/newsfirstlive-kannada/media/post_attachments/wp-content/uploads/2024/11/KL_RAHUL_1.jpg)
ಬಹುನಿರೀಕ್ಷಿತ 2025ರ ಚಾಂಪಿಯನ್ಸ್ ಟ್ರೋಫಿ ಸೆಮಿಫೈನಲ್ ಕದನ ನಾಳೆ ನಡೆಯಲಿದೆ. ನಾಳೆ ನಡೆಯಲಿರೋ ಮಿನಿ ಕದನದಲ್ಲಿ ಟೀಮ್ ಇಂಡಿಯಾ, ಆಸ್ಟ್ರೇಲಿಯಾ ತಂಡಗಳು ಮುಖಾಮುಖಿ ಆಗಲಿವೆ. ಇದರ ಮಧ್ಯೆ ಟೀಮ್ ಇಂಡಿಯಾದಿಂದ ಸ್ಟಾರ್ ವಿಕೆಟ್ ಕೀಪರ್ ಕೆ.ಎಲ್ ರಾಹುಲ್ಗೆ ಗೇಟ್ಪಾಸ್ ಗ್ಯಾರಂಟಿ ಎಂದು ತಿಳಿದು ಬಂದಿದೆ.
ಬಾಂಗ್ಲಾದೇಶ ವಿರುದ್ಧದ ಮೊದಲ ಪಂದ್ಯದಲ್ಲಿ ವಿಕೆಟ್ ಕೀಪಿಂಗ್ನಲ್ಲಿ ಸ್ಥಿರ ಪ್ರದರ್ಶನ ನೀಡಿ ಕೆ.ಎಲ್ ರಾಹುಲ್ ಬೆಸ್ಟ್ ಫೀಲ್ಡಿಂಗ್ ಅವಾರ್ಡ್ಗೆ ಭಾಜನರಾದ್ರು. ಇದಾದ ಬಳಿಕ ನಡೆದ 2 ಪಂದ್ಯಗಳಲ್ಲೂ ಕನ್ನಡಿಗ ಕೆ.ಎಲ್ ರಾಹುಲ್ ತಮ್ಮ ಫಾರ್ಮ್ ಕಾಯ್ದುಕೊಳ್ಳುವಲ್ಲಿ ಎಡವಿದರು. ವಿಕೆಟ್ ಕೀಪಿಂಗ್ ಮತ್ತು ಬ್ಯಾಟಿಂಗ್ನಲ್ಲಿ ವೈಫಲ್ಯ ಅನುಭವಿಸಿದ್ರು ಎನ್ನುವ ಮಾತುಗಳು ಕೇಳಿ ಬಂದಿವೆ. ಹೀಗಾಗಿ ರಾಹುಲ್ಗೆ ಕೊಕ್ ನೀಡಿ ಪಂತ್ಗೆ ಅವಕಾಶ ನೀಡಲಾಗುವುದು ಎನ್ನುವ ಮಾಹಿತಿ ಲಭ್ಯವಾಗಿದೆ.
ಪಂತ್ಗೆ ಚಾನ್ಸ್
ಕೆಎಲ್ ರಾಹುಲ್ ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ಆಗಿ ಹಲವು ತಪ್ಪುಗಳನ್ನು ಮಾಡಿದ್ರು. ಇದು ಭಾರತ ತಂಡಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಆದ್ದರಿಂದ ಸೆಮಿಫೈನಲ್ ಪಂದ್ಯಕ್ಕೆ ಕೆ.ಎಲ್ ರಾಹುಲ್ಗೆ ರೆಸ್ಟ್ ನೀಡಿ ಪಂತ್ ಅವರನ್ನು ಆಡಿಸೋ ಸಾಧ್ಯತೆ ಇದೆ.
ಕೆ.ಎಲ್ ರಾಹುಲ್ ಎಡವಟ್ಟು
ನ್ಯೂಜಿಲೆಂಡ್ ವಿರುದ್ಧ ವಿಕೆಟ್ ಕೀಪರ್ ಆಗಿ ಕೆ.ಎಲ್ ರಾಹುಲ್ ಸಾಲು ಸಾಲು ತಪ್ಪುಗಳನ್ನು ಮಾಡಿದ್ದಾರೆ. ಕೇನ್ ವಿಲಿಯಮ್ಸನ್ ಕೇವಲ 1 ರನ್ ಗಳಿಸಿದ್ದಾಗ ರಾಹುಲ್ ಅವರ ಕ್ಯಾಚ್ ಬಿಟ್ಟರು. 26ನೇ ಓವರ್‌ನಲ್ಲೂ ಟಾಮ್ ಲಾಥಮ್ ಕ್ಯಾಚ್ ಕೈ ಚೆಲ್ಲಿದರು. ಇದೇ ಕಾರಣದಿಂದಲೇ ಕೇನ್ ವಿಲಿಯಮ್ಸನ್ ದೊಡ್ಡ ಇನ್ನಿಂಗ್ಸ್ ಆಡಿದರು.
ಮುಂದೆ ನಾಕೌಟ್ ಪಂದ್ಯಗಳು ನಡೆಯಲಿವೆ. ಈ ವೇಳೆ ಒಂದೇ ಒಂದು ತಪ್ಪು ನಡೆದ್ರೂ ತಂಡಕ್ಕೆ ದೊಡ್ಡ ಮಾರಕವಾಗಲಿದೆ. ಈ ದೃಷ್ಟಿಯಿಂದ ಮ್ಯಾನೇಜ್ಮೆಂಟ್ ಮಹತ್ವದ ನಿರ್ಧಾರ ಕೈಗೊಳ್ಳುವ ಸಾಧ್ಯತೆ ಇದೆ.
ಇದನ್ನೂ ಓದಿ:ನ್ಯೂಜಿಲೆಂಡ್ ವಿರುದ್ಧ ರೋಚಕ ಜಯ; ಭಾರತದ ಗೆಲುವಿಗೆ ಕಾರಣ ಬಿಚ್ಚಿಟ್ಟ ಕ್ಯಾಪ್ಟನ್ ರೋಹಿತ್
ವಿಶೇಷ ಸೂಚನೆ: ಎಲ್ಲಾ DTH & Cableನಲ್ಲಿ ನ್ಯೂಸ್ಫಸ್ಟ್ ಚಾನೆಲ್ ಲಭ್ಯ