IPL ಆಯ್ತು.. T20 ವಿಶ್ವಕಪ್​ಗಾಗಿ ನ್ಯೂಯಾರ್ಕ್​ ವಿಮಾನ ಹತ್ತಿದ ರೋಹಿತ್ ಬಾಯ್ಸ್​

author-image
Bheemappa
Updated On
IPL ಆಯ್ತು.. T20 ವಿಶ್ವಕಪ್​ಗಾಗಿ ನ್ಯೂಯಾರ್ಕ್​ ವಿಮಾನ ಹತ್ತಿದ ರೋಹಿತ್ ಬಾಯ್ಸ್​
Advertisment
  • ವಿಶ್ವಕಪ್​ ಗೆಲ್ಲುವ ಭರವಸೆಯಲ್ಲಿ ಪ್ಲೈಟ್ ಏರಿದ ಎಲ್ಲ ಆಟಗಾರರು
  • ಐಪಿಎಲ್​ ಟೂರ್ನಿ ಕೊನೆ ಆಗ್ತಿರುವ ಬೆನ್ನಲ್ಲೇ ಅಮೆರಿಕಕ್ಕೆ ಪ್ರಯಾಣ
  • ನ್ಯೂಯಾರ್ಕ್​​ಗೆ ಯಾವ್ಯಾವ ಆಟಗಾರರು ಪ್ರಯಾಣ ಮಾಡುತ್ತಿದ್ದಾರೆ?

ಬಿಸಿಸಿಐ ಈಗಾಗಲೇ T20 ವಿಶ್ವಕಪ್​ಗಾಗಿ ಭಾರತ ತಂಡವನ್ನು ಪ್ರಕಟಿಸಿದೆ. ಅದರಂತೆ ಆಯ್ಕೆಯಾದ ಎಲ್ಲ ಆಟಗಾರರು ಪ್ಲೈಟ್​ ಹತ್ತಲು ಸಜ್ಜಾಗಿದ್ದಾರೆ. ಚೆನ್ನೈನಲ್ಲಿ ಐಪಿಎಲ್​ ಟೂರ್ನಿ ಕೊನೆಯಾಗುತ್ತಿರುವ ಬೆನ್ನಲ್ಲೇ ಭಾರತದ ಆಟಗಾರರು ಅಮೆರಿಕಕ್ಕೆ ಹೋಗಲು ಮುಂಬೈ ವಿಮಾನ ನಿಲ್ದಾಣಕ್ಕೆ ಬಂದಿದ್ದಾರೆ.

ಇದನ್ನೂ ಓದಿ:ವಿಚಿತ್ರ ಅಂದ್ರೆ ವಿಚಿತ್ರ; IPL ಫೈನಲ್​ನಲ್ಲಿ ವಿಶ್ವಕಪ್​ಗೆ ಆಯ್ಕೆಯಾದ ಭಾರತದ ಪ್ಲೇಯರ್ಸ್​ ಆಡ್ತಿದ್ದಾರಾ..?

publive-image

2024ರ T20 ವಿಶ್ವಕಪ್​ ಟೂರ್ನಿ ಈ ಬಾರಿ ಅಮೆರಿಕ ಹಾಗೂ ವೆಸ್ಟ್​ ಇಂಡೀಸ್​​ನಲ್ಲಿ ನಡೆಯಲಿದೆ. ಕಪ್​ ಗೆಲ್ಲುವ ಭರವಸೆಯಲ್ಲಿರುವ ರೋಹಿತ್ ಶರ್ಮಾ ನೇತೃತ್ವದ ಟೀಮ್​ ಇಂಡಿಯಾದ ಪ್ಲೇಯರ್ಸ್​ ಮುಂಬೈ ಏರ್​​ಪೋರ್ಟ್​​ಗೆ ಆಗಮಿಸಿದ್ದಾರೆ. ಇಲ್ಲಿಂದ ನ್ಯೂಯಾರ್ಕ್​ ವಿಮಾನವನ್ನು ಈಗಾಗಲೇ ಹತ್ತಿದ್ದಾರೆ. ಎಲ್ಲ ಆಟಗಾರರು ಬಿಳಿ ಟೀ ಶರ್ಟ್​ ಮತ್ತು ಕಪ್ಪು ಪ್ಯಾಂಟ್​ ಅನ್ನು ಧರಿಸಿದ್ದು ಕಪ್​ ಗೆಲ್ಲುವ ನಿರೀಕ್ಷೆಯಲ್ಲಿ ಫುಲ್​ ಜೋಶ್​ನಲ್ಲೇ ವಿಮಾನವನ್ನು ಹತ್ತಿದ್ದಾರೆ ಎಂದು ಹೇಳಲಾಗಿದೆ.


">May 25, 2024

T20 ವಿಶ್ವಕಪ್​ಗೆ ಆಯ್ಕೆಯಾದ ಭಾರತದ 15 ಸದಸ್ಯರ ತಂಡ ಮತ್ತು ಸಹಾಯಕ ಸಿಬ್ಬಂದಿ ಮೇ 26ರಂದು ನ್ಯೂಯಾರ್ಕ್ ತಲುಪಲಿದ್ದಾರೆ. ಬಳಿಕ ಅಲ್ಲಿನ ಮೈದಾನದಲ್ಲಿ ಅಭ್ಯಾಸ ನಡೆಸಲಿದ್ದಾರೆ. ಜೂನ್ 5ರಂದು ನಸ್ಸೌ ಕೌಂಟಿ ಕ್ರಿಕೆಟ್ ಸ್ಟೇಡಿಯಂನಲ್ಲಿ ಐರ್ಲೆಂಡ್ ತಂಡದ ವಿರುದ್ಧ ವಿಶ್ವಕಪ್‌ನ ತಮ್ಮ ಮೊದಲ ಪಂದ್ಯವನ್ನು ರೋಹಿತ್ ಶರ್ಮಾ ಪಡೆ ಆಡಲಿದೆ. ಇದಾದ ಬಳಿಕ ಜೂನ್ 9 ರಂದು ಸಾಂಪ್ರದಾಯಿಕ ಎದುರಾಳಿ ಪಾಕಿಸ್ತಾನವನ್ನು ಭಾರತ ಎದುರಿಸಲಿದೆ. ಇದೊಂದು ಹೈವೋಲ್ಟೇಜ್ ಪಂದ್ಯವಾಗಿದ್ದು ಅಭಿಮಾನಿಗಳು ಕುತೂಹಲದಿಂದ ಇದ್ದಾರೆ.

ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.27ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ

Advertisment