/newsfirstlive-kannada/media/post_attachments/wp-content/uploads/2025/06/Gautam_Gambhir.jpg)
ಗೌತಮ್​ ಗಂಭೀರ್​ ಟೀಮ್ ಇಂಡಿಯಾದ ಚುಕ್ಕಾಣಿ ಹಿಡಿದು 1 ವರ್ಷ ಆಗ್ತಿದೆ. ಆದ್ರೆ, ಈ 1 ವರ್ಷದಲ್ಲಿ ಟೀಮ್ ಇಂಡಿಯಾ, 2025ರ ಐಸಿಸಿ ಚಾಂಪಿಯನ್ಸ್ ಟ್ರೋಫಿ ಬಿಟ್ರೆ. ಟೆಸ್ಟ್​ ಕ್ರಿಕೆಟ್​​ನಲ್ಲಿ ನಿರೀಕ್ಷೆ ಸಾಧನೆ ಏನು ಮಾಡಿಲ್ಲ. ಇದೀಗ ಲೀಡ್ಸ್​ ಟೆಸ್ಟ್ ಸೋಲಿನ ಬೆನ್ನಲ್ಲೇ ಗಂಭೀರ್ & ಸಪೋರ್ಟಿಂಗ್ ಸ್ಟಾಫ್ ಏನ್ ಮಾಡ್ತಿದ್ದಾರೆ ಎಂಬ ಪ್ರಶ್ನೆ ಉದ್ಭವವಾಗಿದೆ.
ಗೌತಮ್ ಗಂಭೀರ್, ಟೀಮ್ ಇಂಡಿಯಾದ ಹೆಡ್ ಕೋಚ್ ಆಗಿದ್ದೇ ಆಗಿದ್ದು ಟೆಸ್ಟ್​ ಕ್ರಿಕೆಟ್​ನಲ್ಲಿ ಅಧಿಪತಿಯಾಗಿ ಮೆರೆದಾಡ್ತಿದ್ದ ಟೀಮ್ ಇಂಡಿಯಾ, ಅಧಃ ಪತನದತ್ತ ಸಾಗ್ತಿದೆ. ಒಂದಲ್ಲ.. ಎರಡಲ್ಲ.. ಸಾಲು ಸಾಲು ಸೋಲು ಕಾಣ್ತಿದೆ. ಇದೀಗ ಲೀಡ್ಸ್​ ಟೆಸ್ಟ್ ಸೋಲಿನ ಬೆನಲ್ಲೇ ಹೆಡ್​ ಕೋಚ್ ಗಂಭೀರ್ & ಸಂಪೋರ್ಟಿಂಗ್ ಸ್ಟಾಫ್ ಏನ್ ಮಾಡ್ತಿದ್ದಾರೆ ಎಂಬ ಪ್ರಶ್ನೆ ಎದುರಾಗ್ತಿದೆ. ಇದಕ್ಕೆ ಲೀಡ್ಸ್​ ಟೆಸ್ಟ್​ನಲ್ಲಿ ಎದುರಾದ ಸೋಲು ಮಾತ್ರವಲ್ಲ. ಆನ್​ ಫೀಲ್ಡ್​ನಲ್ಲಿ ಟೀಮ್ ಇಂಡಿಯಾ ಆಟಗಾರರು ತೋರಿದ ಪ್ರದರ್ಶನ ಆಗಿದೆ.
ಸೀಸನ್​​-17ರ ಐಪಿಎಲ್​ನಲ್ಲಿ ಕೊಲ್ಕತ್ತಾ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದ ಗೌತಮ್ ಗಂಭೀರ್, ಟೀಮ್ ಇಂಡಿಯಾ ಚುಕ್ಕಾಣಿ ಹಿಡಿದಿದ್ದೆ ಹಿಡಿದಿದ್ದು..? ಚಾಂಪಿಯನ್ ಕೋಚ್ ಸಿಕ್ಕೆ ಬಿಟ್ಟ ಅನ್ನೋ ಪುಕ್ಕಟೆ ಪ್ರಚಾರ ಸಿಕ್ತು. ಈತನ ಮಾಸ್ಟರ್​ ಸ್ಟ್ರೋಕ್ಸ್​ಗೆ, ಸ್ಟ್ರಾಟರ್ಜಿಗಳಿಗೆ ಟೀಮ್ ಇಂಡಿಯಾ ಯಶಸ್ಸಿನ ಉತ್ತುಂಗದಲ್ಲಿ ತೇಲಾಡುತ್ತೆ ಅಂತಾನೇ ಕೊಂಡಾಡಿದರು. ಆದ್ರೆ, ಹೆಡ್ ಕೋಚ್ ಗಂಭೀರ್ ಮುಂದಾಳತ್ವದಲ್ಲಿ ಬಾಂಗ್ಲಾ ಎದುರಿನ ಟೆಸ್ಟ್ ಸರಣಿ ಗೆಲುವು ಬಿಟ್ರೆ, ಉಳಿದೆಲ್ಲ ಸೋಲು.. ಸೋಲು.. ಸೋಲು. ಇದಕ್ಕೆ ಬೆಸ್ಟ್ ಎಕ್ಸಾಂಪಲ್ 1 ವರ್ಷದಲ್ಲಿ ಟೀಮ್ ಇಂಡಿಯಾ ಟೆಸ್ಟ್​ನಲ್ಲಿ ಮಾಡಿದ ಸಾಧನೆ.
ಗಂಭೀರ್ ಮಾರ್ಗದರ್ಶನದಲ್ಲಿ ಕೊನೆ 9 ಟೆಸ್ಟ್
ಗಂಭೀರ್ ಮಾರ್ಗದರ್ಶನದಲ್ಲಿ ಟೀಮ್ ಇಂಡಿಯಾ ಆಡಿರುವ ಕೊನೆ 9 ಟೆಸ್ಟ್​ಗಳ ಪೈಕಿ ಕೇವಲ ಒಂದೇ ಒಂದು ಪಂದ್ಯ ಗೆದಿದ್ರೆ. 7 ಪಂದ್ಯಗಳಲ್ಲಿ ಮುಖಭಂಗ ಅನುಭವಿಸಿರುವ ಟೀಮ್ ಇಂಡಿಯಾ, ಇನ್ನೊಂದು ಪಂದ್ಯದಲ್ಲಿ ಡ್ರಾ ಸಾಧಿಸಿದೆ. ಟೀಮ್ ಇಂಡಿಯಾ ಟೆಸ್ಟ್​ನಲ್ಲಿ ಕಾಣ್ತಿರುವ ಈ ಸೋಲುಗಳ ಸರಮಾಲೆ, ನಿಜಕ್ಕೂ ಟೀಮ್ ಇಂಡಿಯಾಗೆ ಕೋಚ್​ಗಳ ಕಾರ್ಯವೈಖರಿಯನ್ನೇ ಪ್ರಶ್ನಿಸುತ್ತೆ.
ಮಾರ್ನೆ ಮಾರ್ಕೆಲ್ ಹೆಸರಿಗಷ್ಟೇ ಬೌಲಿಂಗ್ ಕೋಚ್​​​​​​​​​​​​​​​​​​​​​..!
ಮಾರ್ನೆ ಮಾರ್ಕೆಲ್ ನಿಜಕ್ಕೆ ಹೆಸರಿಗಷ್ಟೇ ಬೌಲಿಂಗ್ ಕೋಚ್ ಅನಿಸುತ್ತೆ. ಯಾಕಂದ್ರೆ, ಇಂಗ್ಲೆಂಡ್ ಕಂಡೀಷನ್ಸ್​ ಬಗ್ಗೆ ಚೆನ್ನಾಗಿ ಅರಿತಿರುವ ಮಾರ್ನೆ ಮಾರ್ಕೆಲ್, ಗ್ಯಾಲರಿಯಲ್ಲಿ ಕುಳಿತು ಪಂದ್ಯ ನೋಡಿದ್ದು ಬಿಟ್ರೆ, ಓವರ್​ ಮುಕ್ತಾಯದ ಬಳಿಕವಾಗಲಿ, ಬ್ರೇಕ್ ಟೈಮ್​ನಲ್ಲಾಗಲಿ ಮೊಹಮ್ಮದ್ ಸಿರಾಜ್, ಪ್ರಸಿದ್ಧ್​ ಕೃಷ್ಣ, ಶಾರ್ದೂಲ್ ಠಾಕೂರ್​ಗೆ ಅನ್​ಫೀಲ್ಡ್​ಗೆ ಇಳಿದು ಸಲಹೆ ನೀಡಿದ್ದು ಕಾಣಲೇ ಇಲ್ಲ.
ಏನ್ ಮಾಡ್ತಿದ್ದಾರೆ ಟೀಮ್ ಇಂಡಿಯಾ ಫೀಲ್ಡಿಂಗ್ ಕೋಚ್..?
ಹೆಡಿಂಗ್ಲಿಯಲ್ಲಿ ಮೋಸ್ಟ್ ಡಿಸಾಸ್ಟರ್ ಅಂದ್ರೆ, ಟೀಮ್ ಇಂಡಿಯಾದ ಫೀಲ್ಡಿಂಗ್. ಅದು ಯಾವ ಮಟ್ಟಕ್ಕಂದ್ರೆ, ಒಂದಲ್ಲ ಎರಡಲ್ಲ, ಬರೋಬ್ಬರಿ ಉರುಳಿದ್ದು 8 ಕ್ಯಾಚ್​ಗಳು. ಶಾಕಿಂಗ್ ಏನಂದ್ರೆ, ಬ್ಯಾಟಿಂಗ್​ನಲ್ಲಿ 105 ರನ್​​ ಕಾಣಿಕೆ ನೀಡಿದ್ದ ಯಶಸ್ವಿ ಜೈಸ್ವಾಲ್, ಒಟ್ಟು 4 ಕ್ಯಾಚ್ ಬಿಟ್ಟು ಎದುರಾಳಿಗೆ ನೀಡಿದ ಕಾಣಿಕೆ 160 ರನ್​ ಆಗಿತ್ತು. ಈ 160 ರನ್ ಸೇವ್ ಆಗಿದ್ರೆ, ಟೀಮ್ ಇಂಡಿಯಾ ಗೆಲ್ಲೋದು ಕಷ್ಟದ ಮಾತೇನು ಆಗ್ತಿರಲಿಲ್ಲ. 2021ರಿಂದ ಫೀಲ್ಡಿಂಗ್ ಕೋಚ್ ಆಗಿರುವ ಟಿ.ದಿಲೀಪ್, ಈ ಸರಣಿಗಾಗಿ ಮರು ಆಯ್ಕೆಯಾಗಿದ್ದು ಟೀಮ್ ಇಂಡಿಯಾ ಮಾಡಿಕೊಂಡ ದೃರಾದೃಷ್ಟ.
ಇದನ್ನೂ ಓದಿ: 27 ಶತಕ, 31 ಅರ್ಧಶತಕ.. ಅವಕಾಶಕ್ಕಾಗಿ ಕಾಯುತ್ತಿರೋ ಯಂಗ್ ಬ್ಯಾಟರ್ ಅಭಿಮನ್ಯು!
ಸಹಾಯಕ ಕೋಚ್ ಟೆನ್ ಡೆಸ್ಕೋಟ್ ಕೆಲಸ ಏನಯ್ಯಾ..?
ಟೆನ್ ಡೆಸ್ಕೋಟ್, ಅಸಿಸ್ಟೆಂಟ್ ಕೋಚ್ ಆಗಿ ಈತ ಮಾಡ್ತಿರೋದು ಏನು ಅನ್ನೋದೆ ಗೊತ್ತಿಲ್ಲ. ಯಾಕಂದ್ರೆ, ಸಹಾಯಕ ಕೋಚ್ ಆಗಿ ಫೀಲ್ಡಿಂಗ್ ಜವಾಬ್ದಾರಿ ತೆಗೆದುಕೊಂಡಿದ್ದಾರೆ. ಟಿ.ದಿಲೀಪ್ ಇದ್ದರೂ ಟೆನ್ ಡೆಸ್ಕೋಟ್​ಗೆ ಫೀಲ್ಡಿಂಗ್ ಜವಾಬ್ದಾರಿ ಯಾಕೆ ಅನ್ನೋದು ಆ ದೇವರಿಗೆ ಗೊತ್ತಾಗಬೇಕು.
ಸೀತಾಂಶು ಕೋಟಕ್ ಇವರಿನ್ನು ದೂರಬೇಕಾ..? ಬೆಡ್ವಾ ಅನ್ನೋದೆ ಪ್ರಶ್ನೆ. ಯಾಕಂದ್ರೆ, ಇಂಗ್ಲೆಂಡ್ ಎದುರಿನ 5 ಪಂದ್ಯಗಳ ಟಿ20 ಸರಣಿ ವೇಳಷ್ಟೇ ನೇಮಕವಾಗಿದ್ದಾರೆ. ದೇಶಿ ಕ್ರಿಕೆಟ್​​ನಲ್ಲಿ ಹೆಸರು ಮಾಡಿರುವ ಸೀತಾಂಶುಗೆ, ಇದು ಮೊದಲ ಟೆಸ್ಟ್ ಸವಾಲು. ಈ ಮೊದಲ ಟೆಸ್ಟ್​ನಲ್ಲೇ ಲೋವರ್ ಆರ್ಡರ್​ ಫೇಲ್ಯೂರ್​ ಆಗಿದೆ. ಹೀಗಾಗಿ ಮುಂದಾದ್ರು, ಇದು ಮರುಕಳಿಸದಂತೆ ನೋಡಿಕೊಳ್ಳಬೇಕಿದೆ.
ಟೆಸ್ಟ್ ಎಂಬ ರಿಯಲ್ ಕ್ರಿಕೆಟ್​ನಲ್ಲಿ ಮೈಯೆಲ್ಲಾ ಕಣ್ಣಾಗಿಸಬೇಕು. ಒಂದೊಂದು ಮೂಮೆಂಟ್ ಇಂಪಾರ್ಟೆಂಟ್, ಕ್ಷಣ ಕ್ಷಣಕ್ಕೂ ಗೇಮ್ ಪ್ಲಾನ್ ಆ್ಯಂಡ್ ಸ್ಟ್ರಾಟರ್ಜಿಸ್ ಮುಖ್ಯ. ಆದ್ರೆ, ಈ ವಿಚಾರದಲ್ಲಿ ಟೀಮ್ ಇಂಡಿಯಾ ಕೋಚಿಂಗ್ ಸ್ಟಾಫ್, ಪದೇ ಪದೇ ಎಡವುತ್ತಿರೋದು ಸುಳ್ಳಲ್ಲ.
ವಿಶೇಷ ಸೂಚನೆ: ಕ್ರಿಕೆಟ್‌ನ ಸುದ್ದಿಗಳಿಗಾಗಿ ಪ್ರತಿದಿನ ಬೆಳಗ್ಗೆ 8.30ಕ್ಕೆ ನ್ಯೂಸ್‌ಫಸ್ಟ್‌ಚಾನೆಲ್​​ನಲ್ಲಿ ‘ರನ್ ಭೂಮಿ’ ವೀಕ್ಷಿಸಿ