಲ್ಲಿ 14 ಎಸೆತಗಳಲ್ಲಿ 10 ರನ್​ ಗಳಿಸಿದ್ದ ರಾಹುಲ್​​​, ನಾಗ್ಪುರದಲ್ಲಿ ನಡೆದ ಮೊದಲ ಪಂದ್ಯದಲ್ಲಿ ಕೇವಲ 2 ರನ್ ಗಳಿಸಿ ವಿಕೆಟ್​ ಒಪ್ಪಿಸಿದ್ದರು.
ಮೊದಲ 2 ಏಕದಿನ ಪಂದ್ಯಗಳಲ್ಲಿ ರಾಹುಲ್​ ಗಳಿಸಿದ್ದು ಕೇವಲ 12 ರನ್. ಹೀಗಾಗಿ ರಾಹುಲ್​ಗೆ ಮುಂದಿನ ಪಂದ್ಯದಲ್ಲಿ ಅವಕಾಶ ಸಿಗುವ ಬಗ್ಗೆ ಅನುಮಾನ ಮೂಡಿದೆ. ಇದಕ್ಕೆ ಕಾರಣ ಟೀಮ್​ ಇಂಡಿಯಾ ಮುಖ್ಯ ಕೋಚ್​ ಗೌತಮ್​ ಗಂಭೀರ್​​. ಇವರನ್ನು 5ನೇ ಕ್ರಮಾಂಕದ ಬದಲಿಗೆ 6ನೇ ಸ್ಥಾನ ಆಡಿಸಿದ್ದು ಬ್ಯಾಟಿಂಗ್​ ವೈಫಲ್ಯಕ್ಕೆ ಕಾರಣ. ಹೀಗಾಗಿ ಕೆ.ಎಲ್​ ರಾಹುಲ್​ ಅವರನ್ನು ಕೊನೆಯ ಏಕದಿನ ಪಂದ್ಯದಿಂದ ಕೂರಿಸುವ ಬಗ್ಗೆ ಮಾಹಿತಿ ಸಿಕ್ಕಿದೆ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ